ಬಿಡುಗಡೆಯಾದ ಮೂರೇ ವಾರಗಳಲ್ಲಿ ರಜನೀಕಾಂತ್ ಅಭಿನಯದ ‘ಅಣ್ಣಾತ್ತೆ’ ತಮಿಳು ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಅತಿ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್ ಮತ್ತು Sun NXT ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
ರಜನೀಕಾಂತ್ ಅಭಿನಯದ ‘ಅಣ್ಣಾತ್ತೆ’ ನವೆಂಬರ್ 4ರಂದು ಬಿಡುಗಡೆಯಾಗಿತ್ತು. ಎರಡು ವಾರಗಳ ಥಿಯೇಟರ್ ಪ್ರದರ್ಶನದಲ್ಲಿ ಸಿನಿಮಾದ ವಹಿವಾಟು ಇನ್ನೂರು ಕೋಟಿ ರೂಪಾಯಿ ದಾಟಿದೆ ಎನ್ನುವ ಅಂದಾಜಿದೆ. ಅಷ್ಟರಲ್ಲಾಗಲೇ ನಿರ್ಮಾಪಕರು ಚಿತ್ರವನ್ನು ನೆಟ್‌ಫ್ಲಿಕ್ಸ್ ಮತ್ತು Sun NXT ಓಟಿಟಿ ಸ್ಟ್ರೀಮಿಂಗ್‌ಗೆ ಕೊಡಲು ಸನ್ನದ್ಧರಾಗಿದ್ದಾರೆ. ಸದ್ಯದಲ್ಲೇ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಲಿದೆ. ನೆಟ್‌ಫ್ಲಿಕ್ಸ್’ನಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ರಜನೀಕಾಂತ್‌ರ ಈ ಸಿನಿಮಾ ಇನ್ನೂರು ಕೋಟಿಗೂ ಹೆಚ್ಚು ವಹಿವಾಟು ನಡೆಸಿರುವ ಬಗ್ಗೆ ಸೂಚನೆಯಿದೆ. “ಹಾಲಿವುಡ್‌ನಲ್ಲಿದ್ದಂತೆ ನಮ್ಮಲ್ಲಿ ಪಾರದರ್ಶಕ ಬಾಕ್ಸ್ ಆಫೀಸ್ ಸಿಸ್ಟಮ್ ಇಲ್ಲ. ಇದನ್ನು ಕೆಲವು ಗುಂಪುಗಳು ದುರ್ಬಳಕೆ ಮಾಡಿಕೊಳ್ಳುತ್ತವೆ. ವಿನಾಕಾರಣ ರಜನೀ ಸಿನಿಮಾಗಳಿಗೆ ನೆಗೆಟಿವ್ ವರದಿ ಕೊಟ್ಟು ಪ್ರೇಕ್ಷಕರಿಗೆ ಗೊಂದಲ ಉಂಟುಮಾಡುತ್ತವೆ” ಎಂದು ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅಭಿಪ್ರಾಯಪಡುತ್ತಾರೆ. ‘ಅಣ್ಣಾತ್ತೆ’ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ನಯನತಾರಾ, ಕೀರ್ತಿ ಸುರೇಶ್, ಜಗಪತಿ ಬಾಬು, ಸೂರಿ, ಅಭಿಮನ್ಯು ಸಿಂಗ್, ಪ್ರಕಾಶ್ ರಾಜ್, ಮೀನಾ, ಖುಷ್ಬೂ ನಟಿಸಿದ್ದಾರೆ.