ಶ್ವಾನಗಳ ಸಿನಿಮಾ ಎಂದೇ ಆರಂಭದಿಂದಲೂ ಸುದ್ದಿಯಲ್ಲಿದ್ದ ‘ವಾಲಟ್ಟಿ’ ಮಲಯಾಳಂ ಸಿನಿಮಾ ನಾಳೆ (ಜುಲೈ 14) ತೆರೆಕಾಣುತ್ತಿದೆ. ಕನ್ನಡದ ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆ KRG ಸ್ಟುಡಿಯೋಸ್ ರಿಲೀಸ್ ರೈಟ್ಸ್ ಪಡೆದುಕೊಂಡಿದೆ. ಜುಲೈ 21ರಂದು ಕನ್ನಡ ಡಬ್ಬಿಂಗ್ ಅವತರಣಿಕೆ ತೆರೆಕಾಣಲಿದೆ.
ಬಹು ನಿರೀಕ್ಷೆ ಹುಟ್ಟುಹಾಕಿರುವ ‘ವಾಲಟ್ಟಿ’ – Tale of Tails ಮಲಯಾಳಂ ಸಿನಿಮಾ ನಾಳೆ ತೆರೆಕಾಣುತ್ತಿದೆ. ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಚಿತ್ರದಲ್ಲಿ ಹೃದಯ ಬೆಚ್ಚಗಾಗಿಸುವ ಎಲಿಮೆಂಟ್ಸ್ ಇವೆ ಎಂದು ನಿರ್ದೇಶಕ ದೇವನ್ ಹೇಳುತ್ತಾರೆ. ಚಿತ್ರದಲ್ಲಿ ಒಟ್ಟು 9 ನಾಯಿಗಳಿದ್ದು, ಇವುಗಳಿಗೆ ಸತತ 2 ವರ್ಷ ಆಕ್ಟಿಂಗ್ ತರಬೇತಿ ನೀಡಲಾಗಿದೆ. ಮುಂದಿನ ವಾರ ಜುಲೈ 21ರಂದು ಕನ್ನಡ ಡಬ್ಬಿಂಗ್ ಅವತರಣಿಕೆ ಬಿಡುಗಡೆಯಾಗಲಿದೆ. ‘ರತ್ನನ್ ಪ್ರಪಂಚ’ ಸಿನಿಮಾ ಖ್ಯಾತಿಯ ಚಿತ್ರನಿರ್ದೇಶಕ ರೋಹಿತ್ ಪದಕಿ ಡಬ್ಬಿಂಗ್ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ಅಂಗಾಮಲಿ ಡೈರೀಸ್’, ‘ಹೋಮ್’ ಸಿನಿಮಾಗಳನ್ನು ಮಾಡಿ ಹೊಸ ರೀತಿಯ ಸಿನಿಮಾಗಳಿಗೆ ಬುನಾದಿ ಹಾಡಿದ್ದ ವಿಜಯ್ ಬಾಬು ‘ವಾಲಟ್ಟಿ’ ಚಿತ್ರವನ್ನು ಮಲಯಾಳಂನಲ್ಲಿ ಪ್ರಸೆಂಟ್ ಮಾಡುತ್ತಿದ್ದಾರೆ. ಜುಲೈ 21ರಂದು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ತೆರಕಾಣಲಿದೆ. ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ವಿಶ್ವದಾದ್ಯಂತ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಪಡೆದಿದೆ.