ವಿದ್ಯಾ ಬಾಲನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನೀಯತ್‌’ ಮರ್ಡರ್‌ – ಮಿಸ್ಟರಿ ಹಿಂದಿ ಸಿನಿಮಾ ಜುಲೈ 7ಕ್ಕೆ ತೆರೆಕಾಣಲಿದೆ. ‘ಶಕುಂತಲಾ ದೇವಿ’ ಚಿತ್ರದ ನಂತರ ನಿರ್ದೇಶಕಿ ಅನು ಮೆನನ್‌ ಅವರೊಂದಿಗೆ ವಿದ್ಯಾ ಬಾಲನ್‌ ಅವರ ಎರಡನೇ ಚಿತ್ರವಿದು.

ವಿದ್ಯಾ ಬಾಲನ್‌ರ ಈ ವರ್ಷದ ಮೊದಲ ಚಿತ್ರವಾಗಿ ‘ನೀಯತ್‌’ ಜುಲೈ 7ರಂದು ತೆರೆಕಾಣುತ್ತಿದೆ. ಕೋಟ್ಯಾಧಿಪತಿಯ ಕೊಲೆಯ ಸುತ್ತ ಹೆಣೆದ ಮರ್ಡರ್‌ – ಮಿಸ್ಟರಿಯಲ್ಲಿ ವಿದ್ಯಾ ಡಿಟೆಕ್ಟೀವ್‌ ‘ಮೀರಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಥಿಯೇಟರ್‌ನಲ್ಲಿ ತೆರೆಕಾಣುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ ಥಿಯೇಟರ್‌ಗೆ ಬಂದಿದ್ದ ಅವರ ಬಯೋಪಿಕ್‌ ಸಿನಿಮಾ ‘ಶಕುಂತಲಾ ದೇವಿ’ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಸಹಜವಾಗಿಯೇ ವಿದ್ಯಾ ಬಾಲನ್‌ ‘ನೀಯತ್‌’ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

‘ನೀಯತ್‌’ ಚಿತ್ರದ ಬಹುಪಾಲು ಚಿತ್ರೀಕರಣ ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆದಿದೆ. ‘ಇದೊಂದು ಅಸಾಮಾನ್ಯ ಮತ್ತು ಚಮತ್ಕಾರಿ ಪಾತ್ರ. ಪ್ರತಿಭಾವಂತರೊಂದಿಗೆ ಕೆಲಸ ಮಾಡಿರುವ ಖುಷಿ ನನ್ನದು. ಚಿತ್ರದ ಮನಮೋಹಕ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡಿದರೆ ಹೆಚ್ಚು ಪರಿಣಾಮಕಾರಿ’ ಎನ್ನುವ ವಿದ್ಯಾ ತಮ್ಮ ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಿ ಎಂದು ಸಿನಿಪ್ರಿಯರಿಗೆ ಮನವಿ ಮಾಡುತ್ತಾರೆ. ಒಂಬತ್ತು ವರ್ಷಗಳ ಹಿಂದೆ ತೆರೆಕಂಡ ‘ಬಾಬ್ಬಿ ಜಾಸೂಸ್‌’ (2014) ಹಿಂದಿ ಚಿತ್ರದಲ್ಲಿ ಅವರು ಡಿಟೆಕ್ಟೀವ್‌ ಪಾತ್ರದಲ್ಲಿ ನಟಿಸಿದ್ದರು. ಆದರೆ ಎರಡೂ ಪಾತ್ರಗಳಿಗೆ ಭಿನ್ನತೆ ಇದೆ ಎನ್ನುತ್ತಾರವರು. ‘ನೀಯತ್‌ ಸಿನಿಮಾದ ಡೆಟೆಕ್ಟೀವ್‌ ತುಬಾ ಗ್ಲಾಮರಸ್‌. ಪುಸ್ತಕ, ನಂಬರ್‌, ಕೋಡಿಂಗ್‌ ಬಗ್ಗೆ ತಲೆಕೆಡಿಕೊಳ್ಳುತ್ತಿರುತ್ತಾಳೆ. ಒಟ್ಟಾರೆ ಇದೊಂದು ಕ್ಲಾಸಿಕ್‌ ಮರ್ಡರ್‌ ಮಿಸ್ಟರಿ!’ ಎನ್ನುತ್ತಾರವರು.

ಒಂದು ದೊಡ್ಡ ಬ್ರೇಕ್‌ನ ನಂತರ ಬಾಲಿವುಡ್‌ಗೆ ಮರಳಿದ ವಿದ್ಯಾ ಬಾಲನ್‌ ಮಹಿಳಾ ಪ್ರಧಾನ ಸಿನಿಮಾ, ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ‘ಮಿಷನ್‌ ಮಂಗಲ್‌’ ಸಿನಿಮಾದಲ್ಲೂ ಅವರು ಯಶಸ್ಸು ಕಂಡಿದ್ದರು. ಸದ್ಯ ತಮ್ಮ ನಟನಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ನಟಿ ವೆಬ್‌ ಸಿರೀಸ್‌ಗಳಲ್ಲೂ ನಟಿಸುತ್ತಿದ್ದಾರೆ. ‘ನೀಯತ್‌’ ಫಸ್ಟ್‌ಲುಕ್‌, ಸಾಂಗ್‌ ಮತ್ತು ಟ್ರೈಲರ್‌ ಅನ್ನು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿರುವ ನಟಿ, ‘A track that will leave you questioning sabki Neeyat!’ ಎಂದು ಬರೆದಿದ್ದಾರೆ.

ಚಿತ್ರದ ಕ್ಯಾನ್ವಾಸ್‌ ದೊಡ್ಡದಾಗಿದ್ದು ತಾರಾಬಳಗವೂ ದೊಡ್ಡದಿದೆ. ರಾಮ್‌ ಕಪೂರ್‌, ರಾಹುಲ್ ಬೋಸ್‌, ನೀರಜ್‌ ಕಬಿ, ಶಹಾನಾ ಗೋಸ್ವಾಮಿ, ಅಮೃತ ಪುರಿ, ದೀಪನ್ವಿತಾ ಶರ್ಮಾ, ನಿಕಿ ವಾಲಿಯಾ, ಶಶಾಂಕ್‌ ಅರೋರಾ, ಪ್ರಜಾಕ್ತಾ ಕೋಲಿ ಮತ್ತು ದಾನೇಶ್‌ ರಜ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನು, ಪ್ರಿಯಾ ವೆಂಕಟರಾಮನ್, ಅದ್ವೈತ ಕಲಾ ಮತ್ತು ಗೀರ್ವಾಣಿ ಧ್ಯಾನಿ ಚಿತ್ರಕಥೆ ರಚಿಸಿದ್ದು, ಕೌಸರ್ ಮುನೀರ್ ಸಂಭಾಷಣೆ ಬರೆದಿದ್ದಾರೆ. ವಿಕ್ರಮ್ ಮಲ್ಹೋತ್ರಾ ಅವರ Abundantia ಎಂಟರ್‌ಟೇನ್‌ಮೆಂಟ್‌ ಚಿತ್ರವನ್ನು ನಿರ್ಮಿಸಿದೆ.

LEAVE A REPLY

Connect with

Please enter your comment!
Please enter your name here