ಸುದೀಪ್‌ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್‌ ರೋಣ’ 3D ಸಿನಿಮಾದ ಮೊದಲ ಲಿರಿಕಲ್‌ ವೀಡಿಯೋ ‘ಗಡಂಗ್‌ ರಕ್ಕಮ್ಮ’ ಬಿಡುಗಡೆಯಾಗಿದೆ. ಅಜನೀಶ್‌ ಲೋಕನಾಥ್‌ ಸಂಗೀತದ ಹಾಡಿಗೆ ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದ್ದಾರೆ.

ಪ್ಯಾನ್‌ ಇಂಡಿಯಾ ಸಿನಿಮಾಗಳ ಪೈಕಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳ ಪಟ್ಟಿಯಲ್ಲಿ ಸುದೀಪ್‌ರ ‘ವಿಕ್ರಾಂತ್‌ ರೋಣ’ ಚಿತ್ರ ಮುಂಚೂಣಿಯಲ್ಲಿದೆ. ಇಂದು ಈ ಸಿನಿಮಾದ ಲಿರಿಕಲ್‌ ವೀಡಿಯೋ ‘ಗಡಂಗ್‌ ರಕ್ಕಮ್ಮ’ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ ಅವರೇ ರಚಿಸಿರುವ ಈ ಹಾಡಿಗೆ ಅಜನೀಶ್‌ ಸಂಗೀತ ಸಂಯೋಜಿಸಿದ್ದಾರೆ. ನಕಾಶ್‌ ಅಝೀಜ್‌ ಮತ್ತು ಸುನಿಧಿ ಚೌವ್ಹಾಣ್‌ ಹಾಡಿರುವ ವಿಶೇಷ ಹಾಡಿಗೆ ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದ್ದಾರೆ. ‘KGF’ ಸಿನಿಮಾ ಖ್ಯಾತಿಯ ಶಿವಕುಮಾರ್‌ ಹಾಕಿರುವ ಆಕರ್ಷಕ ಸೆಟ್‌, ವಿಲಿಯಂ ಡೇವಿಡ್‌ ಸಿನಿಮಾಟೊಗ್ರಫಿ ಮತ್ತು ಜಾನಿ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ ‘ಗಡಂಗ್‌ ರಕ್ಕಮ್ಮ’ ಹಾಡು ಕಲರ್‌ಫುಲ್‌ ಆಗಿದೆ. ಹಾಡಿನ ಮೇಕಿಂಗ್‌ ಗ್ಲಿಮ್ಸಸ್‌ ಕೂಡ ಇವೆ.

ಪ್ರತಿ ದಿನ ಒಂದೊಂದು ಭಾಷೆಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಲು ಯೋಜಿಸಿರುವುದು ವಿಶೇಷ. ಇಂದು ಕನ್ನಡ ವರ್ಷನ್‌ ಬಿಡುಗಡೆಯಾಗಿದೆ. ನಾಳೆ ಮೇ 24ರಂದು ಹಿಂದಿ, 25ರಂದು ತೆಲುಗು, 26ಕ್ಕೆ ತಮಿಳು ಮತ್ತು 27ರಂದು ಮಲಯಾಳಂ ವರ್ಷನ್‌ ಬಿಡುಗಡೆಯಾಗಲಿದೆ. ತೆಲುಗು ವರ್ಷನ್‌ಗೆ ಜನಪ್ರಿಯ ಗಾಯಕಿ ಮಂಗ್ಲಿ ದನಿಯಾಗಿದ್ದಾರೆ. ಹಾಡಿದ್ದಾರೆ. “ಅಭಿಮಾನಿಗಳಿಗಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಮೊದಲ ಹಾಡು ಇದು. ಈ ಹಾಡಿನ ಸಂಭ್ರಮ ಒಂದೇ ದಿನಕ್ಕೆ ಮುಗಿಯಬಾರದು. ಹಾಗಾಗಿ ದಿನವೂ ಒಂದೊಂದು ಭಾಷೆಯಲ್ಲಿ ಹಾಡನ್ನು ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಿದೆವು. ಅಲ್ಲದೆ ಈ ಯೋಜನೆಯಿಂದ ಹಾಡಿನ ರೀಚ್ ಕೂಡ ಹೆಚ್ಚಲಿದೆ” ಎನ್ನುತ್ತಾರೆ ಚಿತ್ರದ ನಿರ್ಮಾಪಕ ಜಾಕ್‌ ಮಂಜು. ‘ವಿಕ್ರಾಂತ್‌ ರೋಣ’ ಜುಲೈ 28ರಂದು ಬಿಡುಗಡೆಯಾಗಲಿದೆ. ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here