ವಿವಿಧ OTT ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ನೂತನ ಸರಣಿ, ಸಿನಿಮಾಗಳು ಮೂಡಿಬರಲಿವೆ. ಏಪ್ರಿಲ್‌ ತಿಂಗಳಲ್ಲಿ ಸ್ಟ್ರೀಮ್‌ ಆಗಲಿರುವ ಪ್ರಮುಖ ಕಂಟೆಂಟ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಏಪ್ರಿಲ್‌ ತಿಂಗಳಲ್ಲಿ ಹಲವು ಎಕ್ಸೈಟಿಂಗ್‌ ಸರಣಿಗಳು ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿವೆ. ನಟಿ ಪ್ರಿಯಾಂಕಾ ಚೋಪ್ರಾ ನಟನೆಯ ಬಹುನಿರೀಕ್ಷಿತ ಕ್ರೈಂ – ಥ್ರಿಲ್ಲರ್‌ Citadel, ಈ ಹಿಂದಿನ ಸರಣಿಗಳಲ್ಲಿ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ Indian Matchmaking 3, ಬಾಲಿವುಡ್‌ ಸುವರ್ಣಯುಗದ ಹಿನ್ನೆಲೆಯಲ್ಲಿ ಹೆಣೆದ ಕತೆ Jubilee, ಕಾಮಿಡಿ – ಡ್ರಾಮಾ The Marvelous Mrs Maisel ಪ್ರಮುಖ ಸರಣಿಗಳು.

IRL – In Real Love : Netflix, ಏಪ್ರಿಲ್‌ 6ರಿಂದ

IRL ‘ಇನ್ ರಿಯಲ್ ಲವ್’ ನೆಟ್‌ಫ್ಲಿಕ್ಸ್‌ನ ಮೊದಲ ಡೇಟಿಂಗ್ ರಿಯಾಲಿಟಿ ಶೋ. ಕಾರ್ಯಕ್ರಮದ ಅಧಿಕೃತ ಸಿನಾಪ್ಸಿಸ್‌ ಹೇಳುವಂತೆ, ‘ಪ್ರೀತಿ ಬಯಸುವ 4 ಸಿಂಗಲ್ಸ್ ನೈಜ ಮತ್ತು ಆನ್‌ಲೈನ್‌ ಸಂಪರ್ಕಗಳ ಮೊರೆ ಹೋಗುತ್ತಾರೆ. ಅವರು ವರ್ಚ್ಯುಯೆಲ್‌ ರೊಮ್ಯಾನ್ಸ್‌ ಮೊರೆ ಹೋಗುತ್ತಾರೋ? ಇಲ್ಲವೇ ಆಫ್‌ಲೈನೋ? ಎನ್ನುವುದು ಹೂರಣ. ರಣ್‌ವಿಜಯ್‌ ಸಿಂಗ್‌ ಮತ್ತು ಗೌಹರ್ ಖಾನ್ ಶೋ ನಿರೂಪಿಸಲಿದ್ದಾರೆ.

