ಅತಿ ಹೆಚ್ಚು ಸರ್ಚ್‌ ಮಾಡಿದ 2023ರ ಭಾರತದ ಟಾಪ್‌ 15 ವೀಡಿಯೋ ಆಲ್ಬಂ ಪಟ್ಟಿಯನ್ನು YouTube ಬಿಡುಗಡೆ ಮಾಡಿದೆ. ಪವನ್ ಸಿಂಗ್ ಮತ್ತು ಶಿವಾನಿ ಸಿಂಗ್ ಹಾಡಿರುವ ಭೋಜ್‌ಪುರಿ ಹಾಡು ‘ಧನಿ ಹೋ ಸಬ್ ಧನ್’ ಮೊದಲ ಸ್ಥಾನದಲ್ಲಿದೆ. ‘ಜರಾ ಹಟ್ಕೆ ಜರಾ ಬಚ್ಕೆ’ ಹಿಂದಿ ಚಿತ್ರದ ‘ತೇರೆ ವಾಸ್ತೆ’ 2ನೇ ಸ್ಥಾನದಲ್ಲಿದ್ದರೆ, ‘ಜೈಲರ್‌’ ಸಿನಿಮಾದ ‘ಕಾವಾಲ’ ಸಾಂಗ್‌ 6ನೇ ಸ್ಥಾನ ಪಡೆದುಕೊಂಡಿದೆ.

ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 15 ಸಂಗೀತ ವೀಡಿಯೊಗಳ ಪಟ್ಟಿಯನ್ನು YouTube ಬಿಡುಗಡೆ ಮಾಡಿದೆ. ವಿಕ್ಕಿ ಕೌಶಲ್ ಮತ್ತು ರಜನಿಕಾಂತ್ ಅವರ ಹಾಡುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪವನ್ ಸಿಂಗ್ ಮತ್ತು ಶಿವಾನಿ ಸಿಂಗ್ ಹಾಡಿರುವ ಭೋಜ್‌ಪುರಿ ಹಾಡು ‘ಧನಿ ಹೋ ಸಬ್ ಧನ್’ ಮೊದಲ ಸ್ಥಾನದಲ್ಲಿದೆ. ಈ ಹಾಡಿಗೆ ಅಶುತೋಷ್ ತಿವಾರಿ ಸಾಹಿತ್ಯ ರಚಿಸಿದ್ದು, ಪ್ರಿಯಾಂಶು ಸಿಂಗ್ ಸಂಗೀತ ಸಂಯೋಜಿಸಿದ್ದಾರೆ. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ‘ಜರಾ ಹಟ್ಕೆ ಜರಾ ಬಚ್ಕೆ’ ಹಿಂದಿ ಚಿತ್ರದ ‘ತೇರೆ ವಾಸ್ತೆ’ ಹಾಡು 2 ನೇ ಸ್ಥಾನ ಪಡೆದುಕೊಂಡಿದೆ. ಸಚಿನ್ ಮತ್ತು ಜಿಗರ್ ಸಂಯೋಜಿಸಿರುವ ಈ ಹಾಡನ್ನು ವರುಣ್ ಜೈನ್, ಸಚಿನ್-ಜಿಗರ್, ಶಾದಾಬ್ ಫರಿದಿ ಮತ್ತು ಅಲ್ತಮಶ್ ಫರಿದಿ ಹಾಡಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ರಚಿಸಿದ್ದಾರೆ.

ಮೂರನೇ ಸ್ಥಾನ ‘ಝಿಹಾಲ್ ಇ ಮಿಸ್ಕಿನ್’ ಸಾಂಗ್‌ಗೆ. ಇದನ್ನು ವಿಶಾಲ್ ಮಿಶ್ರಾ ಮತ್ತು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಜಾವೇದ್-ಮೊಹ್ಸಿನ್ ಸಂಗೀತ ಸಂಯೋಜಿಸಿರುವ ಈ ಗೀತೆಯು ಕುನಾಲ್ ವರ್ಮಾ ಸಾಹಿತ್ಯವನ್ನು ಒಳಗೊಂಡಿದೆ. ‘ಕ್ಯಾ ಲೋಗೆ ತುಮ್’ ಹಾಡು 4ನೇ ಸ್ಥಾನದಲ್ಲಿದೆ. 6ನೇ ಸ್ಥಾನವನ್ನು ರಜನೀಕಾಂತ್ ಅಭಿನಯದ ‘ಜೈಲರ್’ ಚಿತ್ರದ ‘ಕಾವಾಲ’ ಹಾಡು ಪಡೆದುಕೊಂಡಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಗೀತೆಯನ್ನು ಶ್ರೇಯಾ ಘೋಶಲ್ ಹಾಡಿದ್ದಾರೆ. 7ನೇ ಸ್ಥಾನವನ್ನು ರವಿತೇಜ ಅವರ ‘ಧಮಾಕಾ’ ಹಿಟ್ ಹಾಡು ‘ಪಲ್ಸರ್ ಬೈಕ್’ ಪಡೆದುಕೊಂಡಿದೆ. ಈ ಹಾಡನ್ನು ಭೀಮ್ಸ್ ಸಿಸಿರೊಲಿಯೊ ಹಾಡಿದ್ದಾರೆ.

‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ‘ಫಿರ್ ಔರ್ ಕ್ಯಾ ಚಾಹಿಯೇ’ 10ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಜಯ್ ಅಭಿನಯದ ‘ಲಿಯೋ’ ಸಿನಿಮಾದ ‘ನಾ ರೆಡಿ’ 11ನೇ ಸ್ಥಾನವನ್ನು, ಜಸ್ಲೀನ್ ರಾಯಲ್ ಮತ್ತು ಅರಿಜಿತ್ ಸಿಂಗ್ ಸಹಯೋಗದ ‘ಹೀರಿಯೆ’ ಗೀತೆ 12ನೇ ಸ್ಥಾನವನ್ನು, ಸಲ್ಮಾನ್ ಖಾನ್ ಅಭಿನಯದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌’ ಚಿತ್ರದ ‘ನೈಯೋ ಲಗ್ದಾ’ ಗೀತೆಯು 14ನೇ ಸ್ಥಾನವನ್ನು ಪಡೆದುಕೊಂಡಿದೆ. ಕಮಾಲ್ ಖಾನ್ ಮತ್ತು ಪಾಲಕ್ ಮುಚ್ಚಲ್ ಈ ಹಾಡನ್ನು ಹಾಡಿದ್ದಾರೆ. ಹಿಮೇಶ್ ರೇಶಮಿಯಾ ಸಂಗೀತ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here