ಧರ್ಮ ಪ್ರೊಡಕ್ಷನ್ಸ್‌ನಡಿ ಕರಣ್‌ ಜೋಹರ್‌ ನಿರ್ಮಿಸಿರುವ ‘ಶೋ ಟೈಮ್‌’ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ನಾಸಿರುದ್ದೀನ್ ಷಾ, ಇಮ್ರಾನ್ ಹಶ್ಮಿ ಮತ್ತು ಮೌನಿ ರಾಯ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2024ರಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಕರಣ್ ಜೋಹರ್ ನಿರ್ಮಾಣದ ‘ಶೋ ಟೈಮ್’ ಹಿಂದಿ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಸ್ವಜನಪಕ್ಷಪಾತ ಕುರಿತಾದ ಈ ಸರಣಿಯಲ್ಲಿ ನಾಸಿರುದ್ದೀನ್ ಷಾ, ಇಮ್ರಾನ್ ಹಶ್ಮಿ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿ ಮೌನಿ ರಾಯ್‌ ನರ್ತಕಿಯಾಗಿ ಕಾಣಿಸಿಕೊಂಡಿದ್ದು, ‘ಬಾದ್‌ಶಾ ಆಫ್ ಬಾಲಿವುಡ್’ ಎಂಬ ಹಲವು ಗ್ಲಿಂಪ್ಸಸ್ ತೋರಿಸಲಾಗಿದೆ. ‘ಸ್ವಜನಪಕ್ಷಪಾತ ಎಂಬುದು ಪ್ರತಿಯೊಬ್ಬರಲ್ಲೂ ಇರುತ್ತದೆ. ನಮ್ಮವರಾಗ ಬಯಸುವ ಪ್ರತಿ ಅಪರಿಚಿತರು ಅದನ್ನು ಹೊಂದಿರುತ್ತಾರೆ’ ಎಂದು ಇಮ್ರಾನ್‌ ಹೇಳಿದ್ದಾರೆ. ‘ಸಿನಿಮಾ ಕೇವಲ ವ್ಯವಹಾರವಲ್ಲ, ನನ್ನ ಪ್ರಕಾರ ಅದೊಂದು ಧರ್ಮವೂ ಹೌದು’ ಎಂದು ನಾಸಿರುದ್ದೀನ್‌ ಹೇಳಿರುವುದನ್ನು ಸಹ ಕಾಣಬಹುದು. ಈ ಸರಣಿಯನ್ನು Dharma Productions ಬ್ಯಾನರ್‌ ಅಡಿಯಲ್ಲಿ ಅಪೂರ್ವ ಮೆಹ್ತಾ, ಸೋಮೆನ್ ಮಿಶ್ರಾ ಮತ್ತು ಮಿಹಿರ್ ದೇಸಾಯಿ ನಿರ್ಮಿಸಿದ್ದಾರೆ.

ಸುಮಿತ್ ರಾಯ್ ರಚಿಸಿರುವ ಸರಣಿಗೆ ಮಿಹಿರ್ ದೇಸಾಯಿ ಮತ್ತು ಅರ್ಚಿತ್ ಕುಮಾರ್ ನಿರ್ದೇಶನವಿದೆ. ಸರಣಿಯಲ್ಲಿ ಮಹಿಮಾ ಮಕ್ವಾನಾ, ರಾಜೀವ್ ಖಂಡೇಲ್‌ವಾಲಾ, ಶ್ರಿಯಾ ಶರನ್ ಮತ್ತು ವಿಜಯ್ ರಾಜ್ ಇತರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರಣಿಗೆ ಸುಮಿತ್ ರಾಯ್, ಲಾರಾ ಚಾಂದಿನಿ ಮತ್ತು ಮಿಥುನ್ ಗಂಗೋಪಾಧ್ಯಾಯ ಕಥೆ ರಚಿಸಿದ್ದು, ಜಹಾನ್ ಹಂದಾ ಮತ್ತು ಕರಣ್ ಶ್ರೀಕಾಂತ್ ಶರ್ಮಾ ಸಂಭಾಷಣೆ ಬರೆದಿದ್ದಾರೆ. ಆನಂದ್ ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಸರಣಿಯು 2024ರಲ್ಲಿ Hotstarನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಇಮ್ರಾನ್ ಇತ್ತೀಚೆಗೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ‘ಟೈಗರ್ 3’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೌನಿ ರಾಯ್ ‘ಬ್ರಹ್ಮಾಸ್ತ್ರ’ದಲ್ಲಿ ನಟಿಸಿದ್ದಾರೆ. ನಾಸಿರುದ್ದೀನ್ ಷಾ ಅವರು ಈ ವರ್ಷ ‘ತಾಜ್‌’ ವೆಬ್ ಸರಣಿಯಲ್ಲಿ ‘ಅಕ್ಬರ್’ ಪಾತ್ರಕ್ಕಾಗಿ ಪ್ರಶಂಸೆ ಗಳಿಸಿದ್ದರು.

LEAVE A REPLY

Connect with

Please enter your comment!
Please enter your name here