Jubilee : Amazon Prime Video, ಏಪ್ರಿಲ್‌ 7ರಿಂದ

ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಸರಣಿ ಬಾಲಿವುಡ್‌ನ ಸುವರ್ಣ ಯುಗದ ಹಿನ್ನೆಲೆಯಲ್ಲಿ ಹೆಣೆದ ಕತೆ. ‘ಶೂಟಿಂಗ್‌ ಸ್ಟುಡಿಯೋ ಮಾಲೀಕ, ಆತನ ತಾರಾ ಪತ್ನಿ, ವಿಶ್ವಾಸಾರ್ಹ ಸಹಾಯಕ, ಉದಯೋನ್ಮುಖ ನಿರಾಶ್ರಿತರ ಕನಸುಗಳು, ಉತ್ಸಾಹ, ಮಹತ್ವಕಾಂಕ್ಷೆ ಮತ್ತು ಪ್ರೀತಿಯ ಅನ್ವೇಷಣೆ, ಜೂಜು.. ಇತ್ಯಾದಿಗಳೆಲ್ಲವೂ ಇಲ್ಲಿ ಪ್ರಸ್ತಾಪವಾಗಲಿವೆ. ಪ್ರೊಸೆನ್‌ಜಿತ್‌ ಚಟರ್ಜೀ, ಅದಿತಿ ರಾವ್ ಹೈದರಿ, ಅಪರಶಕ್ತಿ ಖುರಾನಾ, ವಮಿಕಾ ಗಬ್ಬಿ, ಸಿದ್ಧಾಂತ್‌ ಗುಪ್ತಾ, ನಂದೀಶ್ ಸಂಧು, ರಾಮ್‌ ಕಪೂರ್‌ ಮುಂತಾದ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ಏಪ್ರಿಲ್‌ 7ರಿಂದ ಸರಣಿಯ ಮೊದಲ 5 ಸಂಚಿಕೆಗಳು ಸ್ಟ್ರೀಮ್‌ ಆಗಲಿವೆ. ಇನ್ನುಳಿದ 5 ಸಂಚಿಕೆಗಳು ಏಪ್ರಿಲ್‌ 14ರಂದು ಬರಲಿವೆ.

Rennervations : Disneyplus Hotstar, ಏಪ್ರಿಲ್‌ 12ರಿಂದ

ನಟ Jeremy Renner ಜಗತ್ತನ್ನು ಸುತ್ತುತ್ತಾ ಮಾತುಕತೆಯಾಡುವ ನಾಲ್ಕು ಪಾರ್ಟ್‌ಗಳ Non – scripted ಸರಣಿಯಿದು. ಭಾರತದ ಸುತ್ತಾಟದಲ್ಲಿ ಅವರು ಬಾಲಿವುಡ್‌ ನಟ ಅನಿಲ್‌ ಕಪೂರ್‌ ಅವರನ್ನು ಭೇಟಿ ಮಾಡುತ್ತಾರೆ. Vanessa Hudgens, Sebastian Yatra, Anthony Mackie ಕೂಡ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ.

The Marvelous Mrs Maisel S5: Prime Video, ಏಪ್ರಿಲ್‌ 14ರಿಂದ

ದಿ ಮಾರ್ವೆಲಸ್‌ ಮಿಸೆಸ್‌ ಮೈಸೆಲ್‌ ಸರಣಿಯ ಮೊದಲ ಮೂರು ಎಪಿಸೋಡುಗಳು ಏಪ್ರಿಲ್‌ 14ರಿಂದ ಸ್ಟ್ರೀಮ್‌ ಆಗಲಿವೆ. ಪ್ರಮುಖವಾಗಿ ಸರಣಿಯಲ್ಲಿ Brosnahan ಇದ್ದು Tony Shalhoub, Alex Borstein, Marin Hinkle, Michael Zegen, Kevin Pollak, Caroline Aaron, Reid Scott ಇದ್ದಾರೆ. ಸರಣಿಯ ಕೊನೆಯ ಎಪಿಸೋಡು ಮೇ 26ರಿಂದ ಸ್ಟ್ರೀಮ್‌ ಆಗಲಿದೆ.

