ವ್ಯಕ್ತಿ ಬದುಕಿನ ನಿರೂಪಣೆಯು ಸಮಾಜದ ಚಾರಿತ್ರಿಕ ನಡೆ ನುಡಿಗಳು ಕಟ್ಟಿಕೊಂಡುದರ ವ್ಯಾಖ್ಯಾನವಾಗಿಸಬಲ್ಲ ಸಿನಿಮಾ ಕಲೆಯನ್ನು ಸೃಜಿಸಿದವರು ಚಿತ್ರನಿರ್ದೇಶಕ Won-kat Woi. ಆಫ್ರಿಕಾದ ಕಪ್ಪು ಸಿನಿಮಾದ ಹರಿಕಾರ ಎಂದೇ ಕರೆಸಿಕೊಂಡ ಓಸ್ಮಾನೆ ಸಿಂಬೇನೆ ಅವರ ಚಿತ್ರಗಳೂ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ವೋಂಕಾರ್ ವೋಯ್ (ಹಾಂಕಾಂಗ್) ಅವರು ಸಿನಿಮಾ ಭಾಷೆಗೆ ಹೊಸ ವ್ಯಾಕರಣ ರಚಿಸಿಕೊಟ್ಟವರು. ಚೀನಾದ ಸರ್ವಾಧಿಕಾರಿ ಆಡಳಿತದಿಂದ ಪಾರಾಗಿ ಸ್ವತಂತ್ರ ಬದುಕು ಹಂಬಲಿಸಿ ಹಾಂಕಾಂಗಿನ ನೆಲೆಗೆ ಬಂದವರು, ಅಮೇರಿಕೆಯ ಜೀವನ ಶೈಲಿಯ ಅನುಕರಣೆಯಲ್ಲಿ ಸಿಕ್ಕಿ ಸಂಸ್ಕೃತಿ, ಮನುಷ್ಯರ ಸಾಮಾಜಿಕ-ವೈಯಕ್ತಿಕ ಸಂಬಂಧಗಳ ಸ್ವಂತಿಕೆಯ ಹುಡುಕಾಟದ ಗೋಜಲುಗಳಲ್ಲಿ ಸಿಕ್ಕಿದ ಜೀವಿಗಳ ಪುಲಕ ನರಕಗಳನ್ನು ನಿರೂಪಿಸಿದವರು. ವ್ಯಕ್ತಿ ಬದುಕಿನ ನಿರೂಪಣೆಯು ಸಮಾಜದ ಚಾರಿತ್ರಿಕ ನಡೆ ನುಡಿಗಳು ಕಟ್ಟಿಕೊಂಡುದರ ವ್ಯಾಖ್ಯಾನವಾಗಿಸಬಲ್ಲ ಸಿನಿಮಾ ಕಲೆಯನ್ನು ಸೃಜಿಸಿದವರು. ಅವರ ಕ್ಯಾಮೆರಾ ಕಟ್ಟು- ಸಂಕಲನಾ ಸೃಜನತೆಗಳು ಸಿನಿಮಾ ಕಲೆಯ ಅಧ್ಯಯನದ ಮಾದರಿಗಳಾಗಿವೆ. Study of Won-kat Woi ವಿಭಾಗದಲ್ಲಿ ನೋಡಲೇ ಬೇಕಾದ ಸಿನಿಮಾಗಳು ‘In the mood of love’ ಮತ್ತು ‘Fallen Angels’

ಓಸ್ಮಾನೆ ಸಿಂಬೇನೆ (ಸೆನೆಗಲ್) ಅವರು ಆಫ್ರಿಕಾದ ಕಪ್ಪು ಸಿನಿಮಾದ ಹರಿಕಾರ. ಕಪ್ಪು ಜನರು ವಸಾಹತು ದಬ್ಬಾಳಿಕೆಗಳಿಗೆ ಒಳಗಾದ ಬಗೆ, ವಸಾಹತು ಪ್ರಭಾವದ ಆಕರ್ಷಣೆ – ಭ್ರಮೆ – ವಾಸ್ತವಿಕ ವಸಹಾತೋತ್ತರ ಅಸಂಗತ ಅಧಿಕಾರ ರಾಜಕಾರಣಗಳ ಎದಿರು ಕಪ್ಪು ಜನರ ನವ ಸ್ವಂತಿಕೆಯ ತುಮುಲ, ಸಂಕಲ್ಪಗಳನ್ನು ಕಟ್ಟುವ ಮೂಲಕ, ಕಪ್ಪು ಸಿನಿಮಾ ಕಟ್ಟುವ ಮಾದರಿ ರಚಿಸಿದವರು. ಅವರ ಚಿತ್ರಾವಳಿಯಲ್ಲಿ ನೋಡಲೇಬೇಕಾದ ಸಿನಿಮಾಗಳು ‘Black Girl’ ಮತ್ತು ‘Moolaade’

LEAVE A REPLY

Connect with

Please enter your comment!
Please enter your name here