ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಅಭಿನಯದ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ. ಈ ಹಿಂದೆ ‘ಗೀತಾ ಗೋವಿಂದಂ’ ಹಿಟ್‌ ಸಿನಿಮಾ ನಿರ್ದೇಶಿಸಿದ್ದ ಪರಶುರಾಮ್‌ ಸಾರಥ್ಯದಲ್ಲಿ ತಯಾರಾಗಲಿರುವ ಚಿತ್ರದ ಬಗ್ಗೆ ಟಾಲಿವುಡ್‌ ಭಾರೀ ನಿರೀಕ್ಷೆ ಹೊಂದಿದೆ.

ನಟ ವಿಜಯ್‌ ದೇವರಕೊಂಡ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾ ‘ಗೀತ ಗೋವಿಂದಂ’. ಕನ್ನಡ ಮೂಲದ ರಶ್ಮಿಕಾ ಮಂದಣ್ಣ ಕೂಡ ಈ ಚಿತ್ರದೊಂದಿಗೆ ಟಾಲಿವುಡ್‌ನಲ್ಲಿ ಭದ್ರ ನೆಲೆ ಕಂಡರು. ಆ ಸಿನಿಮಾ ನಿರ್ದೇಶಿಸಿದ್ದ ಪರಶುರಾಮ್‌ ಸಾರಥ್ಯದಲ್ಲಿ ವಿಜಯ್‌ ದೇವರಕೊಂಡ ನೂತನ ಸಿನಿಮಾ ಸೆಟ್ಟೇರಿದೆ. ಚಿತ್ರದ ನಾಯಕಿಯಾಗಿ ಮೃಣಾಲ್‌ ಠಾಕೂರ್‌ ನಟಿಸುತ್ತಿದ್ದಾರೆ. ಐದು ವರ್ಷಗಳ ನಂತರ ಮತ್ತೊಮ್ಮೆ ಪರಶುರಾಮ್‌ – ದೇವರಕೊಂಡ ಜೊತೆಯಾಗಿದ್ದು, ಈ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ಭರವಸೆ ಮೂಡಿದೆ.

ಹೈದರಾಬಾದ್‌ನಲ್ಲಿ ಇಂದು ಸಿನಿಮಾದ ಮುಹೂರ್ತ ನೆರವೇರಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲ್ಯಾಪ್ ಮಾಡಿದರೆ, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದರು. ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಸೀತಾರಾಮಂ’ ಸಿನಿಮಾ ಮೂಲಕ ದಕ್ಷಿಣದ ಸಿನಿಪ್ರೇಮಿಗಳಿಗೆ ಪರಿಚಯವಾಗಿದ್ದ ಮೃಣಾಲ್ ಠಾಕೂರ್ ಮೊದಲ ಬಾರಿ ವಿಜಯ್ ದೇವರಕೊಂಡಗೆ ನಾಯಕಿಯಾಗಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ತಯಾರಾಗಲಿದ್ದು ಇತರೆ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ. ಗೋಪಿಸುಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Previous articleಆರ್ಕೆಸ್ಟ್ರಾ ತಂಡಗಳ ಒಳಗಿನ ಬದುಕು – ‘ಆರ್ಕೇಸ್ಟ್ರಾ ಮೈಸೂರು’
Next article‘ಗೀತಾ ಗೋವಿಂದಂ’ ನಿರ್ದೇಶಕನ ಜೊತೆ ಮತ್ತೊಮ್ಮೆ ವಿಜಯ್‌ ದೇವರಕೊಂಡ

LEAVE A REPLY

Connect with

Please enter your comment!
Please enter your name here