ಯಶ್‌ ನೂತನ ಸಿನಿಮಾದ ಶೀರ್ಷಿಕೆ ಡಿಸೆಂಬರ್, 8ರ ಬೆಳಗ್ಗೆ 9:55ರಂದು ಹೊರಬೀಳಲಿದೆ. KVN ಪ್ರೊಡಕ್ಷನ್ಸ್‌ ಈ ಸಿನಿಮಾ ನಿರ್ಮಿಸಲಿದ್ದು, ಯಶ್‌ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಟ ಯಶ್‌ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆ ತಮ್ಮ ನೂತನ ಸಿನಿಮಾ ಕುರಿತು ಸುಳಿವು ನೀಡಿದ್ದರು. ಇಂದು ನೂತನ ಸಿನಿಮಾದ ಶೀರ್ಷಿಕೆ ಘೋಷಣೆ ದಿನಾಂಕವನ್ನು ಹೇಳಿದ್ದಾರೆ. ಇದೇ ಶುಕ್ರವಾರ ಡಿಸೆಂಬರ್, 8ರ ಬೆಳಗ್ಗೆ 9:55ರಂದು ನೂತನ ಸಿನಿಮಾದ ಶೀರ್ಷಿಕೆ ಹೊರಬೀಳುವುದಾಗಿ ತಮ್ಮ X ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಯಶ್‌ ತಮ್ಮ X ಖಾತೆಯಲ್ಲಿ ”It’s time. 8th December, 9:55 AM. Stay tuned to KVN Productions, ‘Yash19” ಎಂದು ಬರೆದುಕೊಂಡಿದ್ದಾರೆ. ಯಶ್‌ ಅವರ ಈ ಚಿತ್ರವನ್ನು KVN Productions ಬ್ಯಾನರ್‌ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ನಿರ್ಮಿಸುತ್ತಿದ್ದಾರೆ.

ಯಶ್‌ರ ‘ಕೆಜಿಎಫ್‌ 2’ ಕಳೆದ ವರ್ಷ 2022 ಏಪ್ರಿಲ್‌ 14ರಂದು ಬಿಡುಗಡೆಯಾಗಿತ್ತು. ಇವರ ಮುಂದಿನ ಸಿನಿಮಾದ ಬಗ್ಗೆ ಈವರೆಗೆ ಒಂದು ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ತೆರೆಮರೆಯಲ್ಲಿ ಯಶ್ ತಯಾರಿ ನಡೆಸಿದ್ದಾರೆಂಬುದರ ಬಗ್ಗೆ ಸುಳಿವು ಸಿಕ್ಕಿತ್ತು. ಈಗ ಯಶ್ ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಕಾತುರದಿಂದ ಕಾಯುತ್ತಿದ್ದ ಅವರ ಅಭಿಮಾನಿಗಳ ಸಂತಸ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ. ಯಶ್‌ ನಿನ್ನೆ (ಡಿ.3) ತಮ್ಮ Instagram ಖಾತೆಯ DP ಬದಲಾಯಿಸಿದ್ದರು. ‘Loading’ ಫೋಟೋ ಹಾಕಿಕೊಳ್ಳುವ ಮೂಲಕ ತಮ್ಮ ಮುಂದಿನ ಯೋಜನೆಯ ಕುರಿತು ಸುಳಿವು ನೀಡಿದ್ದರು. ಡಿಸೆಂಬರ್‌ 8ರಂದು ಅವರ ನೂತನ ಸಿನಿಮಾದ ಶೀರ್ಷಿಕೆ ಹಾಗೂ ನಿರ್ದೇಶಕರು ಹಾಗೂ ತಂತ್ರಜ್ಞರ ಕುರಿತು ಮಾಹಿತಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here