Mrs Undercover : ZEE5, ಏಪ್ರಿಲ್‌ 14ರಿಂದ

ZEE5 ಸಿನಿಮಾ ‘ಮಿಸೆಸ್ ಅಂಡರ್‌ಕವರ್‌’ನಲ್ಲಿ ರಾಧಿಕಾ ಆಪ್ಟೆ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಗೃಹಿಣಿಯು ತನ್ನ ಕುಟುಂಬವನ್ನು ನಿಭಾಯಿಸುವಷ್ಟೇ ತನ್ನ ರಕ್ಷಣೆ ಸಹ ನಿಭಾಯಿಸುತ್ತಾಳೆ. ಸ್ವತಂತ್ರ ಮತ್ತು ಶಕ್ತಿಯುತವಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕ್ರೈಂ ಮಾಡುತ್ತಿದ್ದವರಿಗೆ ರಹಸ್ಯ ಕಾರ್ಯಚಾರಣೆಯ ಮೂಲಕ ಪಾಠ ಕಲಿಸುವ ಮನರಂಜನಾ ಕಥೆ. ಚಿತ್ರದಲ್ಲಿ ಸುಮೀತ್ ವ್ಯಾಸ್‌, ಶಾಹೇಬ್ ಚಟ್ಟೋಪಾಧ್ಯಾಯ, ರೋಷಿನಿ ಭಟ್ಟಾಚಾರ್ಯ, ಇಂದ್ರಶಿಶ್ ರಾಯ್, ಅಂಗನಾ ರಾಯ್‌, ಲಬೋನಿ ಸರ್ಕಾರ್‌, ವಿಶ್ವಜಿತ್‌ ಚಕ್ರವರ್ತಿ ನಟಿಸಿದ್ದಾರೆ.

Plane: Lionsgate Play : ಏಪ್ರಿಲ್‌ 14ರಿಂದ

ಗೆರಾರ್ಡ್ ಬಟ್ಲರ್ ಮತ್ತು ಮೈಕ್ ಕಾಲ್ಟರ್‌ ಅವರ ಸಿನಿಮಾ ‘ಪ್ಲೇನ್’ ಭಾರತದಲ್ಲಿ Lionsgate Playನಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಪೈಲೆಟ್ ಬ್ರಾಡಿಯನ್ನು ಅನುಸರಿಸುತ್ತದೆ. ಯುದ್ಧ ವಲಯದಲ್ಲಿ ಸಿಕ್ಕಿಕೊಂಡ ಚಂಡಮಾರುತಕ್ಕೆ ತುತ್ತಾದ ವ್ಯಕ್ತಿ ಸುತ್ತ ಹೆಣೆದ ಕತೆ. ಚಿತ್ರಕ್ಕೆ ಸಿನಿಮಾಸಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ.

