ನೆಲ್ಸನ್‌ ದಿಲೀಪ್‌ಕುಮಾರ್‌ ನಿರ್ದೇಶನದಲ್ಲಿ ವಿಜಯ್‌ ನಟನೆಯ ‘ಬೀಸ್ಟ್‌’ ತಮಿಳು ಸಿನಿಮಾ ಏಪ್ರಿಲ್‌ 13ರಂದು ತೆರೆಕಾಣಲಿದೆ. ಮರುದಿನ ಏಪ್ರಿಲ್‌ 14ರಂದು ಯಶ್‌ ‘KGF2’ ಸಿನಿಮಾ ರಿಲೀಸ್‌ ಆಗಲಿದ್ದು, ಇವೆರೆಡೂ ಚಿತ್ರಗಳ ಮಧ್ಯೆ ಪೈಪೋಟಿ ಏರ್ಪಡಲಿದೆ.

ಸನ್‌ ಪಿಕ್ಚರ್ಸ್‌ ಇಂದು ‘ಬೀಸ್ಟ್‌’ ತಮಿಳು ಸಿನಿಮಾ ರಿಲೀಸ್‌ ಡೇಟ್‌ ಘೋಷಿಸಿದೆ. ವಿಜಯ್‌ ಮತ್ತು ಪೂಜಾ ಹೆಗ್ಡೆ ನಟನೆಯ ಸಿನಿಮಾ ಏಪ್ರಿಲ್‌ 13ರಂದು ತೆರೆಕಾಣಲಿದೆ. ಮರುದಿನವೇ ಬಹುನಿರೀಕ್ಷಿತ ‘KGF2’ ತೆರೆಕಾಣಲಿದ್ದು, ಎರಡು ದೊಡ್ಡ ಚಿತ್ರಗಳು ಮುಖಾಮುಖಿಯಾಗಲಿವೆ. ರಿಲೀಸ್‌ ಡೇಟ್‌ ಘೋಷಣೆಯೊಂದಿಗೆ ‘ಬೀಸ್ಟ್‌’ ಚಿತ್ರತಂಡ ಹೀರೋ ವಿಜಯ್‌ ಇರುವ ನೂತನ ಪೋಸ್ಟರ್‌ ಬಿಡುಗಡೆಗೊಳಿಸಿದೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಸಿನಿಮಾ ಆರಂಭದಿಂದಲೂ ಸುದ್ದಿಯಲ್ಲಿದೆ. ಅನಿರುದ್ಧ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. Arebic Kuthu ಇಂಟರ್‌ನೆಟ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದರೆ, ಪಾರ್ಟಿ ಸಾಂಗ್‌ Jolly O Gymkhana ಕೂಡ ಸಿನಿಪ್ರಿಯರಿಗೆ ಇಷ್ಟವಾಗಿದೆ. ಮತ್ತೊಂದೆಡೆ ‘KGF2’ ಕೂಡ ಪ್ರೊಮೋಷನ್‌ ಶುರುಮಾಡಿದ್ದು, ನಿನ್ನೆ ಚಿತ್ರದ ಮೊದಲ ಹಾಡು ರಿಲೀಸ್‌ ಆಗಿದೆ.

Previous articleಟ್ರೈಲರ್‌ | ಉಪೇಂದ್ರ ‘ಹೋಮ್‌ ಮಿನಿಸ್ಟರ್‌’ ಏಪ್ರಿಲ್‌ 1ರಂದು ತೆರೆಗೆ
Next article‘ಗೋಲ್ಡ್‌’ ಟೀಸರ್‌ | ಪೃಥ್ವಿರಾಜ್‌ – ನಯನತಾರಾ ಮಲಯಾಳಂ ಸಿನಿಮಾ

LEAVE A REPLY

Connect withPlease enter your comment!
Please enter your name here