ಪೃಥ್ವಿರಾಜ್‌ ಮತ್ತು ನಯನತಾರಾ ನಟಿಸಿರುವ ‘ಗೋಲ್ಡ್‌’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ಪ್ರೇಮಂ’ ಖ್ಯಾತಿಯ ನಿರ್ದೇಶಕ ಆಲ್ಫನ್ಸ್‌ ಪುತ್ರನ್‌ ಏಳು ವರ್ಷದ ನಂತರ ಈ ಚಿತ್ರದೊಂದಿಗೆ ಮರಳಿದ್ದಾರೆ.

ನಿವಿಲ್‌ ಪೌಲಿ ನಟನೆಯ ಸೂಪರ್‌ ಹಿಟ್‌ ‘ಪ್ರೇಮಂ’ ಸಿನಿಮಾ ನಿರ್ದೇಶಿಸಿದ್ದ ಆಲ್ಫನ್ಸ್‌ ಪುತ್ರನ್‌ ಏಳು ವರ್ಷಗಳ ನಂತರ ‘ಗೋಲ್ಡ್’‌ ಚಿತ್ರದೊಂದಿಗೆ ಮರಳಿದ್ದಾರೆ. ಪೃಥ್ವಿರಾಜ್‌ ಮತ್ತು ನಯನತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ದಟ್ಟ ಕತ್ತಲೆಯಲ್ಲಿ ಏನೋ ಕಳ್ಳಸಾಗಾಣಿಕೆ ನಡೆಸುತ್ತಿರುವ ಮೂರ್ನಾಲ್ಕು ವ್ಯಕ್ತಿಗಳನ್ನು ಪೃಥ್ವಿರಾಜ್‌ ಅಡ್ಡಗಟ್ಟುವ ಸನ್ನಿವೇಶಗೊಂದಿಗೆ ಟೀಸರ್‌ ಓಪನ್‌ ಆಗುತ್ತದೆ. ಆ ಗ್ಯಾಂಗ್‌ನತ್ತ ಕೂಗು ಹಾಕುವ ಪೃಥ್ವಿರಾಜ್‌ ಅವರ ಬಳಿ ಬರುವ ಸ್ಲೋ ಮೋಷನ್‌ ದೃಶ್ಯ, ಹಿನ್ನೆಲೆಯಲ್ಲಿ ಕೇಳಿಬರುವ ವಿಶಿಷ್ಟ ಹಿನ್ನೆಲೆ ಸಂಗೀತ ನಿರ್ದೇಶಕ ಆಲ್ಫನ್ಸ್‌ ಪುತ್ರೆನ್‌ ಟ್ರೇಡ್‌ಮಾರ್ಕ್‌ ಶೈಲಿ. ಮತ್ತೊಂದು ದೃಶ್ಯದಲ್ಲಿ ಪಾಪ್‌ಕಾರ್ನ್‌ ತಿನ್ನುವ ನಯನತಾರಾ ಕ್ಯಾಮೆರಾದೆಡೆ ತುಂಟ ನಗೆ ಬೀರುತ್ತಾರೆ. ಅವರ ಪಾತ್ರವೇನು? ಎನ್ನುವ ಬಗ್ಗೆ ನಿರ್ದೇಶಕರು ಸುಳಿವು ಬಿಟ್ಟುಕೊಟ್ಟಿಲ್ಲ. ‘ಗೋಲ್ಡ್‌’ ತೆರೆಗೆ ಸಿದ್ಧವಾಗುತ್ತಿದ್ದು, ರಿಲೀಸ್‌ ಡೇಟ್‌ ಇನ್ನೂ ಘೋಷಣೆಯಾಗಿಲ್ಲ. ಇನ್ನು ಏಪ್ರಿಲ್‌ನಲ್ಲಿ ಪೃಥ್ವಿರಾಜ್‌ ನಟನೆಯ ‘ಜನಗಣಮನ’ ತೆರೆಕಾಣಲಿದೆ. ಏಪ್ರಿಲ್‌ 28ರಂದು ನಯನತಾರಾ ನಟನೆಯ ‘ಕಾಥು ವಾಕುಲ ರೆಂಡು ಕಾಧಲ್‌’ ಬಿಡುಗಡೆಯಾಗಲಿದೆ.

Previous article‘KGF2’ ಜೊತೆ ಬಾಕ್ಸ್‌ ಆಫೀಸ್‌ನಲ್ಲಿ ಮುಖಾಮುಖಿಯಾಗಲಿರುವ ವಿಜಯ್‌ ‘ಬೀಸ್ಟ್‌’
Next article‘ಕಂಬ್ಳಿಹುಳ’ ಸಾಂಗ್ ಝಲಕ್; ಹೊಸಬರ ಪ್ರಯತ್ನಕ್ಕೆ ಶ್ರೀಮುರುಳಿ ಸಾಥ್‌

LEAVE A REPLY

Connect with

Please enter your comment!
Please enter your name here