‘ಗೀತ ಗೋವಿಂದಂ’ ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗಿನಿಂದಲೂ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಧ್ಯೆ ಪ್ರೀತಿಯ ವದಂತಿ ಜಾರಿಯಲ್ಲಿದೆ. ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವ ಸಂದರ್ಭಗಳು ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಇಬ್ಬರೂ ಸತಿ-ಪತಿಯಾಗಲಿದ್ದಾರೆ ಎನ್ನುವ ಲೇಟೆಸ್ಟ್‌ ಸುದ್ದಿ.

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್‌ ಇಂಡಿಯಾ ಹಿರೋಯಿನ್‌. ‘ಪುಷ್ಪ’ ತೆಲುಗು ಸಿನಿಮಾ ಅವರನ್ನು ಉತ್ತರ ಭಾರತೀಯರಿಗೆ ಪರಿಚಯಿಸಿದೆ. ಅವರ ಎರಡು ಹಿಂದಿ ಚಿತ್ರಗಳೀಗ ತೆರೆಗೆ ಸಿದ್ಧವಾಗುತ್ತಿವೆ. ‘ಗೀತ ಗೋವಿಂದಂ’ ತೆಲುಗು ಸಿನಿಮಾದ ಯಶಸ್ಸು ಅವರಿಗೆ ಒಂದೊಳ್ಳೆಯ ಬ್ರೇಕ್‌ ಆಯ್ತು. ಈ ಚಿತ್ರದ ನಂತರ ಅವರ ಹೆಸರು ವಿಜಯ್‌ ದೇವರಕೊಂಡ ಅವರೊಂದಿಗೆ ಥಳುಕುಹಾಕಿಕೊಂಡಿತು. ಮುಂದೆ ಇಬ್ಬರೂ ಮತ್ತೆ ‘ಡಿಯರ್‌ ಕಾಮ್ರೇಡ್‌’ ತೆಲುಗು ಚಿತ್ರದಲ್ಲಿ ಜೊತೆಯಾದರು. ಈ ಚಿತ್ರದ ನಾಯಕಿಯ ಹುಡುಕಾಟ ನಡೆದಿದ್ದಾಗ ಹೀರೋ ವಿಜಯ್‌ ದೇವರಕೊಂಡ ಅವರೇ ರಶ್ಮಿಕಾ ಮಂದಣ್ಣ ಹೆಸರು ಸೂಚಿಸಿದ್ದರು ಎನ್ನಲಾಗಿತ್ತು. ಮುಂದೆ ಇಬ್ಬರೂ ಹಲವು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳತೊಡಗಿದರು.

ಮುಂಬಯಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇಬ್ಬರೂ ಗೋವಾದಲ್ಲಿ ನ್ಯೂಯಿಯರ್‌ ಪಾರ್ಟಿ ಮಾಡಿದರು. ಸದ್ಯ ಮುಂಬಯಿಯಲ್ಲಿ ‘ಲೈಗರ್‌’ ಹಿಂದಿ – ತೆಲುಗು ದ್ವಿಭಾಷಾ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ ವಿಜಯ್‌. ಮೊನ್ನೆ ನಟಿ ರಶ್ಮಿಕಾ ಮಂದಣ್ಣ ಮುಂಬಯಿಯಲ್ಲಿ ಫ್ಲ್ಯಾಟ್‌ ಖರೀದಿಸಿದ್ದು, ಇವರ ಮದುವೆ ವದಂತಿಗೆ ಪುಷ್ಠಿ ನೀಡಿದೆ. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಇಬ್ಬರೂ ಎಲ್ಲಿಯೂ ಮಾತನಾಡುತ್ತಿಲ್ಲ. ಈ ವರ್ಷದ ಕೊನೆಗೆ ವಿಜಯ್‌ – ರಶ್ಮಿಕಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಂತೂ ಸಿನಿಮಾ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ‘ಕಿರಿಕ್‌ ಪಾರ್ಟಿ’ ಕನ್ನಡ ಸಿನಿಮಾದ ದೊಡ್ಡ ಯಶಸ್ಸು ನಟಿ ರಶ್ಮಿಕಾ ಮಂದಣ್ಣ ಅವರನ್ನು ಜನಪ್ರಿಯ ನಟಿಯನ್ನಾಗಿ ರೂಪಿಸಿತು. 2017ರ ಜುಲೈನಲ್ಲಿ ‘ಕಿರಿಕ್‌ ಪಾರ್ಟಿ’ ಹೀರೋ ರಕ್ಷಿತ್‌ ಶೆಟ್ಟಿ ಜೊತೆ ರಶ್ಮಿಕಾ ಎಂಗೇಜ್‌ಮೆಂಟ್‌ ಕೂಡ ನೆರವೇರಿತ್ತು. ಮುಂದಿನ ದಿನಗಳಲ್ಲಿ ನಿಶ್ಚಿತಾರ್ಥ ಮುರಿದುಬಿದ್ದಾಗ ರಕ್ಷಿತ್‌ ಅಭಿಮಾನಿಗಳು ರಶ್ಮಿಕಾ ವಿರುದ್ಧ ಕಿರಿಕಾರಿದ್ದರು.

‘ಗೀತ ಗೋವಿಂದಂ’ ತೆಲುಗು ಸಿನಿಮಾ ಸಾಂಗ್‌
Previous articleಟ್ರೈಲರ್‌ | ಕಾಶ್ಮೀರ ನರಮೇಧದ ಕತೆ ಹೇಳುವ ‘ದಿ ಕಾಶ್ಮೀರ್‌ ಫೈಲ್ಸ್‌’
Next article‘ಶಾಕುಂತಲಂ’ ಸಿನಿಮಾ ಫಸ್ಟ್‌ಲುಕ್‌; ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡ ಸಮಂತಾ

LEAVE A REPLY

Connect with

Please enter your comment!
Please enter your name here