ಜನಪ್ರಿಯ ಅಮೆರಿಕನ್‌ ವೆಬ್‌ ಸರಣಿ ‘Ray Deonovan’ ತೆಲುಗು ಅವತರಣಿಕೆ ‘ರಾಣಾ ನಾಯ್ಡು’ ಶೂಟಿಂಗ್‌ ಪೂರ್ಣಗೊಂಡಿದೆ. ಈ ಸರಣಿ ಮೂಲಕ ನಟರಾದ ವೆಂಕಟೇಶ್‌ ಮತ್ತು ರಾಣಾ ದಗ್ಗುಬಾಟಿ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಕರಣ್‌ ಅನ್ಶುಮಾನ್‌ ಮತ್ತು ಸುಪರ್ಣಾ ಎಸ್‌. ವರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ರಾಣಾ ನಾಯ್ಡು’ ಸರಣಿ ಚಿತ್ರೀಕರಣ ಪೂರ್ಣಗೊಂಡಿದೆ. ”IT’S A WRAP ON THE SETS OF RANA NAIDU AND WE’RE ONE STEP CLOSER TO SEEING OUR FAVES ON SCREEN.” ಎನ್ನುವ ಸಂದೇಶದೊಂದಿಗೆ ನೆಟ್‌ಫ್ಲಿಕ್ಸ್‌ ಈ ಸುದ್ದಿ ಹಂಚಿಕೊಂಡಿದೆ. ಜನಪ್ರಿಯ ಅಮೆರಿಕನ್‌ ಸರಣಿ ‘Ray Donovan’ ತೆಲುಗು ಅವತರಣಿಕೆ ಇದು. ಈ ಸರಣಿಯೊಂದಿಗೆ ನಟರಾದ ವೆಂಕಟೇಶ್‌ ಮತ್ತು ರಾಣಾ ದಗ್ಗುಬಾಟಿ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಸುಶಾಂತ್‌ ಸಿಂಗ್‌, ಸುಚಿತ್ರಾ ಪಿಳ್ಳೈ, ಸುರ್ವೀನ್‌ ಚಾಬ್ಲಾ, ಅಭಿಷೇಕ್‌ ಬ್ಯಾನರ್ಜಿ, ಆಶಿಷ್‌ ವಿದ್ಯಾರ್ಥಿ, ಗೌರವ್‌ ಚೋಪ್ರಾ ನಟಿಸಿದ್ದಾರೆ. ಸರಣಿ ಬಗ್ಗೆ ಮಾತನಾಡಿರುವ ವೆಂಕಟೇಶ್‌, “ಈ ಪ್ರಾಜೆಕ್ಟ್‌ ಒಂಥರಾ Crazy ಆಗಿರಲಿದೆ. 35 ವರ್ಷಗಳ ನನ್ನ ವೃತ್ತಿಬದುಕಿನಲ್ಲೇ ಇದು ಭಿನ್ನವಾದ ಪಾತ್ರ” ಎಂದಿದ್ದಾರೆ. ಮೊನ್ನೆಯಷ್ಟೇ ಅವರ ‘F3’ ಸಿನಿಮಾ ತೆರೆಕಂಡಿದ್ದು, ಮೈತ್ರಿ ಮೂವೀ ಮೇಕರ್ಸ್‌ ಮತ್ತು ಸಿತಾರಾ ಎಂಟರ್‌ಟೇನ್‌ಮೆಂಟ್ಸ್‌ನ ಎರಡು ಸಿನಿಮಾಗಳಲ್ಲಿ ಅವರು ಸದ್ಯ ತೊಡಗಿಸಿಕೊಂಡಿದ್ದಾರೆ. ಇನ್ನು ರಾಣಾ ಅವರು ‘ವಿರಾಟಪರ್ವಂ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

Previous article‘ಲಾಲ್‌ ಸಿಂಗ್‌ ಛಡ್ಡಾ’ ಟ್ರೈಲರ್‌; ಅಮೀರ್‌ ಸಿನಿಮಾ ಆಗಸ್ಟ್‌ 11 ಕ್ಕೆ
Next articleಸೈಕೋ ಥ್ರಿಲ್ಲರ್ ‘ಮೇನಿಯಾ’ ಟೀಸರ್‌; ಸ್ವಸ್ತಿಕ್‌ ಆರ್ಯ ಸಿನಿಮಾ

LEAVE A REPLY

Connect with

Please enter your comment!
Please enter your name here