ನಟ ವಿಲ್‌ ಸ್ಮಿತ್‌ ಈ ಹಿಂದೆ ‘Ali’ ಮತ್ತು ‘The Persuit of Happyness’ ಸಿನಿಮಾಗಳಿಗೆ ಎರಡು ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಸ್ಮಿತ್‌ಗೆ ಪ್ರಶಸ್ತಿ ಒಲಿದಿರಲಿಲ್ಲ. ಈ ಬಾರಿ ‘King Richard’ ಚಿತ್ರದೊಂದಿಗೆ ಅವರು ಸ್ಪರ್ಧೆಯಲ್ಲಿದ್ದಾರೆ.

ಇದೇ 28ರಂದು ಭಾನುವಾರ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕೋವಿಡ್‌ನಿಂದಾಗಿ ಕಳೆದ ವರ್ಷ 2021ರ ಇವೆಂಟ್ ಕಳೆಗುಂದಿತ್ತು. ಸಹಜವಾಗಿಯೇ ಈ ಬಾರಿಯ 94ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವನ್ನು ಜಗತ್ತಿನ ಸಿನಿಮಾ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಸಂಭ್ರಮ ಮನೆಮಾಡಿದೆ. ಭಾನುವಾರ ಸಂಜೆ 8 ಗಂಟೆಯಿಂದ ABC ಯಲ್ಲಿ ಲೈವ್ ಬ್ರಾಡ್‌ಕಾಸ್ಟ್‌ ಇರಲಿದೆ. Hulu Live TV, YouTubeTV ಮತ್ತು ABC.com ಸರ್ವೀಸಸ್‌ಗಳಲ್ಲಿ ಕಾರ್ಯಕ್ರಮ ಲೈವ್ ಸ್ಟ್ರೀಮ್ ಆಗಲಿದೆ. ಕೋವಿಡ್ – 19 ಆತಂಕ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ. ಅಗತ್ಯ ಮುಂಜಾಗರೂಕತೆಗಳೊಂದಿಗೇ ಸಮಾರಂಭ ನಡೆಯುತ್ತಿದೆ. ಇದು ಅಕಾಡೆಮಿ ಪ್ರಶಸ್ತಿಯ ಎಂದಿನ ಸಿರಿವಂತಿಕೆಗೆ, ಪಾಪ್ – ಕಲ್ಚರ್ ಸಡಗರಕ್ಕೆ ಕುಂದು ತರಲಿದೆಯೇ? ಪ್ರಶಸ್ತಿಗೆ ಸಂಬಂಧಿಸಿದಂತೆ ಸಿನಿಪ್ರಯರ ಲೆಕ್ಕಾಚಾರಗಳು ಏನಾಗಲಿವೆ?

ನಿರೂಪಣೆ | ಈ ಬಾರಿಯ ಸಮಾರಂಭವನ್ನು Amy Schumer, Regina Hall ಮತ್ತು Wanda Sykes ನಿರೂಪಿಸಲಿದ್ದಾರೆ. ಈ ಮೂವರ ನಿರೂಪಣೆ ಬ್ರಾಡ್‌ಕಾಸ್ಟ್‌ ರೇಟಿಂಗ್‌ಗೆ ವರವಾಗುವುದೇ ಎನ್ನುವ ಲೆಕ್ಕಾಚಾರ ಶುರುವಾಗಿದೆ. ABC ಒತ್ತಡದಿಂದ ಈ ಬಾರಿ ಅಕಾಡೆಮಿಯು ಟೆಲಿಕಾಸ್ಟ್ ಆರಂಭವಾಗುವ ಮುನ್ನ ಎಂಟು ವಿಭಾಗಗಳಿಗೆ ಪ್ರಶಸ್ತಿ ನೀಡುತ್ತಿದೆ. ಪ್ರೊಡಕ್ಷನ್ ಡಿಸೈನ್, ಎಡಿಟಿಂಗ್, ಸೌಂಡ್, ಸ್ಕೋರ್, ಮೇಕ್ಅಪ್, ಹೇರ್‌ಸ್ಟೈಲ್‌ ಮತ್ತು ಮೂರು ಶಾರ್ಟ್ ಫಿಲ್ಮ್ ಪ್ರಶಸ್ತಿಗಳು ಟೆಲಿಕಾಸ್ಟ್ ಆಗುವುದಿಲ್ಲ. ವಿಜೇತರ ಮಾತುಗಳ ಎಡಿಟೆಡ್ ವೀಡಿಯೋ ತುಣುಕುಗಳನ್ನು ಶೋನಲ್ಲಿ ಪ್ರದರ್ಶಿಸಲಾಗುತ್ತದಷ್ಟೆ. ಗಾಯಕರಾದ ಬಿಯಾನ್ಸ್ ಮತ್ತು ಬಿಲ್ಲೀ ಎಲಿಷ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ತಮ್ಮ ಹಾಡುಗಳನ್ನು ಪರ್ಫಾರ್ಮ್ ಮಾಡಲಿದ್ದಾರೆ. DJ Khaled, Tony Hawk, Shaun White ಅವರ ಪರ್ಫಾರ್ಮೆನ್ಸ್‌ಗಳೂ ಇರುತ್ತವೆ ಎನ್ನಲಾಗುತ್ತಿದೆ.

