YRF ಎಂಟರ್‌ಟೇನ್‌ಮೆಂಟ್ಸ್‌ನ ಮೊದಲ ವೆಬ್ ಸರಣಿ ‘ದಿ ರೈಲ್ವೇ ಮೆನ್’ ಘೋಷಣೆಯಾಗಿದೆ. ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಕತೆಯಿದು. ಶಿವ್ ರಾವೈಲ್ ನಿರ್ದೇಶನದ ಈ ಸರಣಿಯ ಟೀಸರ್ ಬಿಡುಗಡೆಯಾಗಿದೆ. ಆರ್.ಮಾಧವನ್, ಕೆ ಕೆ ಮೆನನ್, ದಿವ್ಯೇಂದು ಶರ್ಮಾ, ಬಾಬಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್‌ನ ಪ್ರತಿಷ್ಠಿತ ಯಶ್ ರಾಜ್ ನಿರ್ಮಾಣ ಸಂಸ್ಥೆ ‘ದಿ ರೈಲ್ವೇ ಮೆನ್’ ಸರಣಿಯೊಂದಿಗೆ ಡಿಜಿಟಲ್ ಜಗತ್ತನ್ನು ಪ್ರವೇಶಿಸುತ್ತಿದೆ. YRF ಎಂಟರ್‌ಟೇನ್‌ಮೆಂಟ್‌ನಡಿ ಸ್ಟ್ರೀಮಿಂಗ್ ಕಂಟೆಂಟ್ ತಯಾರಾಗಲಿದೆ. ಅವರ ಮೊದಲ ವೆಬ್ ಸರಣಿ ‘ದಿ ರೈಲ್ವೇ ಮೆನ್’ನಲ್ಲಿ ಆರ್.ಮಾಧವನ್, ಕೆ ಕೆ ಮೆನನ್, ದಿವ್ಯೇಂದು ಶರ್ಮಾ ಮತ್ತು ಅಗಲಿದ ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ದಿ ರೈಲ್ವೇ ಮೆನ್’ ನಿನ್ನೆ ಡಿಸೆಂಬರ್ 1ರಿಂದ ಚಿತ್ರೀಕರಣ ಆರಂಭಿಸಿದ್ದು, 2022ರ ಡಿಸೆಂಬರ್ 2ರಂದು ಸ್ಟ್ರೀಮ್ ಆಗಲಿದೆ.
1984ರ ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಜಗತ್ತಿನ ಅತಿ ದೊಡ್ಡ ಮ್ಯಾನ್‌ಮೇಡ್ ಇಂಡಸ್ಟ್ರಿಯಲ್ ಡಿಸಾಸ್ಟರ್. ಈ ದುರಂತದ ಕತೆಯೇ ‘ದಿ ರೈಲ್ವೇ ಮೆನ್’. 37 ವರ್ಷಗಳ ಹಿಂದೆ ಇದೇ ದಿನ ಈ ಟ್ರ್ಯಾಜಿಡಿ ಸಂಭವಿಸಿತ್ತು. ಈ ದುರಂತದಲ್ಲಿ ಜನರನ್ನು ರಕ್ಷಿಸಿ ನಿಜವಾದ ಹೀರೋಗಳಾದ ರೈಲ್ವೇ ನೌಕರರ ಕತೆಯನ್ನು ನಿರ್ದೇಶಕ ಶಿವ್ ರಾವೈಲ್ ಇಲ್ಲಿ ಹೇಳಲಿದ್ದಾರೆ. ಈ ಮೂಲಕ ಯಾರಿಗೂ ಗೊತ್ತಿರದ ಈ ಹೀರೋಗಳ ಬದುಕಿನ ಬೆಳಕು ಚೆಲ್ಲಲಿದ್ದಾರೆ. ಈ ಸರಣಿ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.