ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ತೆಲುಗು ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ನಟಿ ಸಮಂತಾ ಹೆಜ್ಜೆ ಹಾಕುತ್ತಿದ್ದಾರೆ. ಚಿತ್ರ ನಿರ್ಮಿಸುತ್ತಿರುವ ಮೈತ್ರಿ ಮೂವೀ ಮೇಕರ್ಸ್‌ ತನ್ನ ಟ್ವಿಟರ್ ಖಾತೆಯಲ್ಲಿ ಸಮಂತಾ ಫಸ್ಟ್‌ಲುಕ್ ಬಡುಗಡೆ ಮಾಡಿದೆ. ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್‌ 17ರಂದು ತೆರೆಕಾಣಲಿದೆ.

ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಜೋಡಿಯ ‘ಪುಷ್ಪ’ ಚಿತ್ರದ ಸ್ಪೆಷಲ್‌ ಡ್ಯಾನ್ಸ್ ನಂಬರ್‌ನ ನಟಿ ಸಮಂತಾ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯ ಈ ಹಾಡಿನಲ್ಲಿ ನಟಿಯ ಜೊತೆ ಅಲ್ಲು ಅರ್ಜುನ್ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಈ ಹಾಡಿಗೆ ನೃತ್ಯ ಸಂಯೋಜಿಸುತ್ತಿದ್ದಾರೆ ಎನ್ನಲಾಗಿದೆ. ‘ಸಿಝ್ಲಿಂಗ್ ಮಾಸ್ ಮ್ಯೂಸಿಕಲ್‌’ ಎನ್ನುವ ಶೀರ್ಷಿಕೆಯೊಂದಿಗೆ ಚಿತ್ರ ನಿರ್ಮಿಸುತ್ತಿರುವ ಮೈತ್ರಿ ಮೂವೀ ಮೇಕರ್ಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಫಸ್ಟ್‌ಲುಕ್ ಟ್ವೀಟ್ ಮಾಡಿದೆ. ನಟಿ ಸಮಂತಾ ಈ ಹಿಂದೆ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದರು. “ಪುಷ್ಪ ಚಿತ್ರದ ಐದನೇ ಹಾಡು ಸ್ಪೆಷಲ್ ನಂಬರ್ ಆಗಲಿದೆ. ಇದಕ್ಕೆ ವಿಶೇಷ ವ್ಯಕ್ತಿಯೊಬ್ಬರು ಬೇಕಿತ್ತು! ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಲಿರುವ ವಿಷಯ ಹಂಚಿಕೊಳ್ಳುತ್ತಿರುವುದು ನಮಗೆ ಖುಷಿ ತಂದಿದೆ. ಇದೊಂದು ವಿಶೇಷ ಹಾಡಾಗಿ ದಾಖಲಾಗಲಿದೆ” ಎಂದು ಚಿತ್ರತಂಡ ಇತ್ತೀಚೆಗೆ ಟ್ವೀಟ್ ಮಾಡಿತ್ತು.

ಸಮಂತಾರ ಸ್ಪೆಷಲ್ ಡ್ಯಾನ್ಸ್‌ ನಂಬರ್‌ನೊಂದಿಗೆ ‘ಪುಷ್ಪ’ ಚಿತ್ರೀಕರಣ ಪೂರ್ಣಗೊಳ್ಳಲಿದೆ. ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಮೂರನೇ ಬಾರಿ ‘ಪುಷ್ಪ’ದಲ್ಲಿ ಜೊತೆಯಾಗುತ್ತಿದ್ದಾರೆ. ಈ ಹಿಂದೆ ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ರ ‘ಆರ್ಯ’ ಮತ್ತು ‘ಆರ್ಯ 2’ ತೆರೆಕಂಡಿದ್ದವು. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಮುತ್ತಮ್ ಸೆಟ್ಟಿ ಮೀಡಿಯಾ ನಿರ್ಮಾಣದಲ್ಲಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾವ್ ರಮೇಶ್‌, ಅಜಯ್ ಘೋಷ್‌, ಅನಸೂಯ ಭಾರದ್ವಾಜ್‌ ನಟಿಸಿದ್ದಾರೆ. ಡಿಸೆಂಬರ್‌ 17ರಂದು ಚಿತ್ರ ತೆರೆಕಾಣಲಿದೆ. ಮೂಲ ತೆಲುಗು ಜೊತೆಗೆ ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲೂ ಡಬ್ಬಿಂಗ್ ಅವತರಣಿಕೆಗಳು ಬಿಡುಗಡೆಯಾಗಲಿವೆ.

LEAVE A REPLY

Connect with

Please enter your comment!
Please enter your name here