ನಾಯಕ-ನಾಯಕಿಯ ಪಾತ್ರಗಳಿಗೆ ಸಿನಿಮಾಪೂರ್ತಿ ಒಳ್ಳೆಯ ಸ್ಕೋಪ್ ಇರುವುದು ಸೂರಜ್‌ಗೌಡ ಕಥೆ ಬರೆದ ರೀತಿಗೆ ಸಾಕ್ಷಿ. ಸೂರಜ್ ತಮ್ಮ Genre ಇದೇ ಎಂಬಂತೆ ಸಿನಿಮಾ ಹೆಣೆದಿದ್ದಾರೆ. ‘ನಿನ್ನ ಸನಿಹಕೆ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಒಂಥರಾ ಲಘು ಹಾಸ್ಯದಲ್ಲಿಯೇ ನಡೆಯುವ ಸಿನಿಮಾ. ಪ್ರೀತಿ, ಲಿವ್‌ಇನ್‌ ರಿಲೇಶನ್‌ಶಿಪ್‌, ಪ್ರೀತಿಯಲ್ಲಿ ಬರುವ ಮನಸ್ತಾಪಗಳು. ಈ ಥರದ ಅನೇಕ ಸಿನಿಮಾಗಳು ಬಂದಿವೆ. ಈ ಸಿನಿಮಾ ನೋಡುವಾಗ ಹೊಸದೇನನ್ನೋ ನೋಡುತ್ತಿದ್ದೇವೆ ಅನ್ನಿಸುವುದಿಲ್ಲ. ಆದರೂ ಈ ಸಿನಿಮಾ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕೆ ಕಾರಣ ರಘು ದೀಕ್ಷಿತ್ ಅವರ ಹಿತವಾದ ಹಿನ್ನೆಲೆ ಸಂಗೀತ ಮತ್ತು ವಾಸುಕಿ ವೈಭವ್ ಅವರ ಹಾಡುಗಳು. ದಿಯಾ, ಲವ್ ಮಾಕ್‌ಟೇಲ್ ಸಿನಿಮಾಗಳ ಇನ್ನೊಂದು ಆವೃತ್ತಿಯನ್ನೇ ನೋಡುತ್ತಿದ್ದೇವೆ ಅನ್ನಿಸುವ ಫೀಲ್‌ ಕೊಡುತ್ತದೆ. ಸುಮನ್ ಜಾದೂಗರ್, ಪ್ರವೀಣ್‌ಕುಮಾರ್ ಜಿ ಅವರ ಸಂಭಾಷಣೆ ಲವಲವಿಕೆಯಿಂದ ಕೂಡಿದೆ.

ಸೂರಜ್ ಗೌಡ ಅವರಿಗೆ ಒಳ್ಳೆಯ ಭವಿಷ್ಯವಿದೆ. ಈ ಸಿನಿಮಾದ ಕಥೆಗೆ ಬೇಕಾಗುವ ಮಾಸ್ ಸೀಕ್ವೆನ್ಸುಗಳನ್ನು ಮೂರ್ನಾಲ್ಕು ಸಿನಿಮಾ ಆದ ಮೇಲೆ ಮಾಡಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಮೊದಲ ಬಾರ್ ಸೀನುಗಳು ಅಷ್ಟೊಂದು ಸಹಜವಾಗಿ ಕನೆಕ್ಟ್ ಆಗಲಿಲ್ಲ. ಅಲ್ಲಿ‌ ಮುಂದೇನಿರಬಹುದು ಅನ್ನುವ ಸುಳಿವನ್ನು ಕೊಟ್ಟುಬಿಡುತ್ತಾರೆ. ಪ್ರೇಕ್ಷಕನಿಗೆ ಮುಂದಿನ ಕಥೆ ಅಸ್ಪಷ್ಟವಾಗಿ ಅರ್ಥವಾಗಿಬಿಡುತ್ತದೆ. ಹಾಗಾಗಿ‌ ಕುತೂಹಲ ನಮಗೆ ಬೇಕಾದಷ್ಟು ಸಿಗುವುದಿಲ್ಲ. ಉಳಿದಂತೆ ಪ್ರೀತಿಯ ದೃಶ್ಯಗಳಲ್ಲಿ ಅವರ ನಟನೆ‌ ಚೆನ್ನಾಗಿದೆ.

ವರನಟ ಡಾ.ರಾಜ್ ಕುಟುಂಬದ ಮತ್ತೊಂದು ಪ್ರತಿಭೆ ಧನ್ಯಾ ರಾಮ್‌ಕುಮಾರ್ ನಟನೆ ಸಹಜವಾಗಿದೆ. ಇದು ಅವರ ಮೊದಲನೆಯ ಸಿನಿಮಾ ಅನ್ನಿಸುವುದಿಲ್ಲ. ನಾಯಕ-ನಾಯಕಿಯ ಪಾತ್ರಗಳಿಗೆ ಸಿನಿಮಾಪೂರ್ತಿ ಒಳ್ಳೆಯ ಸ್ಕೋಪ್ ಇರುವುದು ಸೂರಜ್‌ಗೌಡ ಕಥೆ ಬರೆದ ರೀತಿಗೆ ಸಾಕ್ಷಿ. ಸೂರಜ್ ತಮ್ಮ Genre ಇದೇ ಎಂಬಂತೆ ಸಿನಿಮಾ ಹೆಣೆದಿದ್ದಾರೆ. ಮುಂದೆ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ಮಾಡಿದರೆ ಖಂಡಿತವಾಗಿ‌ ನೆಲೆ ಕಂಡುಕೊಳ್ಳಬಹುದು. ಈ ಸಿನಿಮಾ ಬೇಸರವಿಲ್ಲ ಅನಿಸುವಷ್ಟು ಮನರಂಜನೆ ಕೊಟ್ಟಿದ್ದಂತೂ ಸತ್ಯ. ‘ನಿನ್ನ ಸನಿಹಕೆ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here