ದಿಗಂತ್‌ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಎಡಗೈ ಬಳಸುವವರ ಕುರಿತಾದ ಕತೆ ಇರುವ ಚಿತ್ರವಿದು. ಈ ಸಿನಿಮಾದ ಕಾನ್ಸೆಪ್ಟ್‌ನ ಪ್ರೇರಣೆಯಿಂದ ‘ವೇಗ’ ಹೆಲ್ಮೆಟ್‌ ಕಂಪನಿ ಎಡಗೈ ಬಳಸುವವರಿಗೆ ವಿಶೇಷ ಹೆಲ್ಮೆಟ್‌ ಸಿದ್ಧಪಡಿಸುತ್ತಿದೆ.

ಸಮರ್ಥ್ ಬಿ ಕಡಕೊಳ್ ನಿರ್ದೇಶನದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ವಿಶಿಷ್ಟ ಟೈಟಲ್‌ ಕಾರಣಕ್ಕೆ ಗಮನ ಸೆಳೆದಿತ್ತು. ದಿಗಂತ್‌ ನಟನೆಯ ಸಿನಿಮಾ ಈಗ ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದೆ. ನಿರ್ದೇಶಕರು ಹೇಳಿಕೊಳ್ಳುವಂತೆ ಇದು ಎಡಗೈ ಪ್ರಾಬಲ್ಯವಿರುವ ಜನರ ಕತೆಯ ಸಿನಿಮಾ. ಈ ಕಾನ್ಸೆಪ್ಟ್‌ನ ಪ್ರೇರಣೆಯಿಂದಾಗಿ ‘ವೇಗ’ ಹೆಲ್ಮೆಟ್‌ ಕಂಪನಿಯವರು ಎಡಗೈ ಬಳಸುವವರಿಗೆ ವಿಶೇಷ ಹೆಲ್ಮೆಟ್‌ ಸಿದ್ಧಪಡಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಆಗಸ್ಟ್‌ 13ರಂದು ಅಂತಾರಾಷ್ಟ್ರೀಯ ಎಡಗೈಯವರ ದಿನ. ಇದೇ ದಿನದಂದು ‘ವೇಗ’ ಹೆಲ್ಮೆಟ್ ಕಂಪನಿ ಎಗಡೈ ಬಳಸುವವರರಿಗಾಗಿ ವಿಶೇಷ ಹೆಲ್ಮೆಟ್ ಲಾಂಚ್ ಮಾಡುತ್ತಿದೆ. ‘ನಮ್ಮ ಸಿನಿಮಾದ ಕಾನ್ಸೆಪ್ಟ್‌ ಇಂಥದ್ದೊಂದು ಪ್ರಯೋಗಕ್ಕೆ ಪ್ರೇರಣೆಯಾಗಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ಸಮರ್ಥ್ ಬಿ ಕಡಕೊಳ್ ಚೊಚ್ಚಲ ನಿರ್ದೇಶನದ ಸಿನಿಮಾ ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್‌ನಡಿ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರ ನಿರ್ಮಿಸುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಅಭಿಮನ್ಯು ಸದಾನಂದ್ ಛಾಯಾಗ್ರಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.

Previous article‘ಯಾರಿಯಾನ್‌2’ ಟೀಸರ್‌ | ಯಸ್‌ ದಾಸ್‌ – ದಿವ್ಯಾ ಖೋಸ್ತಾ ನಟನೆಯ ಹಿಂದಿ ಸಿನಿಮಾ
Next article‘ಆಖ್ರಿ ಸಚ್‌’ ಟ್ರೈಲರ್‌ | ತಮನ್ನಾ ಭಾಟಿಯಾ ನಟನೆಯ ತನಿಖಾ ವೆಬ್‌ ಸರಣಿ

LEAVE A REPLY

Connect with

Please enter your comment!
Please enter your name here