ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸೀಮಾ ಡಿಯೋ (83 ವರ್ಷ) ಅಗಲಿದ್ದಾರೆ. ‘ಆನಂದ್‌’, ‘ಕೋಶಿಶ್‌’, ‘ಕೋರಾ ಕಾಗಝ್‌’ ಸೇರಿದಂತೆ ಸುಮಾರು 80 ಸಿನಿಮಾಗಳಲ್ಲಿ ಸೀಮಾ ಅಭಿನಯಿಸಿದ್ದಾರೆ.

‘ಆನಂದ್‌’, ‘ಕೋಶಿಶ್‌’, ‘ಕೋರಾ ಕಾಗಝ್‌’ ಸಿನಿಮಾಗಳ ಮೂಲಕ ಸಿನಿಪ್ರಿಯರಿಗೆ ಚಿರಪರಿಚಿತರಾಗಿದ್ದ ನಟಿ ಸೀಮಾ ಡಿಯೊ (83 ವರ್ಷ) ಇಂದು ಅಗಲಿದ್ದಾರೆ. ಅವರ ಪುತ್ರ, ಚಿತ್ರನಿರ್ದೇಶಕ ಅಭಿನಯ್‌ ಡಿಯೊ ಈ ಕುರಿತು ಮಾಹಿತಿ ನೀಡಿ, ‘ಅಮ್ಮ Alzheimer ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ’ ಎಂದಿದ್ದಾರೆ. ಹತ್ತಾರು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸೀಮಾ ಮರಾಠಿ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದರು. ಜಾಗ್‌ಚ್ಯಾ ಪತಿವಾರ್‌, ವರದಕ್ಷಿಣಾ ಅವರ ಅತ್ಯಂತ ಜನಪ್ರಿಯ ಮರಾಠಿ ಸಿನಿಮಾಗಳು. ಸಂಧ್ಯಾ (2021) ಅವರು ಅಭಿನಯಿಸಿದ್ದ ಕೊನೆಯ ಮರಾಠಿ ಸಿನಿಮಾ.

2017ರಲ್ಲಿ ಕಾರ್ಯಕ್ರಮವೊಂದರಲ್ಲಿ ನಟಿ ಸೀಮಾ ಅವರು, ‘ಅಭಿನಯಕ್ಕೆ ಸಂಬಂಧಿಸಿದಂತೆ ರಾಜಾ ಪರಾಂಜಪೆ ನನ್ನ ಗುರುಗಳು. ಸಹಜ ನಟನೆಯನ್ನು ನಾನು ಕಲಿತದ್ದೇ ಅವರಿಂದ’ ಎಂದು ಸ್ಮರಿಸಿದ್ದರು. ಸೀಮಾ ಅವರ ಪತಿ, ನಟ ರಮೇಶ್‌ ಡಿಯೊ 2022ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 2011ರಲ್ಲಿ The Indian Express ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ನಟ ರಮೇಶ್‌ ಡಿಯೊ, ‘ಸೀಮಾ ಬದುಕಿಗೆ ಬಂದಾಗಿನಿಂದ ನಾನು ಅದೃಷ್ಟಶಾಲಿಯಾದೆ. ಲೋಕಲ್‌ ಟ್ರೈನ್‌ನಲ್ಲಿ ಮೊದಲ ಬಾರಿ ಆಕೆಯನ್ನು ಭೇಟಿ ಮಾಡಿದ್ದು. ಈ ಭೇಟಿ ಸ್ನೇಹಕ್ಕೆ ತಿರುಗಿ ಮುಂದೆ ಪ್ರೀತಿಯಾಗಿ ಬದಲಾಗಿ ಸತಿ – ಪತಿಯಾದೆವು’ ಎಂದಿದ್ದರು. 1963ರಲ್ಲಿ ರಮೇಶ್‌ – ಸೀಮಾ ವಿವಾಹವಾಗಿದ್ದರು.

ಚಿತ್ರನಿರ್ದೇಶಕ ಅಭಿನಯ್‌ ಡಿಯೊ ನಾಲ್ಕು ವರ್ಷಗಳ ಹಿಂದೆ ತಮ್ಮ ಪೋಷಕರಾದ ರಮೇಶ್‌ ಡಿಯೊ – ಸೀಮಾ ಡಿಯೊ ಮದುವೆ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಇಲ್ಲಿದೆ..

https://twitter.com/AbhinayDeo/status/1145547769010163712?ref_src=twsrc%5Etfw%7Ctwcamp%5Etweetembed%7Ctwterm%5E1145547769010163712%7Ctwgr%5E2451416a776c1acabc646882c7c828e09e6712fd%7Ctwcon%5Es1_c10&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FAbhinayDeo2Fstatus2F1145547769010163712widget%3DTweet

LEAVE A REPLY

Connect with

Please enter your comment!
Please enter your name here