ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾಲಿವುಡ್‌ ನಟ ವಿಕ್ರಮ್‌ ಅಭಿನಯಿಸುತ್ತಿರುವ 62ನೇ ಸಿನಿಮಾ ಕುರಿತಾಗಿ ದೊಡ್ಡ ಅಪ್ಡೇಟ್‌ ಸಿಕ್ಕಿದೆ. ಸಿನಿಮಾದ ಟೈಟಲ್‌ ರಿವೀಲ್‌ ಮಾಡಲು ಚಿತ್ರತಂಡ ವಿಶೇಷ ಟೀಸರ್‌ ಅನ್ನೇ ಬಿಡುಗಡೆ ಮಾಡಿದೆ.

ತಮಿಳಿನ ವರ್ಸಟೈಲ್‌ ಆಕ್ಟರ್‌ ವಿಕ್ರಮ್‌ ತಮ್ಮ 62ನೇ ಸಿನಿಮಾ ಪ್ರಕಟಿಸಿದ್ದಾರೆ. ‘ಚಿತ್ತಾ’ ಖ್ಯಾತಿಯ ಎಸ್‌ಯು ಅರುಣ್ ಕುಮಾರ್ ನಿರ್ದೇಶಕನ ಜೊತೆ ವಿಕ್ರಮ್‌ ಈಗ ಕೆಲಸ ಮಾಡಲಿದ್ದಾರೆ. ನಿನ್ನೆ (ಏ 17) ವಿಕ್ರಮ್‌ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಸಿನಿಮಾದ ಟೈಟಲ್‌ ಪೋಸ್ಟರ್‌ ಜೊತೆ ನಟನ ಫಸ್ಟ್‌ ಲುಕ್‌ ರಿಲೀಸ್‌ ಮಾಡಲು ವಿಶೇಷ ಟೀಸರ್‌ ಬಿಡುಗಡೆ ಮಾಡಿದೆ. ಈ ಚಿತ್ರಕ್ಕೆ ‘ವೀರ ಧೀರ ಸೂರನ್’ ಎಂದು ಶೀರ್ಷಿಕೆ ನೀಡಲಾಗಿದ್ದು, ವಿಕ್ರಮ ಸಖತ್‌ Raw Lookನಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ನಲ್ಲಿ ಕಿರಾಣಿ ಅಂಗಡಿ ಮುಂದೆ ಮಾರಕಾಸ್ತ್ರಗಳನ್ನ ಹಿಡಿದು ಬಂದು ನಿಲ್ಲುವ ಒಂದು ಗ್ಯಾಂಗ್‌ ನಾಯಕನನ್ನು ಟಾರ್ಗೆಟ್‌ ಮಾಡಿ ಸುತ್ತುವರಿದು ನಿಲ್ಲುತ್ತೆ. ಕಿರಾಣಿ ಅಂಗಡಿಯಲ್ಲಿರುವ ನಾಯಕ ಎದುರಾಳಿ ಗುಂಪಿನವರಿಗೆ ಈ ಹಿಂದೆಯೇ ಯಾವುದೋ ಕಾರಣಕ್ಕೆ ಬಿಸಿ ಮುಟ್ಟಿಸಿರುವುದು ಟೀಸರ್‌ನಲ್ಲಿ ಗೊತ್ತಾಗುತ್ತದೆ. ನಾಯಕನ ಎಂಟ್ರಿ ತೋರಿಸುವ ದೃಶ್ಯ ಸಿಂಪಲ್ಲಾಗಿದ್ದರೂ ಆಕರ್ಷಕವಾಗಿದೆ. ಈ ಸಿನಿಮಾದಲ್ಲಿ ವಿಕ್ರಮ್‌, ‘ಕಾಳಿ’ ಎಂಬ ಹೆಸರಿನ ಪಾತ್ರಕ್ಕೆ ಜೀವತುಂಬಲಿದ್ದಾರೆ. ಶಾರ್ಟ್‌ಗನ್‌ ಹಿಡಿದು ನಿಲ್ಲುವ ನಾಯಕ ಕಾಳಿಯ ಹಿಂದೆ ಒಂದು ಕಥೆ ಇದೆ ಅನ್ನೋದು ತಿಳಿಯುತ್ತೆ.

ಟೀಸರ್‌ ನೋಡಿದ್ರೆ ಸಿನಿಮಾದ ಕಥೆ ಬಗ್ಗೆ ಕುತೂಹಲ ಹುಟ್ಟೋದಂತೂ ಸತ್ಯ. ಚಿಯಾನ್‌ ವಿಕ್ರಮ ಜತೆಗೆ ಈ ಸಿನಿಮಾದಲ್ಲೊ ಎಸ್‌ಜೆ ಸೂರ್ಯ, ಸೂರಜ್ ವೆಂಜರಮೂಡು ಮತ್ತು ದಸರಾ ವಿಜಯನ್ ಅವರೂ ಪ್ರಮುಖಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ನಟ ಸೂರಜ್‌ಗೆ ಇದು ಚೊಚ್ಚಲ ತಮಿಳು ಚಿತ್ರ. ವಿಕ್ರಮ್‌ ಹುಟ್ಟುಹಬ್ಬಕ್ಕೆ ‘ತಂಗಲಾನ್‌’ ಚಿತ್ರತಂಡ ಒಂದು ಬಿಹೈಂಡ್ಸ್‌ ದ ಸೀನ್ಸ್‌ನ ಪುಟ್ಟ ವಿಡಿಯೋ ತುಣುಕನ್ನು ಹಂಚಿಕೊಂಡಿತ್ತು. ಆದರೆ ಈ ಸಿನಿಮಾ ರಿಲೀಸ್‌ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

LEAVE A REPLY

Connect with

Please enter your comment!
Please enter your name here