15ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮೊನ್ನೆ ಮಾರ್ಚ್ 7ರಂದು ತೆರೆಬಿದ್ದಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ತೀರ್ಪುಗಾರರು ಗುರುತಿಸಿದ ಸಿನಿಮಾಗಳ ನಿರ್ದೇಶಕರಿಗೆ ಪ್ರಶಸ್ತಿ ವಿತರಿಸಲಾಯ್ತು. ಹಿರಿಯ ಚಿತ್ರನಿರ್ದೇಶಕ ಎಂ ಎಸ್ ಸತ್ಯು ‘ಜೀವಮಾನ ಸಾಧನೆ’ ಗೌರವಕ್ಕೆ ಪಾತ್ರರಾದರು.
ಹದಿನೈದನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ ಮಾರ್ಚ್ 7ರಂದು ಸಂಜೆ ನಡೆಯಿತು. ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ 15ನೇ Biffes ಕುರಿತು ಮಾತನಾಡಿ ಚಿತ್ರೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ವಿವಿಧ ಸ್ಪರ್ಧಾ ವಿಭಾಗಗಳ ಜ್ಯೂರಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯ್ತು. ಹಿರಿಯ ಚಿತ್ರನಿರ್ದೇಶಕ, ರಂಗಕರ್ಮಿ ಎಂ ಎಸ್ ಸತ್ಯು ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಚಿತ್ರೋತ್ಸವದ ಮೂರು ವಿಭಾಗಗಳಲ್ಲಿ ತೀರ್ಪುಗಾರರು ಗುರುತಿಸಿದ ಸಿನಿಮಾಗಳ ನಿರ್ದೇಶಕರಿಗೆ ಪ್ರಶಸ್ತಿ ವಿತರಿಸಲಾಯ್ತು. ಚಿತ್ರೋತ್ಸವದ ರಾಯಭಾರಿಯಾಗಿದ್ದ ನಟ ಡಾಲಿ ಧನಂಜಯ್ ಚಿತ್ರೋತ್ಸವದ ಯಶಸ್ಸಿಗೆ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಪ್ರಶಸ್ತಿ ಪುರಸ್ಕೃತರು
ಜೀವಮಾನ ಸಾಧನೆ ಪ್ರಶಸ್ತಿ | ಹಿರಿಯ ಚಿತ್ರನಿರ್ದೇಶಕ ಎಂ ಎಸ್ ಸತ್ಯು
ಕನ್ನಡ ಸಿನಿಮಾ ವಿಭಾಗ | ಪ್ರಥಮ ಅತ್ಯುತ್ತಮ ಸಿನಿಮಾ – ನಿರ್ವಾಣ (ನಿರ್ದೇಶನ – ಅಮರ್) | ದ್ವಿತೀಯ ಅತ್ಯುತ್ತಮ ಸಿನಿಮಾ – ಕಂದೀಲು (ನಿರ್ದೇಶನ – ಯಶೋದಾ ಪ್ರಕಾಶ್ | ತೃತೀಯ ಅತ್ಯುತ್ತಮ ಸಿನಿಮಾ – ಆಲ್ ಇಂಡಿಯಾ ರೇಡಿಯೋ (ನಿರ್ದೇಶನ – ರಂಗಸ್ವಾಮಿ ಎಸ್) | ವಿಶೇಷ ಜ್ಯೂರಿ ಪ್ರಶಸ್ತಿ – ಕ್ಷೇತ್ರಪತಿ (ನಿರ್ದೇಶನ – ಶ್ರೀಕಾಂತ್ ಕಟಗಿ) | NETPAC ಜ್ಯೂರಿ ಪ್ರಶಸ್ತಿ – ಸ್ವಾತಿ ಮುತ್ತಿನ ಮಳೆ ಹನಿಯೇ (ನಿರ್ದೇಶನ – ರಾಜ್ ಬಿ ಶೆಟ್ಟಿ)
ಭಾರತೀಯ ಸಿನಿಮಾ ವಿಭಾಗ | ಪ್ರಥಮ ಅತ್ಯುತ್ತಮ ಸಿನಿಮಾ – ಶ್ಯಾಮ್ಚಿ ಆಯಿ (ಮರಾಠಿ, ನಿರ್ದೇಶನ – ಸುಜಯ್ ದಹಕೆ) | ದ್ವಿತೀಯ ಅತ್ಯುತ್ತಮ ಸಿನಿಮಾ – ಅಯೋಥಿ (ತಮಿಳು, ನಿರ್ದೇಶನ – ಆರ್ ಮಂಥಿರಾ ಮೂರ್ತಿ) | ತೃತೀಯ ಅತ್ಯುತ್ತಮ ಸಿನಿಮಾ – ಛಾವೇರ್ (ಮಲಯಾಳಂ, ನಿರ್ದೇಶನ – ಟಿನು ಪಾಪಚಾನ್) | FIPRESCI ಪ್ರಶಸ್ತಿ – ಶ್ಯಾಮ್ಚಿ ಆಯಿ (ಮರಾಠಿ, ನಿರ್ದೇಶನ – ಸುಜಯ್ ದಹಕೆ)
ಏಷ್ಯಾ ಸಿನಿಮಾ ವಿಭಾಗ | ಪ್ರಥಮ ಅತ್ಯುತ್ತಮ ಸಿನಿಮಾ – ಇನ್‌ಶಾಹ್ ಅಲ್ಲಾ ಎ ಬಾಯ್ (ಜೋರ್ಡಾನ್, ನಿರ್ದೇಶನ – ಅಮ್ಜದ್ ರಷೀದ್) | ದ್ವಿತೀಯ ಅತ್ಯುತ್ತಮ ಸಿನಿಮಾ – ಸ್ಥಲ್ (ಮರಾಠಿ, ನಿರ್ದೇಶನ – ಜಯಂತ್ ದಿಗಂಬರ್ ಸೊಮಾಲ್ಕರ್) | ತೃತೀಯ ಅತ್ಯುತ್ತಮ ಸಿನಿಮಾ – ಸಂಡೇ (ಉಝ್ಬೆಕಿಸ್ತಾನ್, ನಿರ್ದೇಶನ – ಶೋಕಿರ್ ಖೋಲಿಕೊವ್) | ವಿಶೇಷ ಜ್ಯೂರಿ ಪ್ರಶಸ್ತಿ – ಮಿಥ್ಯ (ಕನ್ನಡ, ನಿರ್ದೇಶನ – ಸುಮಂತ್ ಭಟ್)