ಉಪೇಂದ್ರ ಮತ್ತು ವೇದಿಕಾ ಅಭಿನಯದ ‘ಹೋಮ್‌ ಮಿನಿಸ್ಟರ್‌’ ಸಿನಿಮಾ ಆಡಿಯೋ ಮತ್ತು ಟ್ರೈಲರ್‌ ಬಿಡುಗಡೆಯಾಗಿದೆ. ಸುಜಯ್‌ ಕೆ. ಶ್ರೀಹರಿ ನಿರ್ದೇಶನದ ಸಿನಿಮಾ ಏಪ್ರಿಲ್‌ 1ರಂದು ತೆರೆಕಾಣಲಿದೆ.

“ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾಗುತ್ತಿದೆ. ಮತ್ತೊಂದು ಕಡೆಯಿಂದ ಭಯ. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ? ಎಂದು. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು, ಈ ಸಿನಿಮಾ ಮಾಡೋಣ ಸರ್. ಎಲ್ಲರಿಗೂ ಹಿಡಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆಯಿ” ಎಂದರು ಉಪೇಂದ್ರ. ಅವರು ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ‘ಹೋಮ್‌ ಮಿನಿಸ್ಟರ್‌’ ಸಿನಿಮಾ ಏಪ್ರಿಲ್‌ 1ರಂದು ತೆರೆಕಾಣಲಿದೆ.

ಆನಂದ್‌ ಆಡಿಯೋ ಮೂಲಕ ‘ಹೋಮ್‌ ಮಿನಿಸ್ಟರ್‌’ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಚಿವ ಮುನಿರತ್ನ, ನಟರಾದ ಗಣೇಶ್, ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಸಾಯಿ ಗೋಲ್ಡ್ ‌ಪ್ಯಾಲೆಸ್ ನ ಶರವಣ ಸೇರಿದಂತೆ ಅನೇಕರು ಹಾಜರಿದ್ದು ಶುಭ ಹಾರೈಸಿದರು. ಜಿಬ್ರಾನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Previous article‘ಶಂಭೋ ಶಿವ ಶಂಕರ’ ಆಡಿಯೋ ರಿಲೀಸ್‌; ಸಿನಿಮಾ ಶೀಘ್ರ ತೆರೆಗೆ
Next article‘KGF2’ ಜೊತೆ ಬಾಕ್ಸ್‌ ಆಫೀಸ್‌ನಲ್ಲಿ ಮುಖಾಮುಖಿಯಾಗಲಿರುವ ವಿಜಯ್‌ ‘ಬೀಸ್ಟ್‌’

LEAVE A REPLY

Connect with

Please enter your comment!
Please enter your name here