ಅದ್ವೈತ್‌ ಚಂದನ್‌ ನಿರ್ದೇಶನದಲ್ಲಿ ಅಮೀರ್‌ ಖಾನ್‌ ನಟಿಸಿರುವ ‘ಲಾಲ್‌ ಸಿಂಗ್‌ ಛಡ್ಡಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಟಾಮ್‌ ಹ್ಯಾಂಕ್‌ ಅಭಿನಯದ ಜನಪ್ರಿಯ ‘ಫಾರೆಸ್ಟ್‌ ಗಂಪ್‌’ ಇಂಗ್ಲಿಷ್‌ ಸಿನಿಮಾದ ಅಧಿಕೃತ ರೀಮೇಕಿದು.

ಅಮೀರ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ‘ಲಾಲ್‌ ಸಿಂಗ್‌ ಛಡ್ಡಾ’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಟಾಮ್‌ ಹ್ಯಾಂಕ್‌ ಅಭಿನಯದ ಜನಪ್ರಿಯ ‘ಫಾರೆಸ್ಟ್‌ ಗಂಪ್‌’ ಇಂಗ್ಲಿಷ್‌ ಚಿತ್ರದ ಈ ಹಿಂದಿ ಅವತರಣಿಕೆಯ ಇತರೆ ಪ್ರಮುಖ ಪಾತ್ರಗಳಲ್ಲಿ ಕರೀನಾ ಕಪೂರ್‌, ಮೋನಾ ಸಿಂಗ್‌, ನಾಗ ಚೈತನ್ಯ ನಟಿಸಿದ್ದಾರೆ. ಅಮೀರ್‌ ಖಾನ್‌ ಡೆಡಿಕೇಷನ್‌ಗೆ ಟ್ರೈಲರ್‌ ಸಾಕ್ಷ್ಯ ನುಡಿಯುತ್ತದೆ. ಪ್ರತೀ ಸನ್ನಿವೇಶಗಳನ್ನು ಭಿನ್ನ ಲೊಕೇಶನ್‌ಗಳಲ್ಲಿ ಚಿತ್ರಿಸಲಾಗಿದ್ದು, ತಾಂತ್ರಿಕ ಶ್ರೀಮಂತಿಕೆ ಕಣ್ಣಿಗೆ ರಾಚುತ್ತದೆ. ಟ್ರೈಲರ್‌ನಲ್ಲಿನ ತಾಯಿ – ಮಗ, ಮುಗ್ಧ ಪ್ರಿಯಕರ – ಪ್ರಿಯತಮೆಯ ಸನ್ನಿವೇಶಗಳು ಆಪ್ತವೆನಿಸುತ್ತವೆ.

ಇದು ಟಾಮ್‌ ಹ್ಯಾಂಕ್‌ ಅಭಿನಯದ ಮೈಲುಗಲ್ಲು ಇಂಗ್ಲಿಷ್‌ ಸಿನಿಮಾ ‘ಫಾರೆಸ್ಟ್‌ ಗಂಪ್‌’ ರೀಮೇಕ್‌. ಸಹಜವಾಗಿಯೇ ಸಿನಿಪ್ರಿಯರು ಈ ಚಿತ್ರದೊಂದಿಗೆ ಅಮೀರ್‌ ಚಿತ್ರವನ್ನು ಹೋಲಿಸುತ್ತಾರೆ. ಇದನ್ನರಿತೇ ಅಮೀರ್‌ ಇಲ್ಲಿನ ನೇಟಿವಿಟಿಗೆ ಸೂಕ್ತ ರೀತಿಯಲ್ಲಿ ಹೊಂದುವಂತೆ ಚಿತ್ರಕಥೆಯನ್ನು ಮಾರ್ಪಡಿಸಿಕೊಂಡಿದ್ದಾರೆ. ಅವರು ಚಿತ್ರದ ಸಹನಿರ್ಮಾಪಕರೂ ಆಗಿರುವುದು ಕ್ರಿಯಾಶೀಲ ಸ್ವಾತಂತ್ರಕ್ಕೆ ನೆರವಾಗಿದೆ. ವಯೋಕಾಮ್‌ 18 ಸ್ಟುಡಿಯೋ ಸಹಯೋಗದೊಂದಿಗೆ ಅವರು ಚಿತ್ರ ನಿರ್ಮಿಸಿದ್ದಾರೆ. ಅದ್ವೈತ್‌ ಚಂದನ್‌ ನಿರ್ದೇಶನದ ಸಿನಿಮಾ ಆಗಸ್ಟ್‌ 11ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here