ಭಾರತದಲ್ಲಿ ಮೊದಲ ಬಾರಿ ಮಿಸ್‌ ವರ್ಲ್ಡ್‌ ಸ್ಪರ್ಧೆ 1996ರ ನವೆಂಬರ್‌ 23ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು. 27 ವರ್ಷಗಳ ನಂತರ ಮತ್ತೊಮ್ಮೆ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗೆ ಭಾರತ ಸಾಕ್ಷಿಯಾಗಲಿದೆ. ಇದೇ ವರ್ಷ ‘Miss World’ 71ನೇ ಆವೃತ್ತಿ ಭಾರತದಲ್ಲಿ ನಡೆಯಲಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿವೆ.

27 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ‘Miss World 2023’ ಭಾರತದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಲಿದ್ದು, Miss World – 2023 (71 ನೇ ಆವೃತ್ತಿ) ಈ ವರ್ಷದ ನವೆಂಬರ್‌ನಲ್ಲಿ ನಿರೀಕ್ಷಿಸಬಹುದು. ಭಾರತದಲ್ಲಿ ಮೊದಲ ಬಾರಿ 46ನೇ ಆವೃತ್ತಿ 1996ರ ನವೆಂಬರ್‌ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಗ್ರೀಸ್‌ನ Irene Skliva ವಿಜೇತೆಯಾಗಿ ಹೊರಹೊಮ್ಮಿದ್ದರು.

ಈ ಬಾರಿ ಆಯೋಜಿಸಿರುವ ವಿಶ್ವ ಸುಂದರಿ ಸ್ಪರ್ಧೆ ಭಾರತದಾದ್ಯಂತ ಅಂದಾಜು ಒಂದು ತಿಂಗಳ ಅವಧಿಯಲ್ಲಿ ನಡೆಯಲಿದ್ದು, ಹಲವು ದೇಶಗಳ ಸುಂದರಿಯರು ಸ್ಪರ್ಧಿಸಲಿದ್ದಾರೆ. ಭಾರತದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವ Miss World ಸಂಸ್ಥೆಯ ಅಧ್ಯಕ್ಷೆ ಮತ್ತು CEO Julia Morley ಈ ಕುರಿತು ಮಾಹಿತಿ ನೀಡಿದ್ದಾರೆ. ’71ನೇ ವಿಶ್ವ ಸುಂದರಿ ಸ್ಪರ್ಧೆಯ ಆವೃತ್ತಿಗೆ ಭಾರತ ಆತಿಥ್ಯ ವಹಿಸಿಕೊಂಡಿದೆ ಎಂದು ಘೋಷಣೆ ಮಾಡಲು ಸಂತೋಷಪಡುತ್ತೇನೆ. ಈ ದೇಶದ ವೈಶಿಷ್ಟ್ಯ, ವೈವಿಧ್ಯಮಯ ಸಂಸ್ಕೃತಿ ಹಾಗೂ ವಿಶ್ವ ದರ್ಜೆಯ ಆಕರ್ಷಣೀಯ ಸ್ಥಳಗಳ ಮಾಹಿತಿಯನ್ನು ಇಡೀ ಜಗತ್ತಿಗೆ ಪರಿಚಯಿಸಲು ಕಾತುರರಾಗಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷದ ‘Miss World 2022’ ವಿಜೇತೆ ಪೋಲೆಂಡ್‌ನ Karolina Bielawska ಅವರು ಭಾರತದಲ್ಲಿ ನಡೆಯಲಿರುವ ಸೌಂದರ್ಯ ಸ್ಪರ್ಧೆಯ ಪ್ರಚಾರ ರಾಯಭಾರಿ. ‘ಈ ಸುಂದರ ದೇಶದಲ್ಲಿ Miss World ಕಿರೀಟ ತೊಡಿಸಲು ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದಾರವರು.

ಈ ಬಾರಿಯ Miss World – 2023ರ ಸ್ಪರ್ಧೆಯಲ್ಲಿ, ‘Femina Miss India 2022’ ವಿಜೇತೆ ಆಗಿ ಹೊರ ಹೊಮ್ಮಿದ್ದ ಉಡುಪಿ ಮೂಲದ ಕನ್ನಡತಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತವು ಈವರೆಗೂ ಆರು ಬಾರಿ Miss World ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 60ರ ದಶಕದಲ್ಲಿ ಪ್ರಥಮ ಬಾರಿಗೆ ವಿಶ್ವಸುಂದರಿಯಾಗಿ ರೀಟಾ ಫರಿಯಾ (1966) ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000), ಮತ್ತು ಮಾನುಷಿ ಚಿಲ್ಲರ್ (2017) ಕಿರೀಟವನ್ನು ಮುಡಿಗೇರಿಕೊಂಡಿದ್ದಾರೆ.

‘ಈ ಪ್ರತಿಷ್ಠಿತ ಗೌರವವನ್ನು ಭಾರತದಲ್ಲಿ ನೀಡುತ್ತಿರುವ ನಿರ್ಧಾರವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಉತ್ತೇಜಿಸುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಕಾರಣವಾಗುವುದು ಈ ಸ್ಪರ್ಧೆಯ ಮೂಲ ಉದ್ದೇಶ’ ಎಂದು ಟಿಪ್ಪಣಿಯೊಂದನ್ನು Miss World ಸಂಸ್ಥೆ ತನ್ನ Instagram ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. (https://www.instagram.com/p/CtOOdY-NNAe/?igshid=NTc4MTIwNjQ2YQ) ಕಳೆದ ವರ್ಷ ಮಾರ್ಚ್‌ನ Puerto Rico ದಲ್ಲಿ Miss World 2022 ಸ್ಪರ್ಧೆ ನಡೆದಿತ್ತು. ಭಾರತದಲ್ಲಿ ನಡೆಯುಲಿರುವ ಸ್ಪರ್ಧೆಯ ದಿನಾಂಕಗಳು ಹಾಗೂ ಸ್ಥಳ ಸದ್ಯದಲ್ಲೇ ಪ್ರಕಟಗೊಳ್ಳಲಿವೆ.

LEAVE A REPLY

Connect with

Please enter your comment!
Please enter your name here