ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ’ ಪ್ಯಾನ್‌ ಇಂಡಿಯಾ ಚಿತ್ರದಲ್ಲಿನ ನಟ ನಾಗಾರ್ಜುನ ಅವರ ಲುಕ್‌ ರಿವೀಲ್‌ ಆಗಿದೆ. ಚಿತ್ರದಲ್ಲಿನ ಅವರ ‘ಅನೀಶ್‌’ ಪಾತ್ರ ‘ನಂದಿ ಅಸ್ತ್ರ’ದ ಮೂಲಕ ಪ್ರೇಕ್ಷಕರನ್ನು ಆವರಿಸಲಿದೆ ಎಂದಿದ್ದಾರೆ ನಿರ್ದೇಶಕ ಅಯಾನ್‌ ಮುಖರ್ಜಿ. ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಅಲಿಯಾ ಭಟ್‌, ಮೌನಿ ರಾಯ್‌ ಪ್ರಮುಖ ಪಾತ್ರಗಳಲ್ಲಿರುವ ಸಿನಿಮಾ ಸೆಪ್ಟೆಂಬರ್‌ 9ರಂದು ತೆರೆಕಾಣಲಿದೆ.

ಅಯಾನ್‌ ಮುಖರ್ಜಿ ನಿರ್ದೇಶನದ ಫ್ಯಾಂಟಸಿ – ಡ್ರಾಮಾ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿನ ಅಕ್ಕಿನೇನಿ ನಾಗಾರ್ಜುನ ಅವರ ಪಾತ್ರದ ಲುಕ್‌ ರಿವೀಲ್‌ ಆಗಿದೆ. ಅವರಿಲ್ಲಿ ‘ಅನೀಶ್‌’ ಆಗಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರ ‘ನಂದಿ ಅಸ್ತ್ರ’ ಪ್ರಯೋಗ ಮಾಡಲಿದೆ ಎಂದಿದ್ದಾರೆ ನಿರ್ದೇಶಕ ಅಯಾನ್‌. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಅವರ ಪಾತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ನಿರ್ದೇಶಕ ರಾಜಮೌಳಿ ತೆಲುಗು ವರ್ಷನ್‌ ಪೋಸ್ಟರ್‌ ಪ್ರಸೆಂಟ್‌ ಮಾಡಿದ್ದಾರೆ. ನಿರ್ದೇಶಕ ಅಯಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ, “ARTIST ANISH & HIS NANDI ASTRA 💥 When I grow up (finally), I would want to be like Nagarjuna Garu (Nag Sir, to me) – A gentleman with the warmest of hearts!! He entered the world of Brahmāstra and gave his fierce intensity to our movie” ಎಂದು ಬರೆದಿದ್ದಾರೆ. ನಾಳೆ ಜೂನ್‌ 15ರಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಲಿದೆ.

ಅಯಾನ್‌ ಮುಖರ್ಜಿ ನಿರ್ದೇಶನದ ಮೂರನೇ ಸಿನಿಮಾ ‘ಬ್ರಹ್ಮಾಸ್ತ್ರ’. ಇತ್ತೀಚೆಗೆ ದಂಪತಿಯಾದ ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ಅವರು ಜೊತೆಯಾಗಿ ನಟಿಸಿರುವ ಮೊದಲ ಚಿತ್ರವಿದು. ಖ್ಯಾತ ತೆಲುಗು ನಟ ಚಿರಂಜೀವಿ ಅವರು ಚಿತ್ರದ ತೆಲುಗು ವರ್ಷನ್‌ಗೆ ನಿರೂಪಣೆ ಮಾಡಿಕೊಟ್ಟಿದ್ದಾರೆ. ಇದೊಂದು ಟ್ರೈಲಾಜಿಯಾಗಿದ್ದು, ಮೊದಲ ಪಾರ್ಟ್‌ ಸೆಪ್ಟೆಂಬರ್‌ 9ರಂದು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here