ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘83’ ಟ್ರೈಲರ್ ಬಿಡುಗಡೆಯಾಗಿದೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್‌ ಪಾತ್ರ ನಿರ್ವಹಿಸಿದ್ದಾರೆ. ಭಾವುಕ ಸನ್ನಿವೇಶಗಳ ಟ್ರೈಲರ್‌ ‘83’ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿದೆ.

1983ರ ಕ್ರಿಕೆಟ್ ವರ್ಲ್ಡ್‌ಕಪ್ ಗೆದ್ದ ಭಾರತದ ತಂಡದ ಕತೆಯನ್ನು ಹೇಳುವ ‘83’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಂದಿನ ವಿಶ್ವಕಪ್ ಸರಣಿಯಲ್ಲಿ ಭಾರತ ಕ್ರಿಕೆಟ್‌ ತಂಡ ಲೆಕ್ಕಕ್ಕೇ ಇರಲಿಲ್ಲ. ಭಾರತ ತಂಡವನ್ನು ಕಡೆಗಣಿಸುವ ಸನ್ನಿವೇಶಗಳ ಹಿನ್ನೆಲೆಯಲ್ಲಿ ನಿರೂಪಣೆಗೊಂಡಿರುವ ಟ್ರೈಲರ್ ತಂಡದ ಬದ್ಧತೆ, ದೃಢ ನಿರ್ಧಾರ, ಹೋರಾಟದ ಕೆಚ್ಚನ್ನು ಹಿಡಿದಿಟ್ಟಿದೆ. ತೆಳು ಹಾಸ್ಯದ ಜೊತೆಗಿನ ಭಾವುಕ ಸನ್ನಿವೇಶಗಳೂ ಇದ್ದು ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಿಸಿದೆ. ಆಲ್‌ರೌಂಡರ್ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್‌ ನಟಿಸಿದ್ದು, ಮೇರು ಕ್ರಿಕೆಟಿಗನ ಬಾಡಿ ಲಾಂಗ್ವೇಜ್‌ ಅನುಕರಿಸುವಲ್ಲಿ ರಣವೀರ್‌ ಯಶಸ್ವಿಯಾಗಿರುವ ಸೂಚನೆ ಕಾಣಿಸುತ್ತದೆ. ಮದನ್ ಲಾಲ್‌ ಪಾತ್ರ ನಿರ್ವಹಿಸಿರುವ ಹ್ಯಾರ್ಡಿ ಸಂಧು ಮತ್ತು ಬಲ್ವಿಂದರ್ ಸಂಧು ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮ್ಮಿ ವಿರ್ಕ್‌ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಸಕೀಬ್ ಸಲೀಂ, ಪಂಕಜ್ ತ್ರಿಪಾಠಿ, ಜತಿನ್ ಸರ್ನಾ, ಸಾಹಿಲ್ ಕಟ್ಟರ್‌, ಜೀವಾ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಡಿಸೆಂಬರ್‌ 24ಕ್ಕೆ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here