ಪವನ್ ಒಡೆಯರ್‌ ನಿರ್ದೇಶನದಲ್ಲಿ ತಯಾರಾಗಿರುವ ದುಬಾರಿ ಬಜೆಟ್‌ನ ‘ರೆಮೋ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ‘ರೋಗ್‌’ ಸಿನಿಮಾ ಖ್ಯಾತಿಯ ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಪವನ್ ಒಡೆಯರ್‌ ನಿರ್ದೇಶನದ ‘ರೆಮೋ’ ಸಿನಿಮಾ ಟ್ರೈಲರ್‌ ಕುರಿತಂತೆ ಸ್ಯಾಂಡಲ್‌ವುಡ್‌ ವಲಯದಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಭರವಸೆಯ ಮಾತುಗಳು ಕೇಳಿಬರುತ್ತಿವೆ. ಸಿನಿಪ್ರಿಯರಿಗೂ ಟ್ರೈಲರ್‌ ಇಷ್ಟವಾಗಿದ್ದು ವಿಶೇಷವಾಗಿ ಹೀರೋ ಇಶಾನ್‌ ಸ್ಕ್ರೀನ್ ಪ್ರಸೆನ್ಸ್ ಕುರಿತು ಮಾತನಾಡುತ್ತಿದ್ದಾರೆ. ಯೂತ್‌ಫುಲ್‌ ಮತ್ತು ಆಕರ್ಷಕ ಸಿನಿಮಾಟೋಗ್ರಫಿಯಿಂದ ಟ್ರೈಲರ್‌ ಗಮನ ಸೆಳೆಯುತ್ತದೆ. ಹೀರೋ ಪಾತ್ರವೂ ಭಿನ್ನ ಶೇಡ್‌ಗಳಲ್ಲಿದ್ದು, ನಿರ್ದೇಶಕರು ಕತೆಯ ನಿರೂಪಣೆಯಲ್ಲಿ ಎಷ್ಟರಮಟ್ಟಿಗೆ ಹಿಡಿತ ಸಾಧಿಸಿದ್ದಾರೆ ಎಂದು ನೋಡಬೇಕು. ಕಾಮಿಡಿ, ರೊಮ್ಯಾಂಟಿಕ್ ಕತೆಗಳನ್ನು ತೆರೆಗೆ ಅಳವಡಿಸಿ ಯಶಸ್ವಿಯಾಗಿರುವ ಪವನ್ ಒಡೆಯರ್‌ ‘ರೆಮೋ’ಗಾಗಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಸುದೀರ್ಘ ಅವಧಿಯ ಚಿತ್ರೀಕರಣ ನಡೆದಿದೆ. ನಿರ್ಮಾಪಕ ಸಿ.ಆರ್‌.ಮನೋಹರ್‌ ಅವರು ಸಹೋದರ ಇಶಾನ್‌ ಚಿತ್ರಕ್ಕಾಗಿ ಯತೇಚ್ಛವಾಗಿ ಹಣ ತೊಡಗಿಸಿದ್ದಾರೆ. ಜನವರಿ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here