ವಿಶ್ವಕ್‌ ಸೇನ್‌ ಸಿನಿಜೀವನ ಆರಂಭಿಸಿದ ದಿನಗಳಲ್ಲಿ ಸಹಿ ಮಾಡಿದ್ದ ಸಿನಿಮಾ ‘ಗಾಮಿ’. ಕೆಲ ವರ್ಷಗಳ ಕಾಲ ಚಿತ್ರೀಕರಣದ ಹಂತದಲ್ಲೇ ಇದ್ದ ಈ ಚಿತ್ರ ಕಡೆಗೂ ಕಳೆದ ಮಾರ್ಚ್‌ 8ರಂದು ತೆರೆಕಂಡಿತ್ತು. ಈಗ ಒಟಿಟಿಗೆ ಲಗ್ಗೆ ಇಡಲು ಸಿದ್ಧವಾಗಿದೆ.

ಟಾಲಿವುಡ್‌ ಹೀರೋ ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ ಒಟಿಟಿ ಎಂಟ್ರಿಗೆ ಸಿದ್ಧವಾಗಿದೆ. ವಿದ್ಯಾಧರ್ ಕಾಗಿತ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರವಿದು. ಈ ಸಿನಿಮಾದಲ್ಲಿ ವಿಶ್ವಕ್ ಸೇನ್ ಅವರಿಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಕಳೆದ ಮಾರ್ಚ್ 8ರಂದು ತೆರೆಗೆ ಬಂದಿದ್ದ ಚಿತ್ರ ಇನ್ನೇನು ನಿಮ್ಮ ಮನೆಯಂಗಳಕ್ಕೆ ಲಗ್ಗೆಯಿಡಲಿದೆ. ಅಡ್ವೆಂಚರ್ಸ್ ಎಪಿಕ್ ಡ್ರಾಮಾ ಕಥೆಯಾಧಾರಿತ ಈ ಸಿನಿಮಾದಲ್ಲಿ ವಿಶ್ವಕ್‌ ಸೇನ್‌ ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ. ತಾನು, ಯಾರು, ಎಲ್ಲಿಯವನು ಅನ್ನೋ ಯಾವ ವಿಷಯವೂ ನೆನಪಿಲ್ಲದ ನಾಯಕನಿಗೆ ಮನುಷ್ಯರು ಮುಟ್ಟಿದರೆ ತಡೆದುಕೊಳ್ಳಲಾಗದ ವಿಚಿತ್ರ ಕಾಯಿಲೆ ಇರುತ್ತದೆ. ಈತ ಶಾಪಗ್ರಸ್ಥ ಅಂತ ಬೇರೆ ಅಘೋರಿಗಳು ದೂರ ಇಟ್ಟಿರುತ್ತಾರೆ.

ತೆರೆಕಂಡಾಗ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾ ಏಪ್ರಿಲ್‌ 12ರಿಂದ ZEE 5ನಲ್ಲಿ ಸ್ಟ್ರೀಮ್‌ ಆಗಲಿದೆ. ಕಾರ್ತಿಕ್ ಶಬರೀಶ್ ನಿರ್ಮಾಣ ಮಾಡಿರುವ ಈ ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಅವರ ಛಾಯಾಗ್ರಹಣ ಹಾಗೂ ನರೇಶ್ ಕುಮಾರನ್ ಸಂಗೀತ ನಿರ್ದೇಶನವಿದೆ. ಎಂ ಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರ ತಾರಾಬಳಗ ಈ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here