ಶಿವರಾಜಕುಮಾರ್‌, ಪ್ರಭುದೇವ ಅಭಿಮಾನಿಗಳಿಗೆ ಇಷ್ಟವಾಗುವ ಸಿನಿಮಾ. ಮನರಂಜನೆಗೆ ಮೋಸವಿಲ್ಲ. ಆದರೆ ಸರಾಗವಾಗಿ ನೋಡಿಸಿಕೊಂಡು ಹೋಗುತ್ತಿರುವ ಕತೆಯಲ್ಲಿ ಲಾಜಿಕ್‌ ಮಿಸ್‌ ಆದ್ರೆ? ಸಿನಿಮಾ ನೋಡುವ ಪ್ರೇಕ್ಷಕರಿಗೆ, ‘ಏನೋ ಮಿಸ್‌ ಹೋಡೀತಿದ್ಯಲ್ಲ’ ಅನ್ನಿಸೋದು ಸಹಜ. ಅದು ‘ಸಿನಿಮಾ ನೋಡಿಸಿಕೊಳ್ಳುವ ಗುಣ’ಕ್ಕೆ ಹಿನ್ನಡೆಯಾಗುತ್ತದೆ. ಈ ಸಿನಿಮಾದಲ್ಲಿ ಕತೆಗೆ ಪ್ರಮುಖ ತಿರುವಾಗಬಲ್ಲ ಸನ್ನಿವೇಶಗಳನ್ನು ನಿರ್ದೇಶಕರು ಕನ್ವಿನ್ಸಿಂಗ್‌ ಆಗಿ ನಿರೂಪಿಸಬೇಕಿತ್ತು ಎನಿಸುವುದು ಹೌದು.

ಊರು, ಬೇರು, ನೀರು, ತೇರು – ನಿರ್ದೇಶಕ ಯೋಗರಾಜ್‌ ಭಟ್ಟರು ಮೊದಲೇ ಹೇಳಿದಂತೆ ಸಿನಿಮಾದ ಕತೆ ಇವುಗಳ ಸುತ್ತವೇ ಹೆಣೆದಿರುವಂಥದ್ದು. ಇಲ್ಲಿ ನಂದಿಕೋಲೂರು ಹೆಸರಿನ ಗ್ರಾಮವೊಂದನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವ ಭಟ್ಟರು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ. ಒಂದು ನಿರ್ದಿಷ್ಟ ಕಾರ್ಯಸಾಧನೆಗಾಗಿ ಹಳ್ಳಿಗೆ ಬರುವ ಇಬ್ಬರು ಚಾಲಾಕಿಗಳು ಹೇಗೆ ಒಳಿತು – ಕೆಡುಕುಗಳಿಗೆ ಸಾಕ್ಷಿಯಾಗುತ್ತಾರೆ ಎನ್ನುವುದರ ನಿರೂಪಣೆ ಇಲ್ಲಿದೆ. ಪಂಚತಂತ್ರ ಕತೆಗಳಲ್ಲಿನ ಎರಡು ಕುತಂತ್ರಿ ನರಿಗಳು ಕರಟಕ ಮತ್ತು ದಮನಕ. ಚಿತ್ರದ ಶೀರ್ಷಿಕೆಯಂತೆ ಯೋಗರಾಜ್‌ ಭಟ್ಟರು ಸಿನಿಮಾದಲ್ಲಿಯೂ ಪಂಚತಂತ್ರದ ಕತೆಯೊಂದನ್ನು ನಿರೂಪಿಸಿರುವಂತಿದೆ. ಕತೆ, ನೀತಿ, ಮನರಂಜನೆಯೇ ಮುಖ್ಯವಾಗಿರುವ ಪಂಚತಂತ್ರದ ಕತೆಗಳಂತೆ ಸಿನಿಮಾದ ಕೆಲವೆಡೆ ಲಾಜಿಕ್‌ ಮಿಸ್‌ ಆಗಿದೆ. ‘ಸಂದೇಶ ಓಕೆ, ಲಾಜಿಕ್‌ ನೋಡೋದು ಏಕೆ?’ ಎನ್ನುವವರು ಮೆಚ್ಚಿ ತಲೆದೂಗಬಹುದಾದ ಚಿತ್ರವಿದು.

