ಕಿರಣ್‌ ರಾಜ್‌ ನಿರ್ದೇಶನದಲ್ಲಿ ರಕ್ಷಿತ್‌ ಶೆಟ್ಟಿ ನಟಿಸಿರುವ ‘777 ಚಾರ್ಲಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಾಯಿಯ ಕತೆ ಹೇಳುವ ಟ್ರೈಲರ್‌ ಉತ್ತಮ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತದೊಂದಿಗೆ ಗಮನ ಸೆಳೆಯುತ್ತದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಜೂನ್‌ 10ರಂದು ಸಿನಿಮಾ ತೆರೆಕಾಣಲಿದೆ.

ರಕ್ಷಿತ್‌ ಶೆಟ್ಟಿ ಜೊತೆ ನಾಯಿ ಪ್ರಧಾನ ಪಾತ್ರದಲ್ಲಿರುವ ಬಹುನಿರೀಕ್ಷಿತ ‘777 ಚಾರ್ಲಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಟ್ರೈಲರ್‌ ಬಿಡುಗಡೆಯಾಗಿವೆ. ದಕ್ಷಿಣದ ಸ್ಟಾರ್‌ಗಳು ಆಯಾ ಭಾಷೆಯ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಾಯಿ ಪ್ರಧಾನ ಭೂಮಿಕೆಯಲ್ಲಿರುವ ಎಮೋಷನಲ್‌ ಕತೆಯೊಂದನ್ನು ನಿರ್ದೇಶಕ ಕಿರಣ್‌ ರಾಜ್‌ ಹೇಳಲು ಹೊರಟಿರುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ. ಕನ್ನಡದ ಪುಟ್ಟ ಪಟ್ಟಣವೊಂದರಿಂದ ಉತ್ತರ ಭಾರತದಲ್ಲೆಲ್ಲಾ ಸಾಗುವ ಸಿನಿಮಾದ ಕ್ಯಾನ್ವಾಸ್‌ ದೊಡ್ಡದಿದೆ. ರಕ್ಷಿತ್‌ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್‌ ಮತ್ತಿತರರು ನಟಿಸಿದ್ದಾರೆ. ಕೋವಿಡ್‌ನಿಂದಾಗಿ ಸುದೀರ್ಘ ಅವಧಿಯವರೆಗೆ ಚಿತ್ರೀಕರಣಗೊಂಡ ಸಿನಿಮಾ ಜೂನ್‌ 10ರಂದು ತೆರೆಗೆ ಬರುತ್ತಿದೆ. ಟ್ರೈಲರ್‌ ಮೂಲಕ ಭರವಸೆ ಮೂಡಿಸಿರುವ ಸಿನಿಮಾ ಕನ್ನಡದ ಮತ್ತೊಂದು ಯಶಸ್ವೀ ಪ್ಯಾನ್‌ ಇಂಡಿಯಾ ಸಿನಿಮಾ ಆಗುವ ಸೂಚನೆ ನೀಡಿದೆ.

Previous articleಜ್ಯೂನಿಯರ್‌ NTR ಬರ್ತ್‌ಡೇಗೆ ZEE5ನಲ್ಲಿ ಬರಲಿದೆ ‘RRR’
Next articleಕೃತಕ ಗರ್ಭಧಾರಣೆ ಆಲೋಚನೆ‌ ಮಾಡುವ ಮೊದಲು ನೋಡಲೇಬೇಕಾದ ಡಾಕ್ಯುಮೆಂಟರಿ ‘ಅವರ್ ಫಾದರ್’

LEAVE A REPLY

Connect with

Please enter your comment!
Please enter your name here