ಟೂತ್‌ ಪರಿ : ವೆನ್‌ ಲವ್‌ ಬೈಟ್ಸ್‌ – Netflix, ಏಪ್ರಿಲ್‌ 20ರಿಂದ
ಶಂತನು ಮಹೇಶ್ವರಿ ಮತ್ತು ತಾನ್ಯಾ ಮಾನಿಕ್ತಲ ಅಭಿನಯದ ಫ್ಯಾಂಟಸಿ ಥ್ರಿಲ್ಲರ್‌ ಸರಣಿ. ಶಂತನು ಡೆಂಟಿಸ್ಟ್‌ ಪಾತ್ರದಲ್ಲಿದ್ದರೆ ‘ರೂಮಿ’ಯಾಗಿ ತಾನ್ಯಾ ನಟಿಸಿದ್ದಾರೆ. ಹಲ್ಲಿನ ಚಿಕಿತ್ಸೆಗಾಗಿ ರೂಮಿ ಅದೊಂದು ದಿನ ಶಂತನು ಕ್ಲಿನಿಕ್‌ಗೆ ಬರುತ್ತಾಳೆ. ಅಲ್ಲಿ ಇಬ್ಬರಿಗೂ ಪ್ರೀತಿ ಚಿಗುರುತ್ತದೆ. ಕತೆ ಹೇಳುವಂತೆ ರೂಮಿಯದ್ದು ಪ್ರಾಮಾಣಿಕ ಪ್ರೀತಿಯೇನಲ್ಲ. ಇಬ್ಬರ ಪ್ರೀತಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವುದು ಏಪ್ರಿಲ್‌ 20ಕ್ಕೆ ಸರಣಿ ಸ್ಟ್ರೀಮ್‌ ಆಗುತ್ತಿದ್ದಂತೆ ತಿಳಿಯಲಿದೆ. ಅದಿಲ್‌ ಹುಸೇನ್‌, ರೇವತಿ, ಶಾಶ್ವತ ಚಟರ್ಜೀ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇಂಡಿಯನ್ ಮ್ಯಾಚ್ ಮೇಕಿಂಗ್ 53 : Netflix, ಏಪ್ರಿಲ್‌ 21ರಿಂದ
Indian Matchmaking Netflix ಸರಣಿಯೊಂದಿಗೆ ಸೀಮಾ ತಪಾರಿಯಾ ತೆರೆಗೆ ಹಿಂದಿರುಗುತ್ತಿದ್ದಾರೆ. ಸ್ಮೃತಿ ಮುಂದ್ರಾ ರಚಿಸಿ, ನಿರ್ದೇಶಿಸಿರುವ ಸರಣಿಯ ಮೂರನೇ ಸೀಸನ್‌ ಇದು. ‘ಸೀಮಾ ಆಂಟಿ’ ಮಿಲಯನೇರ್‌ಗಳಿಗೆ ಉತ್ತಮ ವಧು-ವರರನ್ನು ಹುಡುಕುವ ಕತೆ. ಸರಣಿಯ ಸಿನಾಪ್ಸಿಸ್‌, ‘ಲಂಡನ್‌ನಿಂದ ದೆಹಲಿಗೆ ಮತ್ತು ಮಿಯಾಮಿಯಿಂದ ನ್ಯೂಯೋರ್ಕ್‌ಗೆ, ಹಳೆಯ ಮತ್ತು ಹೊಸ ಗ್ರಾಹಕರಿಗಾಗಿ ಸೀಮಾ ಪ್ರೀತಿಯಿಂದ ಕಾರ್ಯನಿರ್ವಹಿಸುತ್ತಾಳೆ. ತನ್ನ ದಶಕಗಳ ಅನುಭವದಿಂದ ಅದೃಷ್ಟಶಾಲಿ ಸಿಂಗಲ್ಸ್‌ಗಳಿಗೆ ಸೀಮಾ ಉತ್ತಮ ಭವಿಷ್ಯ ಕಲ್ಪಿಸುವ ಕಥಾಹಂದರ’

ಸಿಟಾಡೆಲ್ : Amazon Prime Video, ಏಪ್ರಿಲ್‌ 28


ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್‌ ಮ್ಯಾಡನ್‌ ಅಭಿನಯದ Russo Brothers ನಿರ್ದೇಶನದ ಬಹುನಿರೀಕ್ಷಿತ ಸರಣಿ ಏಪ್ರಿಲ್‌ 28ರಿಂದ ಸ್ಟ್ರೀಮ್‌ ಆಗಲಿದೆ. ಗ್ಲೋಬಲ್‌ ಸ್ಪೈ ಏಜನ್ಸಿಯ ಇಬ್ಬರು ಏಜೆಂಟ್‌ಗಳಾದ ಮೇಸನ್‌ ಕೇನ್‌ (ಮ್ಯಾಡನ್‌) ಮತ್ತು ನಾಡಿಯಾ ಸಿನ್ಹ (ಪ್ರಿಯಾಂಕಾ ಚೋಪ್ರಾ) ಅವರ ಆರು ಕಂತುಗಳ ಸ್ಪೈ ಡ್ರಾಮಾ. ಎಂಟು ವರ್ಷಗಳ ಹಿಂದಿನ ಮರಣಾoತಿಕ ದಾಳಿಯಿಂದ ಚೇತರಿಸಿಕೊಂಡ ಅವರೀಗ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಆದರೆ ಮಾಜಿ ಸಹೋದ್ಯೋಗಿ ಬರ್ನಾರ್ಡ್ ಒರ್ಲಿಕ್ ಒತ್ತಾಸೆಯ ಮೇರೆಗೆ ದುಷ್ಟಶಕ್ತಿಗಳಿಂದ ಜಗತ್ತನ್ನು ರಕ್ಷಿಸುವ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ. Lesley Manville, Osy Ikhile, Ashleigh Cummings, Roland Moller ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here