‘ಕೆಜಿಎಫ್‌’ ಸಿನಿಮಾ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆಯ ‘ಅಂತಿಮ್‌’ ಹಿಂದಿ ಚಿತ್ರದ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಶಬ್ಬೀರ್ ಅಹ್ಮದ್‌ ರಚನೆಯ ಈ ಗೀತೆಯನ್ನು ಜುಬಿನ್ ನೌಟಿಯಾಲ್ ಹಾಡಿದ್ದಾರೆ. ಆಯುಷ್ ಶರ್ಮಾ ಮತ್ತು ಮಹಿಮಾ ಮಕ್ವಾನಾ ಅವರ ಮೇಲೆ ಹಾಡು ಪಿಕ್ಚರೈಸ್ ಆಗಿದೆ.

ಸಲ್ಮಾನ್ ಖಾನ್‌ ನಿರ್ಮಿಸಿ, ನಟಿಸಿರುವ ‘ಅಂತಿಮ್‌’ ಹಿಂದಿ ಚಿತ್ರದ ‘ಹೋನೆ ಲಗಾ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್‌’ ಖ್ಯಾತಿಯ ಕನ್ನಡಿಗ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಎನ್ನುವುದು ವಿಶೇಷ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಯುಷ್ ಶರ್ಮಾ ಮತ್ತು ಮಹಿಮಾ ಮಕ್ವಾನಾ ಜೋಡಿಯ ಮೇಲೆ ಈ ರೊಮ್ಯಾಂಟಿಕ್ ಹಾಡು ಪಿಕ್ಚರೈಸ್ ಆಗಿದೆ. ಶಬ್ಬೀರ್ ಅಹ್ಮದ್‌ ರಚನೆಯ ಗೀತೆಯನ್ನು ಜುಬಿನ್ ನೌತಿವಾಲಾ ಹಾಡಿದ್ದಾರೆ. ಇಲ್ಲಿಯವರೆಗಿನ ‘ಅಂತಿಮ್‌’ ಚಿತ್ರದ ಪೋಸ್ಟರ್‌, ಟೀಸರ್‌ಗಳು ವಯಲೆನ್ಸ್‌ ಸಾರುತ್ತಿದ್ದವು. ಈ ಹಾಡಿನ ಮೂಲಕ ಆಯುಷ್ ಶರ್ಮಾ ಪಾತ್ರದ ಇನ್ನೊಂದು ಶೇಡ್ ಪರಿಚಯವಾಗಿದೆ.

‘ಅಂತಿಮ್‌’ ಚಿತ್ರದಲ್ಲಿ ಸಲ್ಮಾನ್ ಖಾನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಆಯುಷ್ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ವೀಡಿಯೋ ಸಾಂಗ್ ಶೇರ್ ಮಾಡಿ ಅಭಿಮಾನಿಗಳ ಹಾರೈಕೆ ಅಪೇಕ್ಷಿಸಿದ್ದಾರೆ. ‘ಮೊಹೆ ರಂಗ್‌ ದೆ’ ಕಿರುತೆರೆ ಶೋನಲ್ಲಿ ಬಾಲನಟಿಯಾಗಿದ್ದ ಮಹಿಮಾ ಮಕ್ವಾನಾ ಪ್ರಸ್ತುತ ಕಿರುತೆರೆ ಧಾರಾವಾಹಿಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದರು. ‘ಅಂತಿಮ್‌’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಕನ್ನಡಿಗ ರವಿ ಬಸ್ರೂರು ಈ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here