ತರುಣ್‌ ದುಡೇಜಾ ನಿರ್ದೇಶನದ ‘ಧಕ್‌ ಧಕ್‌’ ಹಿಂದಿ ಸಿನಿಮಾದ ಸರಣಿ ತಯಾರಾಗಲಿದೆ. ಚಿತ್ರದ ನಟಿ ಸಂಜನಾ ಸಂಘಿ ಸೀಕ್ವೆಲ್‌ ಕುರಿತ ಮಾಹಿತಿ ಖಚಿತಪಡಿಸಿದ್ದಾರೆ. ‘ಧಕ್‌ ಧಕ್‌’ನಲ್ಲಿ ರತ್ನ ಪಾಠಕ್‌ ಶಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್‌ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್‌ 13ರಂದು ಥಿಯೇಟರ್‌ಗೆ ಬಂದಿತ್ತು.

‘ಧಕ್‌ ಧಕ್‌’ ಹಿಂದಿ ಚಿತ್ರದ ಸೀಕ್ವೆಲ್‌ ಘೋಷಣೆಯಾಗಿದೆ. ಈ ಚಿತ್ರದಲ್ಲಿ ರತ್ನ ಪಾಠಕ್ ಶಾ, ದಿಯಾ ಮಿರ್ಜಾ, ಸಂಜನಾ ಸಂಘಿ ಮತ್ತು ಫಾತಿಮಾ ಸನಾ ಶೇಖ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತರುಣ್‌ ದುಡೇಜಾ ನಿರ್ದೇಶನದ ಚಿತ್ರ ಕಥಾವಸ್ತುವಿನಿಂದಾಗಿ ಗಮನ ಸೆಳೆದಿತ್ತು. ನಟಿ ಸಂಜನಾ ಸಂಘಿ ತಮ್ಮ ಸಾಮಾಜಿಕ ಖಾತೆಗಳಲ್ಲಿ ಸರಣಿ ಕುರಿತು ಮಾಹಿತಿಯನ್ನು ಖಚಿತ ಪಡಿಸಿದ್ದಾರೆ. ಸಿನಿಮಾದ ಸೀಕ್ವೆಲ್‌ ಅನ್ನು ಸಹ ತರುಣ್ ದುಡೇಜಾ ಅವರೇ ನಿರ್ದೇಶಿಸಲಿದ್ದಾರೆ. ‘ಧಕ್‌ ಧಕ್‌’ ಸಿನಿಮಾ ನಾಲ್ಕು ಮಹಿಳೆಯರ ಗುಂಪಿನ ಬೈಕ್‌ ರೈಡಿಂಗ್‌ ಯಾನದ ದೃಶ್ಯಗಳನ್ನು ಹೊಂದಿದೆ. ಈ ನಾಲ್ವರು ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇವರು ಜಗತ್ತಿನ ಅತ್ಯಂತ ಎತ್ತರದ ಮೋಟಾರು ಸಂಚರಿಸಬಲ್ಲ ರಸ್ತೆ ಖರ್ದುಂಗ್ಲಾ ಪಾಸ್‌ನಲ್ಲಿ ಬೈಕ್‌ ಓಡಿಸುವ ಸಾಹಸಕ್ಕೆ ಮುಂದಾಗುತ್ತಾರೆ.

ಭಾಗ ಒಂದರಲ್ಲಿ ಈ ನಾಲ್ಕು ಪಾತ್ರಗಳನ್ನು ಪರಿಚಯಿಸಲಾಗಿದ್ದು, ರತ್ನ ಪಾಠಕ್ ಷಾ ಪಾತ್ರ ವಿಶೇಷವಾಗಿದೆ. ಅವರು ತಮ್ಮದೇ ಶೈಲಿಯಲ್ಲಿ ಹಾಸ್ಯ ಸಂಭಾಷಣೆಗಳನ್ನು ಹೇಳಿ ಎಲ್ಲರನ್ನೂ ನಗಿಸುತ್ತಿರುತ್ತಾರೆ. ಟ್ರಾವೆಲ್ ಬ್ಲಾಗರ್ ಸ್ಕೈ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಪಾರಿಜಾತ ಜೋಶಿ ಮತ್ತು ತರುಣ್ ದುಡೇಜಾ ಚಿತ್ರಕಥೆ ಬರೆದಿದ್ದು, Viacom18 Media ಬ್ಯಾನರ್‌ ಅಡಿಯಲ್ಲಿ ಕೆವಿನ್ ವಾಜ್, ಅಜಿತ್ ಅಂಧಾರೆ, ತಾಪ್ಸಿ ಪನ್ನು, ಪ್ರಾಂಜಲ್ ಖಂಡಿಯಾ, ಆಯುಷ್ ಮಹೇಶ್ವರಿ ನಿರ್ಮಿಸಿದ್ದ ಈ ಸಿನಿಮಾ ಅಕ್ಟೋಬರ್‌ 13ರಂದು ಥಿಯೇಟರ್‌ಗೆ ಬಂದಿತ್ತು.

LEAVE A REPLY

Connect with

Please enter your comment!
Please enter your name here