ಹಾಲಿವುಡ್‌ನ ಲೆಜೆಂಡರಿ ನಟ, ನಿರ್ದೇಶಕ ಬಸ್ಟರ್‌ ಕೀಟನ್‌ ಬಯೋಪಿಕ್‌ಗೆ ತಯಾರಿ ನಡೆದಿದೆ. ‘ಫೋರ್ಡ್‌ ವರ್ಸಸ್‌ ಫೆರಾರಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಜೇಮ್ಸ್‌ ಮ್ಯಾನ್‌ಗೋಲ್ಡ್‌ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

ಹಾಲಿವುಡ್‌ ಕಂಡ ಶ್ರೇಷ್ಠ ನಟ ಬಸ್ಟರ್‌ ಕೀಟನ್‌ ಜೀವನ – ಸಾಧನೆ ಕುರಿತ ಬಯೋಪಿಕ್‌ಗೆ ಸಿದ್ಧತೆ ನಡೆದಿದ್ದು, ಖ್ಯಾತ ನಿರ್ದೇಶಕ ಜೇಮ್ಸ್‌ ಮ್ಯಾನ್‌ಗೋಲ್ಡ್‌ ಸಿನಿಮಾ ನಿರ್ದೇಶಿಸಲಿದ್ಧಾರೆ. ಚಿತ್ರನಿರ್ಮಾಣದಲ್ಲಿ ಮ್ಯಾನ್‌ಗೋಲ್ಡ್‌ರಿಗೆ 20th ಸೆಂಚ್ಯೂರಿ ಸ್ಟುಡಿಯೋ ಕೈಜೋಡಿಸಲಿದೆ. ಲೇಖಕ ಮ್ಯಾರಿಯನ್‌ ಮೀಡ್‌ ಅವರ 1995ರ ಬಯೋಗ್ರಫಿ ‘ಬಸ್ಟರ್‌ ಕೀಟನ್‌: ಕಟ್‌ ಟು ದಿ ಚೇಸ್‌’ ಕೃತಿ ಆಧರಿಸಿ ಚಿತ್ರ ತಯಾರಾಗಲಿದ್ದು, ಈ ಬಗ್ಗೆ ಲೇಖಕರೊಂದಿಗೆ ಮಾತುಕತೆ ನಡೆದಿದೆ. ಈ ಕೃತಿಯಲ್ಲಿ ಕೀಟನ್‌ ಅವರ ಸಂಕಷ್ಟದ ಬಾಲ್ಯ, ಶಾಲಾ ವಿದ್ಯಾಭ್ಯಾಸವಿಲ್ಲದೆ ಅವರು ಎದುರಿಸಿದ ಅಪಮಾನಗಳು, ನಟನೆ, ಅವರ ಮಾಸ್ಟರ್‌ಪೀಸ್‌ ಸಿನಿಮಾಗಳು, ಅತಿಯಾದ ಕುಡಿತ, ಪ್ರೇಯಸಿಯರು, ಮದುವೆ, ಕುಟುಂಬದ ಸಂಪೂರ್ಣ ವಿವರಗಳಿವೆ.

ಹಾಲಿವುಡ್‌ನ ಸೈಲೆಂಟ್‌ ಸಿನಿಮಾ ಯುಗದಲ್ಲಿ ಸ್ಟಾರ್‌ ಆಗಿದ್ದ ಕೀಟನ್‌ ಹಾಸ್ಯ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದರು. ಶೆರ್ಲಾಕ್‌ ಜ್ಯೂನಿಯರ್‌, ದಿ ಜನರಲ್‌, ದಿ ಕ್ಯಾಮರಾಮನ್‌ ಸೇರಿದಂತೆ ಅವರ ನಿರ್ದೇಶನದ ಹಲವು ಸಿನಿಮಾಗಳು ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಆಂಗಿಕ ಅಭಿನಯಕ್ಕೆ ಅವರು ಹೆಸರುವಾಸಿಯಾಗಿದ್ದರು. ಇನ್ನು ಬಸ್ಟರ್‌ ಕೀಟನ್‌ ಬಯೋಪಿಕ್‌ ನಿರ್ದೇಶಿಸುತ್ತಿರುವ ಮ್ಯಾನ್‌ಗೋಲ್ಡ್‌ ಅವರು ಗರ್ಲ್‌ ಇಂಟರಪ್ಟೆಡ್‌, ವಾಕ್‌ ದಿ ಲೈನ್‌, 3:10 ಟು ಯೂಮಾ, ಲೊಗಾನ್‌, ಫೋರ್ಡ್‌ ವರ್ಸಸ್‌ ಫೆರಾರಿ ಚಿತ್ರಗಳ ನಿರ್ದೇಶಕರಾಗಿ ಹಾಲಿವುಡ್‌ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.

Previous articleಟೀಸರ್‌ | ‘ಅಪಹರಣ್‌’ ಸೆಕೆಂಡ್‌ ಸೀಸನ್‌; ಶೀಘ್ರದಲ್ಲೇ Voot Select ನಲ್ಲಿ ಸರಣಿ
Next article‘ಭೀಮ್ಲಾ ನಾಯಕ್‌’ ಬಿಡುಗಡೆ ಹೊಸ್ತಿಲಲ್ಲಿ ಚಿರಂಜೀವಿ – ಪವನ್‌ ವೀಡಿಯೋ ಝಲಕ್‌

LEAVE A REPLY

Connect with

Please enter your comment!
Please enter your name here