ಸ್ಟ್ರೀಮರ್ಸ್‌ಗೆ ಅವಾರ್ಡ್‌? | ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆದ ಎರಡು ಸಿನಿಮಾಗಳು ಈ ಬಾರಿ ಪ್ರಶಸ್ತಿ ಸ್ಪರ್ಧೆಯಲ್ಲಿವೆ ಎನ್ನುವುದು ವಿಶೇಷ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆದ Jane Campion ನಿರ್ದೇಶನದ ‘The Power of the Dog’ ಅತ್ಯುತ್ತಮ ಸಿನಿಮಾ ಸೇರಿದಂತೆ ಹನ್ನೆರೆಡು ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇಲ್ಲಿಯವರೆಗೆ ನೆಟ್‌ಫ್ಲಿಕ್ಸ್‌ಗೆ ಅಕಾಡೆಮಿಯಲ್ಲಿ ‘ಅತ್ಯುತ್ತಮ ಸಿನಿಮಾ’ ಗೌರವ ಸಿಕ್ಕಿಲ್ಲ. ಈ ಬಾರಿ ‘The Power of the Dog’ ಸಿನಿಮಾ ಪ್ರಶಸ್ತಿ ತಂದುಕೊಡಲಿದೆ ಎನ್ನುವುದು ಸಿನಿಮಾ ಪಂಡಿತರ ಅಂದಾಜು. ಆದರೆ ಈಗಾಗಲೇ Sreen Actors Guild ಮತ್ತು Producers Guild ಪ್ರಶಸ್ತಿಗಳನ್ನು ಪಡೆದಿರುವ Sian Heder ನಿರ್ದೇಶನದ ‘CODA’ ತೀವ್ರ ಪೈಪೋಟಿಯೊಡ್ಡಿದೆ. ಇದು Apple TV+ನಲ್ಲಿ ಸ್ಟ್ರೀಮ್‌ ಆದ ಸಿನಿಮಾ. ಈ ಎರಡೂ ಸಿನಿಮಾಗಳ ಮಧ್ಯೆ Kenneth Branagh ನಿರ್ದೇಶನದ ‘Belfast’ ಕೂಡ ಪ್ರಶಸ್ತಿ ಪಟ್ಟಿಯಲ್ಲಿ ಸ್ಪರ್ಧೆಯಲ್ಲಿದೆ.

