ರಮೇಶ್‌ ಬೇಗಾರ್‌ ನಿರ್ದೇಶನದ ‘ಜಲಪಾತ’ ಚಿತ್ರದಲ್ಲಿನ ನಟ ಪ್ರಮೋದ್‌ ಶೆಟ್ಟಿ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಪ್ರಮೋದ್‌ ಶೆಟ್ಟಿ ಅವರ ತಾರಾಪತ್ನಿ ಸುಪ್ರೀತಾ ಅವರು ಲುಕ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಪರಿಸರ ಕಾಳಜಿ ಕುರಿತು ನಿರ್ದೇಶಕರು ಚಿತ್ರದಲ್ಲಿ ಪ್ರಸ್ತಾಪಿಸಲಿದ್ದಾರೆ.

ಕಿರುತೆರೆ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ ತಮ್ಮ ಪತಿ ಪ್ರಮೋದ್‌ ಶೆಟ್ಟಿ ಅವರ ‘ಜಲಪಾತ’ ಚಿತ್ರದಲ್ಲಿನ ಕ್ಯಾರಕ್ಟರ್‌ ಲುಕ್‌ ಬಿಡುಗಡೆ ಮಾಡಿದ್ದಾರೆ. ಚಿತ್ರ ಹಾಗೂ ಪತಿ ಪ್ರಮೋದ್‌ ಪಾತ್ರದ ಬಗ್ಗೆ ಮಾತನಾಡಿರುವ ಸುಪ್ರೀತಾ, ‘ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅಪೇಕ್ಷಿಸುತ್ತಾರೆ. ಜೊತೆಗೆ ಹೊಸಬರಿಗೆ ಪ್ರೋತ್ಸಾಹಿಸುವ ಮನೋಭಾವದವರು. ಅದರಂತೆ ನಿರ್ದೇಶಕ ರಮೇಶ್ ಬೇಗಾರ್ ಜೊತೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಸೊಗಸಾಗಿ ತೋರಿಸಿದೆ. ಪ್ರಮೋದ್ ರ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತರಳಾಗಿದ್ದೇನೆ’ ಎಂದಿದ್ದಾರೆ.

‘ಪರಿಸರ ರಕ್ಷಣೆ ಮತ್ತು ಅರಿವನ್ನು ಒಂದು ಫೀಲ್‌ಗುಡ್‌ ಜಾನರ್‌ ಸಿನಿಮಾದಲ್ಲಿ ಹೇಳುವ ಉದ್ದೇಶ ನಮ್ಮ ಚಿತ್ರತಂಡದ್ದು. ಇದಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ. ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿ ಹಿಡಿದಿದ್ದಾರೆ. ಸಿನಿಮಾಗೆ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ’ ಎನ್ನುವುದು ನಿರ್ಮಾಪಕ ರವೀಂದ್ರ ತುಂಬರಮನೆ ಅವರ ಮಾತು. ರಮೇಶ್‌ ಬೇಗಾರ್‌ ನಿರ್ದೇಶನದ ಚಿತ್ರದ ಹೀರೋ ಆಗಿ ರಜನೀಶ್‌ ಎಂ ನಟಿಸುತ್ತಿದ್ದಾರೆ. ಸಾದ್ವಿನಿಕೊಪ್ಪ ಸಂಗೀತ ನಿರ್ದೇಶನದ ಸಿನಿಮಾ ಮುಂದಿನ ತಿಂಗಳಲ್ಲಿ ಥಿಯೇಟರ್‌ಗೆ ಬರಲಿದೆ.

Previous article‘ಬ್ಯೂಟಿಪುಲ್ ‌2’ ಸಿನಿಮಾ ಘೋಷಿಸಿದ ಅನೂಪ್‌ ಮೆನನ್‌ | ವಿ ಕೆ ಪ್ರಕಾಶ್‌ ನಿರ್ದೇಶನ
Next article‘ಗನ್ಸ್‌ ಅಂಡ್‌ ರೋಸಸ್‌’ | ಸಿನಿಮಾ ಕತೆಗಾರ ಅಜಯ್‌ ಕುಮಾರ್‌ ಪುತ್ರ ಅರ್ಜುನ್‌ ಹೀರೋ

LEAVE A REPLY

Connect with

Please enter your comment!
Please enter your name here