ಶಿವ ನಿರ್ವಾಣ ರಚಿಸಿ, ನಿರ್ದೇಶಿಸಿರುವ ‘ಖುಷಿ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಜಯ್‌ ದೇವರಕೊಂಡ ಮತ್ತು ಸಮಂತಾ ಅಭಿನಯದ ಸಿನಿಮಾ ಸೆಪ್ಟೆಂಬರ್‌ 1ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ವಿಜಯ್ ದೇವರಕೊಂಡ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಖುಷಿ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಶಿವ ನಿರ್ವಾಣ ರಚಿಸಿ, ನಿರ್ದೇಶಿಸಿರುವ ಚಿತ್ರವಿದು. ಅವರೇ ಸಿನಿಮಾಗೆ ಗೀತೆಗಳನ್ನು ರಚಿಸಿದ್ದಾರೆ. ಟ್ರೈಲರ್‌ ಕಾಶ್ಮೀರದ ಸುಂದರ ದೃಶ್ಯಗಳಿಂದ ತೆರೆದುಕೊಳ್ಳುತ್ತದೆ. ವಿಪ್ಲವ್ (ವಿಜಯ್‌ ದೇವರಕೊಂಡ) ಸಮಂತಾಳನ್ನು ಕಾಶ್ಮೀರದಲ್ಲಿ ಮೊದಲ ಬಾರಿಗೆ ನೋಡಿದ ತಕ್ಷಣವೇ ಸ್ಥಳೀಯಳು ಎಂದುಕೊಳ್ಳುತ್ತಾನೆ. ಆಕೆಯ ಮೇಲೆ ‘ಲವ್‌ ಅಟ್‌ ಫಸ್ಟ್‌ ಸೈಟ್’ ಅಗುತ್ತದೆ. ಅವಳನ್ನು ಬೇಗಂ ಎಂದು ತಿಳಿದ ವಿಜಯ್‌ ಅವಳನ್ನು ಪ್ರೀತಿಸುತ್ತಾನೆ. ಆದರೆ ಅವಳು ಕೇರಳ ಮೂಲ ಬ್ರಾಹಣ ಕುಟುಂಬಕ್ಕೆ ಸೇರಿದ ಆರಾಧ್ಯ ಹೆಸರಿನ ಹುಡುಗಿ ಎಂದು ತಿಳಿಯುತ್ತದೆ.

ಇಬ್ಬರದ್ದು ಬೇರೆ ಬೇರೆ ಧರ್ಮವಾದ್ದರಿಂದ ಇವರಿಬ್ಬರ ಮದುವೆಗೆ ಕುಟುಂಬಗಳಿಂದ ಸಮ್ಮತಿ ಸಿಗುವುದಿಲ್ಲ. ಇಬ್ಬರ ಪರಿವಾರದ ಸಮ್ಮತಿ ಇಲ್ಲದೇ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿ ಕೆಲವು ದಿನ ಅನ್ನೋನ್ಯವಾಗಿದ್ದ ಇವರು ನಂತರದ ದಿನಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲದೇ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡುತ್ತಿರುತ್ತಾರೆ. ಪ್ರೀತಿ, ಜಗಳ, ರೊಮ್ಯಾನ್ಸ್‌ ಈ ಎಲ್ಲಾ ಅಂಶಗಳನ್ನು ಟ್ರೈಲರ್ ಒಳಗೊಂಡಿದೆ. ಚಿತ್ರವನ್ನು Mythri Movie Makers ಬ್ಯಾನರ್‌ನಡಿ ರವಿ ಶಂಕರ್ ಮತ್ತು ನವೀನ್ ಯೆರ್ನೇನಿ ನಿರ್ಮಿಸಿದ್ದಾರೆ. ಹೇಶಮ್‌ ಅಬ್ದುಲ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಜಯರಾಮ್, ಸಚಿನ್ ಖೇಡ್ಕರ್‌, ಮುರಳಿ ಶರ್ಮಾ, ಬೇಬಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಪ್ರದೀಪ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸೆಪ್ಟೆಂಬರ್‌ 1ರಂದು ಸಿನಿಮಾ ತೆರೆಕಾಣಲಿದೆ.

Previous articleನೆಗೆಟೀವ್‌ ಶೇಡ್‌ನಲ್ಲಿ ಮಮ್ಮೂಟಿ | ಅರ್ಜುನ್ ಅಶೋಕನ್ ಹಾರರ್ ಥ್ರಿಲ್ಲರ್ ಸಿನಿಮಾ
Next articleಟ್ವಿಸ್ಟ್ ಟರ್ನ್‌ಗಳ ರೋಚಕ ಪಯಣ, ಕ್ರೈಂ ಡ್ರಾಮಾ ‘ದಯಾ’

LEAVE A REPLY

Connect with

Please enter your comment!
Please enter your name here