ಉತ್ತರ ಕರ್ನಾಟಕದ ಗ್ರಾಮವೊಂದರಲ್ಲಿ ನಡೆಯುವ ಕತೆ. ಚಿತ್ರಕಥೆಗೆ ಸರಿಹೊಂದುವಂತಹ ಸೂಕ್ತವಾದ ಭೌಗೋಳಿಕ ಪ್ರದೇಶವೊಂದನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಪಾತ್ರಧಾರಿಗಳು ಅಲ್ಲಿನ ಭಾಷೆ ಮಾತನಾಡುತ್ತಾರೆ. ಅಲ್ಲಿನ ವೇಷಭೂಷಣಗಳನ್ನೇ ತೊಟ್ಟಿದ್ದಾರೆ. ಕಾರ್ಯಸಾಧನೆಗಾಗಿ ಊರಿಗೆ ಬರುವ ಇಬ್ಬರು ನಾಯಕನಟರು ಮಾತ್ರ ಅಲ್ಲೀಗ ಹೊರಗಿನವರು. ಯಾವುದೋ ಒಂದು taskಗೆ ಊರಿಗೆ ಬರುವ ಇವರಿಗೆ ಅಲ್ಲಿ ಮತ್ತೊಂದು task ಎದುರಾಗುತ್ತದೆ. ಇದನ್ನು ಸಾಧಿಸುವ ಸಲುವಾಗಿ ‘ಗೋಲ್ಡ್‌ ಕಾಯಿನ್‌ ಆಪರೇಷನ್‌’ಗೆ ಕೈಹಾಕುತ್ತಾರೆ. ಇದು ಚಿತ್ರಕಥೆಗೂ ಮುಖ್ಯ ತಿರುವು. ಅಲ್ಲಿಯವರೆಗೆ ಸಿನಿಮಾ ಎಂಜಾಯ್‌ ಮಾಡಿಕೊಂಡು ಬಂದ ಪ್ರೇಕ್ಷಕರಿಗೆ ಈ ಹಂತದಲ್ಲಿ ಲಾಜಿಕ್‌ ಪ್ರಶ್ನೆ ಎದುರಾಗುತ್ತದೆ. ಸಿನಿಮಾದಲ್ಲಿ ಹೀರೋಗಳಿಗೆ ಹಳ್ಳಿಗರನ್ನು ನಂಬಿಸುವ ಚಾಲೆಂಜ್‌ ಇದ್ದರೆ, ನಿರ್ದೇಶಕರಿಗೆ ಪ್ರೇಕ್ಷಕರನ್ನು ಕನ್ವಿನ್ಸ್‌ ಮಾಡುವ ಸವಾಲು!

ಶಿವರಾಜಕುಮಾರ್‌ ಮತ್ತು ಪ್ರಭುದೇವ ಕಾಂಬಿನೇಷನ್‌ ಎನ್ನುವುದೇ ಸಿನಿಮಾಗೆ ಒಳ್ಳೇ ಇನ್ವಿಟೇಷನ್‌ ಎಂದು ಚಿತ್ರತಂಡ ಹೇಳಿಕೊಂಡಿತ್ತು. offcourse, ಅದು ನಿಜ. ಚಿತ್ರದುದ್ದಕ್ಕೂ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದೆ. ಅಲ್ಲಲ್ಲಿ ಕಾಮಿಡಿಯ ಕಚಗುಳಿ ಇದೆ. ಇವರ ಜೊತೆಗೆ ಇಬ್ಬರು ಚೆಂದದ ನಾಯಕಿಯರಿದ್ದಾರೆ. ಸದೃಢ ಪೋಷಕ ಪಾತ್ರಗಳೂ ಇವೆ. ಡ್ಯಾನ್ಸ್‌ – ಫೈಟ್‌ಗಳ ಝಲಕ್‌ ಇದೆ. ಮನರಂಜನೆಗೆ ಮೋಸವಿಲ್ಲ. ಆದರೆ ಸರಾಗವಾಗಿ ನೋಡಿಸಿಕೊಂಡು ಹೋಗುತ್ತಿರುವ ಕತೆಯಲ್ಲಿ ಲಾಜಿಕ್‌ ಮಿಸ್‌ ಆದ್ರೆ? ಸಿನಿಮಾ ನೋಡುವ ಪ್ರೇಕ್ಷಕರಿಗೆ, ‘ಏನೋ ಮಿಸ್‌ ಹೋಡೀತಿದ್ಯಲ್ಲ’ ಅನ್ನಿಸೋದು ಸಹಜ. ಅದು ‘ಸಿನಿಮಾ ನೋಡಿಸಿಕೊಳ್ಳುವ ಗುಣ’ಕ್ಕೆ ಹಿನ್ನಡೆಯಾಗುತ್ತದೆ. ಈ ಸಿನಿಮಾದಲ್ಲಿ ಕತೆಗೆ ಪ್ರಮುಖ ತಿರುವಾಗಬಲ್ಲ ಸನ್ನಿವೇಶಗಳನ್ನು ನಿರ್ದೇಶಕರು ಕನ್ವಿನ್ಸಿಂಗ್‌ ಆಗಿ ನಿರೂಪಿಸಬೇಕಿತ್ತು ಎನಿಸುವುದು ಹೌದು.

