ಬಹುನಿರೀಕ್ಷಿತ ‘RRR’ ಸಿನಿಮಾದ ‘ಜನನಿ’ ಹಾಡು ಬಿಡುಗಡೆಯಾಗಿದೆ. ‘ಇದು soul anthem of RRR’ ಎಂದು ನಿರ್ದೇಶಕ ರಾಜಮೌಳಿ ಹೇಳುತ್ತಾರೆ. ಎಂ.ಎಂ.ಕೀರವಾಣಿ ಗೀತೆ ರಚಿಸಿ ಸಂಗೀತ ಸಂಯೋಜಿಸಿದ್ದಾರೆ.

ಬಹುನಿರೀಕ್ಷಿತ ‘RRR’ ಸಿನಿಮಾದ ‘ಜನನಿ’ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ರಾಜಮೌಳಿ, ‘ಈ ಗೀತೆ ನಮ್ಮ ಸಿನಿಮಾದ ಆತ್ಮ’ ಎಂದಿದ್ದರು. ಎಂ.ಎಂ.ಕೀರವಾಣಿ ಗೀತೆ ರಚಿಸಿ ಸಂಗೀತ ಸಂಯೋಜಿಸಿರುವ ಈ ಹಾಡು ರಾಜಮೌಳಿ ಮಾತುಗಳಿಗೆ ಇಂಬು ನೀಡುತ್ತದೆ. ಮಧುರ ರಾಗ ಸಂಯೋಜನೆ, ಕಣ್ಮನ ಸೆಳೆಯುವ ವಿಶ್ಯುಯಲ್ಸ್‌, ಕಲಾವಿದರ ಭಾವುಕ ಎಕ್ಸ್‌ಪ್ರೆಷನ್ಸ್‌ಗಳು ನೋಡುಗರನ್ನು ಒಮ್ಮೆಗೇ ಸೆಳೆಯುತ್ತವೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ… ಐದೂ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಡಿಸೆಂಬರ್‌ ಮೊದಲ ವಾರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

‘ಬಾಹುಬಲಿ’ ಸರಣಿ ಚಿತ್ರಗಳ ನಂತರ ರಾಜಮೌಳಿ ಕೈಗೆತ್ತಿಕೊಂಡಿರುವ ‘RRR’ ಮುನ್ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ. ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ತಾರೆಯರಾದ ಅಜಯ್ ದೇವಗನ್‌, ಅಲಿಯಾ ಭಟ್, ಬ್ರಿಟಿಷ್‌ ನಟಿ ಒಲಿವಿಯಾ ಮೊರಿಸ್, ಹಾಲಿವುಡ್ ನಟ ರೇ ಸ್ಟೀವನ್‌ಸನ್‌, ಐರಿಷ್ ನಟ ಅಲಿಸನ್ ಡೂಡಿ ನಟಿಸಿದ್ದಾರೆ. ತೆಲುಗು ಬುಡಕಟ್ಟು ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮಾರಂ ಭೀಮ್‌ ಅವರ ಕತೆಗಳಿಗೆ ಕಲ್ಪನೆ ಬೆರೆಸಿ ಮಾಡುತ್ತಿರುವ ಸಿನಿಮಾ ‘RRR’. ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮ ಪಾತ್ರದಲ್ಲಿದ್ದರೆ ಜ್ಯೂನಿಯರ್ ಎನ್‌ಟಿಆರ್ ಕೊಮಾರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಮೂಲ ತೆಲುಗು ಮತ್ತು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳಲ್ಲಿ 2022ರ ಜನವರಿ 7ರಂದು ಸಿನಿಮಾ ತೆರೆಕಾಣಲಿದೆ.

Previous articleಫಿಲಿಪ್ ಜಾನ್‌ ನಿರ್ದೇಶನದಲ್ಲಿ ಸಮಂತಾ; ‘ಅರೇಂಜ್‌ಮೆಂಟ್ಸ್‌ ಆಫ್ ಲವ್‌’ ಇಂಗ್ಲಿಷ್ ಸಿನಿಮಾ
Next articleಟೀಸರ್ | ಚೊಚ್ಚಲ ಕ್ರಿಕೆಟ್ ವರ್ಲ್ಡ್’ಕಪ್ ಗೆದ್ದ ಸಂಭ್ರಮ; ಕಬೀರ್ ಖಾನ್ ನಿರ್ದೇಶನದ ‘83’

LEAVE A REPLY

Connect with

Please enter your comment!
Please enter your name here