ರಣವೀರ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ’83’ ಹಿಂದಿ ಸಿನಿಮಾದ ‘ಬಿಗಡ್ನೇ ದೇ’ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಆಶಿಷ್‌ ಪಂಡಿತ್‌ ರಚನೆ, ಪ್ರೀತಂ ಸಂಗೀತ ಸಂಯೋಜನೆಯ ಗೀತೆಯನ್ನು ಬೆನ್ನಿ ದಯಾಳ್‌ ಹಾಡಿದ್ದಾರೆ.

ಕಬೀರ್‌ ಖಾನ್‌ ನಿರ್ದೇಶನದ ’83’ ಹಿಂದಿ ಸಿನಿಮಾದ ‘ಬಿಗಡ್ನೇ ದೇ’ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. 1983ರ ಭಾರತದ ಐತಿಹಾಸಿಕ ಕ್ರಿಕೆಟ್‌ ವಿಶ್ವಕಪ್‌ ಯಶೋಗಾಥೆಯನ್ನು ನಿರೂಪಿಸಿರುವ ಚಿತ್ರವಿದು. ಚಿಕ್ಕ ಪುಟ್ಟ ಸೊಲುಗಳು ಬದುಕಿನಲ್ಲಿ ಅನುಭವಕ್ಕೆ ದಾರಿಯಾಗುತ್ತವೆ. ಸೋಲಿನಿಂದ ಕಂಗೆಡದೆ ಮುನ್ನುಗ್ಗಿದಾಗ ಯಶಸ್ಸು ತಾನಾಗಿ ಸಿಗುತ್ತದೆ ಎನ್ನುವ ಆಶಯ ಈ ಗೀತೆಯದ್ದು. ಹಾಡಿನ ಪಿಕ್ಚರೈಸೇಷನ್‌ ಇನ್ನೂ ಚೆನ್ನಾಗಿರಬಹುದಿತ್ತು ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ಧಾರೆ. ‘ರಂಗ್‌ ದೇ ಬಸಂತಿ’ ಸಿನಿಮಾದ ‘ಮಸ್ತಿ ಕಾ ಪಾಠ್‌ಶಾಲಾ’ ಹಾಡನ್ನು ಇದು ನೆನಪಿಸುತ್ತದೆ ಎಂದೂ ಸಿನಿಪ್ರೇಮಿಗಳು ಹೇಳುತ್ತಾರೆ. ಒಟ್ಟಾರೆ ಈ ಸ್ಪೋರ್ಟ್‌ ಡ್ರಾಮಾ ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ. ಚಿತ್ರದಲ್ಲಿ ಆಲ್‌ರೌಂಡರ್ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್‌ ಅಭಿನಯಿಸಿದ್ದಾರೆ. ಸಕೀಬ್ ಸಲೀಂ, ಹ್ಯಾರ್ಡಿ ಸಂಧು, ಅಮ್ಮಿ ವಿರ್ಕ್‌, ಪಂಕಜ್ ತ್ರಿಪಾಠಿ, ಜತಿನ್ ಸರ್ನಾ, ಸಾಹಿಲ್ ಕಟ್ಟರ್‌, ಜೀವಾ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಸಿನಿಮಾ 2020ರ ಏಪ್ರಿಲ್‌ಗೆ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಸಿನಿಮಾ ವಿಳಂಬವಾಗಿ ಈಗ ಡಿಸೆಂಬರ್‌ 24ಕ್ಕೆ ಥಿಯೇಟರ್‌ಗೆ ಬರುತ್ತಿದೆ. ಮುಂದಿನ ವಾರ ಮತ್ತೊಂದು ಹಾಡನ್ನು ರಿಲೀಸ್‌ ಮಾಡಲು ಚಿತ್ರತಂಡ ಯೋಜಿಸಿದೆ.

Previous articleಮಲಯಾಳಿ ಸಿನಿಮಾಗಳಂತೆ ಕನ್ನಡ ಚಿತ್ರಗಳು ಯಾಕಿಲ್ಲ?
Next articleನಮ್​ ನಾಣಿ ಮದ್ವೆ ಪ್ರಸಂಗ; ಜ್ವಲಂತ ಸಮಸ್ಯೆ, ತಿಳಿಹಾಸ್ಯದ ನಿರೂಪಣೆ

LEAVE A REPLY

Connect with

Please enter your comment!
Please enter your name here