ಅಜಯ್ ರಾವ್‌ ಮತ್ತು ರಚಿತಾ ರಾಮ್ ಅಭಿನದಯ ‘ಲವ್ ಯೂ ರಚ್ಚು’ ಚಿತ್ರದ ‘ಮುದ್ದಿ ನೀನು’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಗುರು ದೇಶಪಾಂಡೆ ನಿರ್ಮಾಣದ ಸಿನಿಮಾದ ಈ ಹಾಡಿಗೆ ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜನೆಯಿದ್ದು ಸಿದ್ ಶ್ರೀರಾಮ್‌ ಮತ್ತು ಸುಪ್ರಿಯಾ ರಾಮ್‌ ಗಾಯನವಿದೆ.

ಅಜಯ್ ರಾವ್‌ ಮತ್ತು ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಚಿತ್ರದ ವೀಡಿಯೋ ಸಾಂಗ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ದೊಡ್ಡ ವೀಕ್ಷಣೆ ಪಡೆದಿದೆ. ನಾಗಾರ್ಜುನ್ ಶರ್ಮಾ ರಚಿಸಿರುವ ಈ ಹಾಡಿಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದು, ಸಿದ್ ಶ್ರೀರಾಮ್ ಮತ್ತು ಸುಪ್ರಿಯಾ ರಾಮ್ ದನಿಯಾಗಿದ್ದಾರೆ. ಮಧುರ ಸಂಗೀತದ ಹಾಡಿನಲ್ಲಿ ಸಿದ್ ಶ್ರೀರಾಮ್‌ ಧ್ವನಿ ವಿಶೇಷವೆನಿಸುತ್ತದೆ. ಚಿತ್ರದ ನಾಯಕ – ನಾಯಕಿಯ ಪ್ರೀತಿ, ಮದುವೆ, ಪ್ರಣಯದ ದೃಶ್ಯಗಳು ಹಾಡಿನಲ್ಲಿವೆ. ಆಕರ್ಷಕ ಪಿಕ್ಚರೈಸೇಷನ್‌ನಿಂದಲೂ ಹಾಡು ಗಮನ ಸೆಳೆಯುತ್ತದೆ. ಗುರು ದೇಶಪಾಂಡೆ ನಿರ್ಮಾಣದ ಚಿತ್ರವನ್ನು ಶಂಕರ್ ರಾಜ್ ನಿರ್ದೇಶಿಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಚಿತ್ರದ ಸಾಹಸ ಸನ್ನಿವೇಶವನ್ನು ಚಿತ್ರಿಸುವ ಸಂದರ್ಭದ ಆಕಸ್ಮಿಕದಲ್ಲಿ ಸ್ಟಂಟ್‌ಮ್ಯಾನ್‌ ಮರಣಹೊಂದಿದ್ದರು. ಈ ವಿಚಾರವಾಗಿ ನಿರ್ಮಾಪಕ ಗುರು ದೇಶಪಾಂಡೆ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿತ್ತು. ಈ ಆಘಾತದಿಂದ ಚೇತರಿಸಿಕೊಂಡ ಚಿತ್ರತಂಡ ಸಿನಿಮಾ ಪೂರ್ಣಗೊಳಿಸಿ ಇದೀಗ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಒಂದು ಹಾಡು ಕ್ಲಿಕ್ಕಾಗಿತ್ತು.  ಇದೀಗ ‘ಮುದ್ದು ನೀನು’ ಹಾಡು ರಿಲೀಸ್ ಆಗಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಚ್ಯುತ್ ಕುಮಾರ್, ಬಿ.ಸುರೇಶ, ರಾಘು ಶಿವಮೊಗ್ಗ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here