ಮಹಿ ವಿ ರಾಘವ್‌ ನಿರ್ದೇಶನದ ‘ಯಾತ್ರಾ 2’ ಬಯೋಪಿಕ್‌ ತೆಲುಗು ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಮ್ಮೂಟಿ ಮತ್ತು ಜೀವಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್‌ ರಾಜಶೇಖರ ರೆಡ್ಡಿ ಮತ್ತು ಅವರ ಪುತ್ರ, ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಕುರಿತಾದ ಬಯೋಪಿಕ್‌ ಚಿತ್ರವಿದು.

ಮಮ್ಮೂಟಿ ಮತ್ತು ಜೀವಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಯಾತ್ರಾ 2’ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವು 2019ರ ಮಮ್ಮೂಟಿ ಅಭಿನಯದ ‘ಯಾತ್ರಾ’ ಚಿತ್ರದ ಮುಂದುವರೆದ ಭಾಗವಾಗಿದ್ದು ಈ ಸಿನಿಮಾ ಆಂಧ್ರದ ಪ್ರಸ್ತುತ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಕತೆ ಹೇಳಲಿದೆ. ಜಗನ್‌ ಮೋಹನ್‌ ರೆಡ್ಡಿ ಅವರ ಪಾತ್ರವನ್ನು ಜೀವಾ ನಿರ್ವಹಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗವು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಜೀವನವನ್ನು ಆಧರಿಸಿತ್ತು. ಭಾಗ 1ರಲ್ಲಿ ಮಮ್ಮೂಟಿ ಅವರು ವೈ ಎಸ್‌ ರಾಜಶೇಖರ ರೆಡ್ಡಿ ಪಾತ್ರ ನಿರ್ವಹಿಸಿದ್ದರು. ಈ ಚಿತ್ರವನ್ನು ಮಹಿ ವಿ ರಾಘವ್ ನಿರ್ದೇಶಿಸಿದ್ದರು. ಸರಣಿ ಚಿತ್ರವನ್ನೂ ಇವರೇ ನಿರ್ದೇಶಿಸಲಿದ್ದಾರೆ.

ಸಿನಿಮಾದ ಫಸ್ಟ್‌ ಲುಕ್‌ ಹಂಚಿಕೊಂಡಿರುವ ಮಮ್ಮೂಟಿ, ‘ಯಾತ್ರಾ 2 ಚಿತ್ರದ ಫಸ್ಟ್‌ ಲುಕ್‌ ಪ್ರಸ್ತುತ ಪಡಿಸುತ್ತಿದ್ದೇವೆ. ಚಿತ್ರವು ಪ್ರಪಂಚದಾದ್ಯಂತ ಫೆಬ್ರವರಿ 8, 2024ರಂದು ತೆರೆಕಾಣಲಿದೆ’ ಎಂದು ಬರೆದಿದ್ದಾರೆ. ನಟ ಜೀವ ಕೂಡ ತಮ್ಮ instagram ಖಾತೆಯಲ್ಲಿ ಫಸ್ಟ್‌ಲುಕ್‌ ಹಂಚಿಕೊಂಡಿದ್ದು, ‘In the shadow of a legend, A leader rises!’ ಎಂದು ಬರೆದಿದ್ದಾರೆ. ‘ಯಾತ್ರಾ 2’ ಸಿನಿಮಾದ ಚಿತ್ರೀಕರಣ ಈಗಾಗಲೇ ಅರಂಭಗೊಂಡಿದ್ದು, ಜೀವಾ ಮತ್ತು ಮಮ್ಮೂಟಿ ತಂದೆ – ಮಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. V Celluloid and Three Autumn Leaves ಬ್ಯಾನರ್‌ ಅಡಿಯಲ್ಲಿ ವಿ ಸೆಲ್ಯುಲಾಯ್ಡ್ ಮತ್ತು ತ್ರೀ ಆಟಮ್ ಲೀವ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದು, ಆರ್ ಮಾಧಿ ಮತ್ತು ಶ್ರವಣ್ ಕಾಟಿಕನೇನಿ ಸಂಕಲನ ಮಾಡಿದ್ದಾರೆ. ‘ಯಾತ್ರಾ’ದ ಮೊದಲ ಭಾಗವು ರಾಜ್ಯಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ವೈಎಸ್ ರಾಜಶೇಖರ ರೆಡ್ಡಿ ಅವರನ್ನು ಚುನಾವಣಾ ಸೋಲಿನ ಅಂಚಿನಿಂದ ಹೇಗೆ ರಕ್ಷಿಸಿತು ಎಂಬುದರ ಮೇಲೆ ಕೇಂದ್ರೀಕೃತವಾಗಿತ್ತು. ಆ ಘಟನೆಗಳು ಅವರನ್ನು ರಾಜ್ಯದ ಅಪ್ರತಿಮ ವ್ಯಕ್ತಿಯಾಗಲು ಕಾರಣವಾಯಿತು. ಭಾಗ ಎರಡರಲ್ಲಿ ಪ್ರಸ್ತುತ ಆಂದ್ರಪ್ರದೇಶದ ಮುಖ್ಯ ಮಂತ್ರಿಗಳಾದ Y S ಜಗನ್ ಮೋಹನ್ ರೆಡ್ಡಿ ಅವರ ಜೀವನ, ರಾಜಕೀಯದ ಕುರಿತಾಗಿದೆ.

LEAVE A REPLY

Connect with

Please enter your comment!
Please enter your name here