ಮೊದಲೇ ಹೇಳಿದಂತೆ ಶಿವರಾಜಕುಮಾರ್‌ ಮತ್ತು ಪ್ರಭುದೇವ ಜೋಡಿ ಸಿನಿಮಾವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಯೋಗರಾಜ ಭಟ್ಟರು ಎರಡೂ ಪಾತ್ರಗಳಿಗೆ ಅಗತ್ಯವಿರುವ space ಕೊಟ್ಟಿದ್ದಾರೆ. ಪ್ರಭುದೇವ ಪಾತ್ರದ ಒನ್‌ಲೈನ್‌ ಪಂಚ್‌ಗಳು ನಗೆ ತರಿಸುತ್ತವೆ. ಅವರ slang ಮತ್ತು ಟೈಮಿಂಗ್‌ ಇದಕ್ಕೆ ಇಂಬು ನೀಡುತ್ತವೆ. ಮತ್ತೊಂದೆಡೆ 60 ದಾಟಿದ ಶಿವರಾಜಕುಮಾರ್‌ ಎಂದಿನಂತೆ energetical. ತಮಾಷೆ, ಎಮೋಷನ್‌ ಎರಡೂ ರೀತಿಯ ಸೀನ್‌ಗಳಲ್ಲಿ ಅನುಭವಿ ನಟ ಸ್ಕೋರ್‌ ಮಾಡುತ್ತಾರೆ. ಪ್ರಭು ಅವರ ಪಾತ್ರಕ್ಕೆ ಹೋಲಿಸಿದಲ್ಲಿ ಶಿವರಾಜಕುಮಾರ್‌ ಪಾತ್ರಕ್ಕೆ ನಿರ್ದೇಶಕರು ಕೊಂಚ ಗಾಂಭೀರ್ಯದ ಚರ್ಯೆ ತೊಡಿಸಿದ್ದಾರೆ. ಬಹುಶಃ ಕತೆಗೆ ಇದು ಅಗತ್ಯವಿತ್ತೇನೋ? ಇಬ್ಬರೂ ಉತ್ತಮ ನೃತ್ಯಪಟುಗಳು. ಇವರಿಗೆ ಸಂಯೋಜಿಸಿರುವ ಡ್ಯೂಯೆಟ್‌ಗಳು ಮತ್ತು ‘ಡೀಗ ಡಿಗರಿ’ ಖುಷಿ ಹಾಡು ಕೊಡುತ್ತವೆ. ನಾಯಕಿಯರಿಬ್ಬರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ತನಿಕೆಲ್ಲ ಭರಣಿ ಮತ್ತು ರವಿಶಂಕರ್‌ ಪಾತ್ರಗಳು impressive ಆಗಿವೆ. ಕತೆಯಲ್ಲಿ ಲಾಜಿಕ್‌ ಮಿಸ್‌ ಹೊಡೀತಿದೆ ಎನ್ನುವುದರ ಹೊರತಾಗಿ ‘ಕರಟಕ ದಮನಕ’ ಸದಾಶಯದ ಕತೆ. ಶಿವರಾಜಕುಮಾರ್‌, ಪ್ರಭುದೇವ ಅಭಿಮಾನಿಗಳು ನೋಡಬೇಕಾದ ಸಿನಿಮಾ.

LEAVE A REPLY

Connect with

Please enter your comment!
Please enter your name here