ಕೋವಿಡ್‌ ಪ್ರೊಟೊಕಾಲ್‌ | ಕಳೆದ ವರ್ಷ ಕೋವಿಡ್‌ನಿಂದಾಗಿ ಅತ್ಯಂತ ಕಡಿಮೆ ಜನರು ಸೋಷಿಯಲ್‌ ಡಿಸ್ಟಾನ್ಸಿಂಗ್‌ ಪ್ರೊಟೊಕಾಲ್‌ನೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಪೂರ್ಣ ಪ್ರಮಾಣದ ಸ್ಟೇಜ್‌ ಶೋ ಮತ್ತು ರೆಡ್‌ ಕಾರ್ಪೆಟ್‌ ಪ್ಲ್ಯಾನ್‌ ಮಾಡಲಾಗಿದೆ. ಜೊತೆಗೆ ಕೋವಿಡ್‌ ಪ್ರೊಟೋಕಾಲ್‌ ಅಂತೂ ಇದ್ದೇ ಇದೆ. ಸಮಾರಂಭದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಎರಡು ನೆಗೆಟೀವ್‌ ಟೆಸ್ಟ್‌ ಮತ್ತು ವಾಕ್ಸಿನೇಷನ್‌ ಸರ್ಟಿಫಿಕೇಟ್‌ ತೋರಿಸಲೇಬೇಕಿದೆ. ಮಾಸ್ಕ್‌ ಕಡ್ಡಾಯ. ಮಾರ್ಚ್‌ 13ರ ಲಂಡನ್‌ನ BAFTAದಲ್ಲಿ ಪಾಲ್ಗೊಂಡ ಹಲವರು ಸಿನಿಮಾ ಮಂದಿಗೆ ಕೋವಿಡ್‌ ಪಾಸಿಟೀವ್‌ ಅಗಿತ್ತು. Branagh ಮತ್ತು Belfast ಸಹನಟ Ciaran HInds ಸೇರಿದಂತೆ ಕೆಲವರು ಕ್ವಾರಂಟೈನ್‌ನಲ್ಲಿದ್ದಾರೆ. ಲಾಸ್‌ ಏಂಜಲೀಸ್‌ ಕೌಂಟಿ ಕೂಡ ಆಸ್ಕರ್‌ ಸಮಾರಂಭದ ನಂತರದ ಇವೆಂಟ್‌ಗಳಿಗೆ ಕೆಲವು ನಿಯಮಗಳನ್ನು ರೂಪಿಸಿದೆ.

Will Smith ಪ್ರಶಸ್ತಿ ಪಡೆಯುವರೇ? | ಖ್ಯಾತ ನಟ ವಿಲ್‌ ಸ್ಮಿತ್‌ ಈ ಹಿಂದೆ ಎರಡು ಬಾರಿ (Ali ಮತ್ತು The Persuit of Happyness ಸಿನಿಮಾಗಳಿಗೆ) ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ ಸ್ಮಿತ್‌ಗೆ ಪ್ರಶಸ್ತಿ ಒಲಿಯಲಿಲ್ಲ. ಈ ಬಾರಿ ‘King Richard’ ಚಿತ್ರದಲ್ಲಿನ ಅವರ Richard Williams ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. Venus ಮತ್ತು Serena ತಂದೆಯಾಗಿ ಅವರ ಮನೋಜ್ಞ ಅಭಿನಯಕ್ಕೆ ಪ್ರಶಸ್ತಿ ಸಿಗಲೇಬೇಕು ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. 53ರ ಹರೆಯದ ನಟನ ಮಾತು ಸಮಾರಂಭದ ಪ್ರಮುಖ ಆಕರ್ಷಣೆಯಾಗಲಿದೆ. 20 ವರ್ಷಗಳ ಹಿಂದೆ Will Smith ನಟನೆಯ ‘Ali’ ಚಿತ್ರದೆದುರು ‘Training Day’ ಸಿನಿಮಾದ Denzel Washington ಗೆದ್ದಿದ್ದರು. ಈ ಬಾರಿ Denzel ಅವರು ‘The Tragedy of Macbeth’ ಚಿತ್ರದೊಂದಿಗೆ ಪೈಪೋಟಿಯಲ್ಲಿದ್ದಾರೆ.

