‘The Elephant Whisperers’ ಸಾಕ್ಷ್ಯಚಿತ್ರ Best Documentary Short Film ವಿಭಾಗದಲ್ಲಿ ಆಸ್ಕರ್‌ ಗೌರವಕ್ಕೆ ಪಾತ್ರವಾಗಿದೆ. ಈ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರವಿದು. ಅನಾಥ ಆನೆಮರಿ ಮತ್ತು ಅದನ್ನು ಪೋಷಿಸುವ ದಂಪತಿಯ ಮಧ್ಯೆಯ ಹೃದಯಸ್ಪರ್ಶಿ ಚಿತ್ರಣ.

ಕಾರ್ತಿಕಿ ಗೋನ್ಸಾಲ್ವೆಸ್‌ ನಿರ್ದೇಶನದ ‘The Elephant Whisperers’ ಸಾಕ್ಷ್ಯಚಿತ್ರ Best Documentary Short Film ವಿಭಾಗದಲ್ಲಿ ಆಸ್ಕರ್‌ ಗೌರವಕ್ಕೆ ಪಾತ್ರವಾಗಿದೆ. ಇದು ಗುನೀತ್‌ ಮೋಂಗಾ ನಿರ್ಮಾಣದ ಡಾಕ್ಯುಮೆಂಟರಿ. 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಗಳಿಸಿರುವ ಈ ಸಾಕ್ಷ್ಯಚಿತ್ರಕ್ಕೆ ದುಡಿದ ತಂತ್ರಜ್ಞರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಭಾಗದಲ್ಲಿ ನಾಮಿನೇಷನ್‌ ಆಗಿದ್ದ ಇತರೆ ಸಾಕ್ಷ್ಯಚಿತ್ರಗಳಾದ Stranger At The Gate, Haulout, The Martha Mitchell Effect ಮತ್ತು How Do You Measure A Year? ಪ್ರಯೋಗಗಳೊಂದಿಗೆ The Elephant Whisperers ಸ್ಪರ್ಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಅನಾಥ ಆನೆಮರಿ ಮತ್ತು ಅದನ್ನು ಪೋಷಿಸುವ ದಂಪತಿಯ ಮಧ್ಯೆಯ ಹೃದಯಸ್ಪರ್ಶಿ ಚಿತ್ರಣ – The Elephant Whisperers. ಮದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಬೊಮ್ಮನ್‌ ಮತ್ತು ಬೆಳ್ಳಿ ದಂಪತಿ ಆನೆಮರಿಗಳಾದ ರಘು ಮತ್ತು ಅಮ್ಮುನನ್ನು ಪ್ರೀತಿಯಿಂದ ಸಾಕುವ ಸಾಕ್ಷ್ಯಚಿತ್ರ. ಈ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಎನ್ನುವ ಹೆಗ್ಗಳಿಕೆಗೆ The Elephant Whisperers ಪಾತ್ರವಾಗಿದೆ. ಈ ಹಿಂದೆ ಈ ವಿಭಾಗದಲ್ಲಿ ಭಾರತದಿಂದ The House That Ananda Built (1969) ಮತ್ತು An Encounter With Faces (1979) ನಾಮನಿರ್ದೇಶನಗೊಂಡಿದ್ದವು. ಆದರೆ ಪ್ರಶಸ್ತಿ ಭಾಗ್ಯ ಒಲಿದಿರಲಿಲ್ಲ. The Elephant Whisperers ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here