ನಿವಿನ್‌ ಪೌಲಿ ನಟನೆಯ ಪೀರಿಯಡ್‌ ಪೊಲಿಟಿಕಲ್‌ – ಥ್ರಿಲ್ಲರ್‌ ಸಿನಿಮಾ ‘ಥೂರಮುಖಂ’ ಟ್ರೈಲರ್‌ ಬಿಡುಗಡೆಯಾಗಿದೆ. ಕೇರಳದ ‘ಛಪ್ಪಾ’ ಪದ್ಧತಿ ಆಧರಿಸಿದ ಕತೆಯಿದು. ಕೆ.ಎಂ.ಚಿದಂಬರಂ ಅವರ ನಾಟಕವನ್ನು ಅವರ ಪುತ್ರ ಗೋಪನ್‌ ಚಿದಂಬರಂ ಸಿನಿಮಾಗೆ ಚಿತ್ರಕಥೆ ಮಾಡಿದ್ದಾರೆ.

ಪ್ರತಿಭಾವಂತ ನಟ ನಿವಿನ್‌ ಪೌಲಿ ಅಭಿನಯದ ‘ಥೂರಮುಖಂ’ ಮಲಯಾಳಂ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ‘ಥೂರಮುಖಂ’ ಎಂದರೆ ‘ಬಂದರು’. ಕೇರಳದ ರಾಜಕೀಯ ಇತಿಹಾಸದಲ್ಲಿ ದಾಖಲಾಗಿರುವ ‘ಛಪ್ಪಾ’ ಪದ್ಧತಿ ಆಧರಿಸಿದ ಕತೆಯಿದು. ಕೆ.ಎಂ.ಚಿದಂಬರಂ ಅವರ ರಚನೆಯ ನಾಟಕವನ್ನು ಅದೇ ಶೀರ್ಷಿಕೆಯಡಿ ಅವರ ಪುತ್ರ ಗೋಪನ್‌ ಚಿತ್ರಕಥೆ ಮಾಡಿದ್ದಾರೆ. ಮೂಲತಃ ಛಾಯಾಗ್ರಾಹಕರಾದ ರಾಜೀವ್‌ ರವಿ ಚಿತ್ರದ ನಿರ್ದೇಶಕರು. ಟ್ರೈಲರ್‌ ನೋಡಿದರೆ ಇದು ಮಾಮೂಲಿ ಮೇನ್‌ಸ್ಟ್ರೀಮ್‌ ಸಿನಿಮಾದಂತೆ ಇರುವುದಿಲ್ಲ ಎನ್ನುವುದು ತಿಳಿದುಬರುತ್ತದೆ. ಊಳಿಗಮಾನ್ಯ ಕಾಲದ ‘ಛಪ್ಪರ್‌’ ಪದ್ಧತಿ ಹಿನ್ನೆಲೆಯಲ್ಲಿ ಹೆಣೆದ ಕತೆ. ಕೂಲಿ ಕೆಲಸಕ್ಕಾಗಿ ಎದುರು ನೋಡುತ್ತಿರುವ ಜನರೆಡೆಗೆ ಜಮೀನ್ದಾರರು ತಾಮ್ರದ ನಾಣ್ಯಗಳನ್ನು ಎಸೆಯುತ್ತಿದ್ದರು. ಅವರಲ್ಲಿ ಯಾರು ತಾಮ್ರದ ನಾಣ್ಯವನ್ನು ಆಯ್ದುಕೊಳ್ಳುತ್ತಾರೋ ಅವರಿಗೆ ಕೆಲಸ ನೀಡುತ್ತಿದ್ದರು. ಈ ದುಷ್ಟ ಪದ್ಧತಿ, ಈ ವ್ಯವಸ್ಥೆ ವಿರುದ್ಧ ಸಿಡುದೇಳುವ ಸನ್ನಿವೇಶಗಳು ಟ್ರೈಲರ್‌ನಲ್ಲಿ ಕಾಣಿಸುತ್ತವೆ. ಜೋಜು ಜಾರ್ಜ್‌, ಸುದೇವ್‌ ನಾಯರ್‌, ಮಣಿಕಂಠನ್‌, ಅರ್ಜುನ್‌ ಅಶೋಕನ್‌, ನಿಮಿಷಾ ಸಜಯನ್‌ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್‌ 3ರಂದು ಸಿನಿಮಾ ತೆರೆಕಾಣಲಿದೆ.

Previous article‘ಗಡಂಗ್‌ ರಕ್ಕಮ್ಮ’ ಲಿರಿಕಲ್‌ ವೀಡಿಯೋ; ಜುಲೈ 28ಕ್ಕೆ ‘ವಿಕ್ರಾಂತ್‌ ರೋಣ’
Next articleಅದಿತಿ ‘ಅಲೆಕ್ಸಾ’ಗೆ ಕ್ಲೈಮ್ಯಾಕ್ಸ್‌; ಜೀವಾ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here