Miletstones | ಈ ಬಾರಿ ಕೆಲವು ಪ್ರಮುಖ ಪ್ರಶಸ್ತಿಗಳು ಮೈಲುಗಲ್ಲಾಗಲಿವೆ. ‘The Power of Dog’ ಚಿತ್ರಕ್ಕೆ Ari Wegner ಛಾಯಾಗ್ರಹಣವಿದೆ. ಒಂದೊಮ್ಮೆ ಈ ವಿಭಾಗದಲ್ಲಿ Ari Wegner ಪ್ರಶಸ್ತಿ ಗಳಿಸಿದರೆ ಛಾಯಾಗ್ರಹಣಕ್ಕೆ ಗೌರವ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಾರೆ. ಇದೇ ಸಿನಿಮಾದ ನಿರ್ದೇಶಕಿ Jane Campion ಕೂಡ ಇತಿಹಾಸ ಬರೆಯಲಿದ್ದಾರೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಸತತವಾಗಿ ಎರಡು ಬಾರಿ ನಾಮಿನೇಟ್‌ ಆದ ಮಹಿಳೆ ಎಂದು ಅವರು ಗುರುತಾಗಿದ್ದಾರೆ. ಪ್ರಶಸ್ತಿ ಗಳಿಸಿದರೆ, ಅವರು ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೂರನೇ ಮಹಿಳೆಯಾಗುತ್ತಾರೆ. ಕಳೆದ ಬಾರಿ ‘Nomadland’ ಚಿತ್ರಕ್ಕಾಗಿ Chloe Zhao ಪ್ರಶಸ್ತಿ ಪಡೆದಿದ್ದರು. ಈ ಬಾರಿ Jane Campion ಪ್ರಶಸ್ತಿ ಪಡೆದರೆ, ಸತತವಾಗಿ ಎರಡು ವರ್ಷ ಮಹಿಳಾ ನಿರ್ದೇಶಕರು ಗೌರವ ಪಡೆದಂತಾಗುತ್ತದೆ.

‘CODA’ ಚಿತ್ರಕ್ಕಾಗಿ Troy Kotsur ಪ್ರಶಸ್ತಿ ಪಡೆದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಗೌರವ ಪಡೆದ ಕಿವುಡು ಸಮಸ್ಯೆ ಇರುವ ಮೊದಲ ನಟ ಎನಿಸಿಕೊಳ್ಳುತ್ತಾರೆ. Steven Spielberg ನಿರ್ದೇಶನದ ‘West Side Story’ ಚಿತ್ರದಲ್ಲಿ Ariana DeBose ಅವರು LGBTQ ಪಾತ್ರ ನಿರ್ವಹಿಸಿದ್ದಾರೆ. DeBose ಪ್ರಶಸ್ತಿ ಪಡೆದರೆ 60 ವರ್ಷಗಳ ನಂತರ ಇಂಥದ್ದೊಂದು ಪಾತ್ರಕ್ಕೆ ಮತ್ತೆ ಪ್ರಶಸ್ತಿ ಪಡೆದಂತಾಗುತ್ತದೆ. 1961ರಲ್ಲಿ Rita Moreno ಅವರು ‘Anita’ ಸಿನಿಮಾದಲ್ಲಿನ LGBTQ ಪಾತ್ರಕ್ಕೆ ಅಕಾಡೆಮಿ ಗೌರವ ಪಡೆದಿದ್ದರು. ಒಂದೇ ಪಾತ್ರದಲ್ಲಿ ನಟಿಸಿದ ಇಬ್ಬರು ಕಲಾವಿದರು ಆಸ್ಕರ್‌ ಪಡೆದ ಮೂರನೇ ಉದಾಹರಣೆ ಇದಾಗುತ್ತದೆ. ಈ ಹಿಂದೆ ‘Joker’ ಪಾತ್ರಕ್ಕೆ Heath Ledger ಮತ್ತು Joaquin Phoenix ಹಾಗೂ ‘Vito Corleone’ ಪಾತ್ರಕ್ಕೆ Marlon Brando ಮತ್ತು Robert Deniro ಪ್ರಶಸ್ತಿ ಪಡೆದಿದ್ದರು. ಹೀಗೆ ಹಲವು ವಿಶೇಷತೆಗಳಿಗೆ ಭಾನುವಾರ ನಡೆಯಲಿರುವ 94ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಸಾಕ್ಷಿಯಾಗಲಿದೆ.

LEAVE A REPLY

Connect with

Please enter your comment!
Please enter your name here