ಅರ್ಜುನ್‌ ಅಶೋಕನ್‌ ಹೀರೋ ಆಗಿ ನಟಿಸಲಿರುವ ನೂತನ ಹಾರರ್‌ – ಥ್ರಿಲ್ಲರ್‌ ಚಿತ್ರದ ಖಳಪಾತ್ರದಲ್ಲಿ ಮಮ್ಮೂಟಿ ನಟಿಸಲಿದ್ದಾರೆ. ‘ರೆಡ್‌ ರೈನ್‌’, ‘ಭೂತಕಾಲಂ’ ಸಿನಿಮಾಗಳಲ್ಲಿ ಗಮನಸೆಳೆದಿದ್ದ ರಾಹುಲ್‌ ಸದಾಶಿವನ್‌ ನಿರ್ದೇಶಿಸಲಿರುವ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

ರಾಹುಲ್ ಸದಾಶಿವನ್ ನಿರ್ದೇಶನದ ಹಾರರ್ – ಥ್ರಿಲ್ಲರ್ ಚಿತ್ರದಲ್ಲಿ ಅರ್ಜುನ್ ಅಶೋಕನ್ ನಾಯಕನಾಗಿ ನಟಿಸಲಿದ್ದು, ಚಿತ್ರದ ಖಳ ಪಾತ್ರದಲ್ಲಿ ಮಮ್ಮೂಟಿ ನಟಿಸಲಿದ್ದಾರೆ. ‘ರೆಡ್ ರೈನ್’ ಮತ್ತು ‘ಭೂತಕಾಲಂ’ ಚಿತ್ರಗಳಿಂದ ಜನಪ್ರಿಯತೆ ಗಳಿಸಿದ್ದ ರಾಹುಲ್ ಸದಾಶಿವನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದ ಚಿತ್ರೀಕರಣ ಆಗಸ್ಟ್ 15ರಿಂದ ನಡೆಯಲಿದೆ. ‘ವಿಕ್ರಮ್ ವೇದಾ’, ‘ಸಾಲಾ ಖಾಡೂಸ್’ ಮತ್ತು ‘ಮಂಡೇಲಾ’ ಮುಂತಾದ ಚಲನಚಿತ್ರಗಳನ್ನು ನಿರ್ಮಿಸಿರುವ YNOT ಸ್ಟುಡಿಯೋಸ್ ನಿರ್ಮಾಣದ ಚಿತ್ರವಿದು. ಉಳಿದ ತಾರಾಗಣ ಮತ್ತು ಸಿಬ್ಬಂದಿಯ ವಿವರಗಳನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸಲಿದೆ. ವರದಿಗಳ ಪ್ರಕಾರ, ನಟ ಮಮ್ಮೂಟಿ 30 ದಿನಗಳನ್ನು, ನಟ ಅರ್ಜುನ್ 60 ದಿನಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರಂತೆ.

ಅರ್ಜುನ್ ಈ ಹಿಂದೆ ನಿರ್ದೇಶಕ ಖಾಲಿದ್ ರೆಹಮಾನ್ ಅವರ ‘ಉಂಡಾ’ ಚಿತ್ರದಲ್ಲಿ ಮಮ್ಮೂಟಿ ಜೊತೆಗೆ ಕೆಲಸ ಮಾಡಿದ್ದರು. ನಟ ಮಮ್ಮೂಟಿ ಅವರು ‘ಪಲೇರಿ ಮಾಣಿಕ್ಯಂ’, ‘ಒರು ಪತಿರಕೋಲಪಥಕತಿಂತೆ ಕಧಾ’, ‘ವಿಧೇಯನ್’, ಮತ್ತು ಇತ್ತೀಚಿನ ಚಿತ್ರಗಳಾದ ‘ಪುಳು’ ಮತ್ತು ‘ರೋರ್ಷಾಚ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳಛಾಯೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ನಟ ಮಮ್ಮೂಟಿ ಮುಂಬರುವ ಚಿತ್ರಗಳ ಪಟ್ಟಿಯಲ್ಲಿ ‘ಕಣ್ಣೂರು ಸ್ಕ್ವಾಡ್’, ‘ಕಡುಗನ್ನವ ಒರು ಯಾತ್ರೆ’ ಚಿತ್ರಗಳಿವೆ. Jeo Baby ನಿರ್ದೇಶನದ ‘ಕಾದಲ್-ದಿ-ಕೋರ್’ ಚಿತ್ರದಲ್ಲಿ ನಟಿ ಜ್ಯೋತಿಕಾ ಅವರೊಂದಿಗೂ ನಟಿಸುತ್ತಿದ್ದಾರೆ.

Previous articleರಜನಿ ‘ಜೈಲರ್‌’ ಸಿನಿಮಾ ರಿಲೀಸ್‌ ಕ್ರೇಝ್‌ | ರಜೆ ಘೋಷಿಸಿದ ಕೆಲವು ಖಾಸಗಿ ಕಂಪನಿಗಳು
Next article‘ಖುಷಿ’ ಟ್ರೈಲರ್‌ | ವಿಜಯ್‌ ದೇವರಕೊಂಡ – ಸಮಂತಾ ತೆಲುಗು ಸಿನಿಮಾ ಸೆಪ್ಟೆಂಬರ್‌ 1ಕ್ಕೆ

LEAVE A REPLY

Connect with

Please enter your comment!
Please enter your name here