ಜುರಾಸಿಕ್‌ ಫ್ರಾಂಚೈಸ್‌ನ 6ನೇ ಸಿನಿಮಾ ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ಪೋಸ್ಟರ್‌ ಮತ್ತು BTS ವೀಡಿಯೋ ಬಿಡುಗಡೆಯಾಗಿದೆ. ಯುವ ಕಲಾವಿದರ ಜೊತೆ ಈ ಹಿಂದಿನ ಸರಣಿಗಳಲ್ಲಿ ನಟಿಸಿದ್ದ ಕಲಾವಿದರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ.

ಕೊಲಿನ್‌ ಟ್ರೆವೊರೊ ನಿರ್ದೇಶನದ ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ. ಇದು ಜನಪ್ರಿಯ ಜುರಾಸಿಕ್‌ ಸರಣಿಯ ಆರನೇ ಸಿನಿಮಾ. Chris Pratt ಮತ್ತು Bryce Dallas Howard ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಹಿಂದಿನ ಸರಣಿಗಳಲ್ಲಿ ನಟಿಸಿದ್ದ Laura Dern, Sam Neill, Jeff Goldblum ಕೂಡ ಚಿತ್ರದಲ್ಲಿ ಇರಲಿದ್ದು, ಜುರಾಸಿಕ್‌ ಸಿನಿಮಾ ಪ್ರೇಮಿಗಳ ನಿರೀಕ್ಷೆ ಹೆಚ್ಚಾಗಿದೆ. Steven Spielberg ನಿರ್ದೇಶನದ 1993ರ jurassic park ಸಿನಿಮಾದಲ್ಲಿ Neill ಮತ್ತು Dern Paleontologist Dr.Alan Grant, Dr.Ellie Sattler ಪಾತ್ರಗಳಲ್ಲಿ ನಟಿಸಿದ್ದರು. Goldblum ಅವರು chaos theorist Ian Malcolm ಆಗಿ ಕಾಣಿಸಿಕೊಂಡಿದ್ದರು.

ಪೋಸ್ಟರ್‌ನಲ್ಲಿ ಯುವ ಕಲಾವಿದರು ಹಾಗೂ ಈ ಹಿಂದಿನ ಸರಣಿಯ ನಟ-ನಟಿಯರೂ ಇದ್ದಾರೆ. ನೂತನ ಸಿನಿಮಾದಲ್ಲಿ ಈ ಹಿಂದೆ ತೆರೆಕಂಡ ಜುರಾಸಿಕ್‌ ಫ್ರಾಂಚೈಸ್‌ ಸಿನಿಮಾಗಳ BTS ವೀಡಿಯೋ ಇರಲಿದೆ. JA Bayona ನಿರ್ದೇಶನದ ‘Jurassic World : Fallen Kingdom’ ತೆರೆಕಂಡ ಸರಣಿಯ ಕೊನೆಯ ಸಿನಿಮಾ. ಇದರ ಮುಂದುವರೆದ ಕತೆಯನ್ನು ನೂತನ ಸಿನಿಮಾದಲ್ಲಿ ನೋಡಬಹುದು ಎಂದಿದ್ದಾರೆ ‘ಜುರಾಸಿಕ್‌ ವರ್ಲ್ಡ್‌ ಡೊಮಿನಿಯಾನ್‌’ ನಿರ್ದೇಶಕರು. ಈ ಸಿನಿಮಾ 2022ರ ಜೂನ್‌ 10ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here