ಅಮೆರಿಕ ಮೂಲದ ಖ್ಯಾತ ಭೌತಶಾಸ್ತ್ರಜ್ಞ ರಾಬರ್ಟ್‌ ಒಪನ್‌ ಹೈಮರ್‌ ಬಯೋಪಿಕ್‌ ಸಿನಿಮಾ ‘Oppenheimer’. ಕ್ರಿಸ್ಟೋಫರ್‌ ನೋಲಾನ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಜುಲೈ 21ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಅಮೇರಿಕನ್‌ ನಿರ್ದೇಶಕ Christopher Nolan ಅವರ ಇಂಗ್ಲೀಷ್‌ ಸಿನಿಮಾ ‘Oppenheimer’ ಟ್ರೈಲರ್‌ ಬಿಡುಗಡೆಯಾಗಿದೆ. 2023ರ ಬಹುನಿರೀಕ್ಷಿತ ಚಿತ್ರ ತೆರೆಗೆ ಸಿದ್ಧವಾಗಿದೆ. ಪರಮಾಣು ಬಾಂಬ್ ಪಿತಾಮಹ, ಭೌತಶಾಸ್ತ್ರಜ್ಞ J Robert Oppenheimer ಬಯೋಪಿಕ್‌ ಇದು ಎನ್ನುವುದು ವಿಶೇಷ. ಯುನಿವರ್ಸಲ್ ಪಿಕ್ಚರ್ಸ್, ಸಿಂಕೋಪಿ ಇಂಕ್ ಮತ್ತು ಅಟ್ಲಾಸ್ ಎಂಟರ್‌ಟೇನ್‌ಮೆಂಟ್‌ನ ಅಡಿ ತಯಾರಾಗಿರುವ ‘Oppenheimer’ ಅಮೇರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಓಪನ್‌ಹೈಮರ್ ಮತ್ತು ಅವರ ವಿವಾದಾತ್ಮಕ ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್, ಎರಡನೇ ಮಹಾಯುದ್ಧದ ಸಮಯದಲ್ಲಿ ವಿಶ್ವದ ಮೊದಲ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಿ ನಂತರ ಅದರ ಸಂಶೋಧನೆ ಮತ್ತು ಅಭಿವೃದ್ಧಿಯ ಸುತ್ತ ಹೆಣೆದಿರುವ ಕಥಾಹಂದರ.

ಟ್ರೈಲರ್‌ನ ಆರಂಭದಲ್ಲಿ, ‘ಇದು ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎಂದು ರಾಬರ್ಟ್ ಓಪೆನ್‌ ಹೈಮರ್ ಮೊದಲ ಪರಮಾಣು ಬಾಂಬ್ ಪರೀಕ್ಷಿಸಲು ತಯಾರಾಗುವ ಸಂದರ್ಭದಲ್ಲಿ ಹೇಳುತ್ತಾರೆ. ಪುಲಿಟ್ಜರ್ ಪ್ರಶಸ್ತಿ ವಿಜೇತ ಕೈ ಬರ್ಡ್ ಮತ್ತು ಮಾರ್ಟಿನ್ ಜೆ ಶೆರ್ವಿನ್ ಅವರ ‘American Prometheus: The Triumph and Tragedy of J Robert Oppenheimer’ ಕೃತಿ ಆಧರಿಸಿದ ಪ್ರಯೋಗ. ಆಸ್ಕರ್ ನಾಮನಿರ್ದೇಶಿತ ಛಾಯಾಗ್ರಾಹಕ Hoyte van Hoytema ಛಾಯಾಗ್ರಹಣ ಚಿತ್ರಕ್ಕಿದೆ. ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್, ಮತ್ತು ಫ್ಲಾರೆನ್ಸ್ ಪಗ್ ಪ್ರಮುಖ ಪಾತ್ರಗಳಲ್ಲಿರುವ ಚಿತ್ರ ಇದೇ ಜುಲೈ 21 ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here