ಆಸ್ಕರ್‌ ಪುರಸ್ಕೃತ ಸಿನಿಮಾ ತಂತ್ರಜ್ಞ ರಸೂಲ್‌ ಪೂಕುಟ್ಟಿ ನಿರ್ದೇಶನದ ‘ಒಟ್ಟ’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಖ್ಯಾತ ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ಟೀಸರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅರ್ಜುನ್‌ ಅಶೋಕನ್‌, ಆಸಿಫ್‌ ಅಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.

‘ಸ್ಲಂಡಾಗ್‌ ಮಿಲಯನೇರ್‌’ ಇಂಗ್ಲಿಷ್‌ ಚಿತ್ರದ ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ ಆಸ್ಕರ್‌ ಪುರಸ್ಕಾರ ಪಡೆದವರು ರಸೂಲ್‌ ಪೂಕುಟ್ಟಿ. ಅವರ ನಿರ್ದೇಶನದ ‘ಒಟ್ಟ’ ಮಲಯಾಳಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಸೂಲ್‌ ಆಪ್ತ, ಖ್ಯಾತ ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಅರ್ಜುನ್‌ ಅಶೋಕನ್‌ ಮತ್ತು ಆಸಿಫ್ ಅಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಪೋಷಕರಿಂದ ಸರಿಯಾದ ಪ್ರೀತಿ ಮತ್ತು ವಾತ್ಸಲ್ಯ ಸಿಗದೆ ಯುವಕರು ಮನೆಗಳಿಂದ ಓಡಿ ಹೋಗಿ ದಿನನಿತ್ಯದ ಬದುಕು ಸಾಗಿಸಲು ಸಾಧ್ಯವಾಗದೆ ಪೇಚಾಡುತ್ತಾ ನೋವುಣ್ಣುವ ಮನಕಲುಕುವ ಕಥಾಹಂದರ ಚಿತ್ರದ್ದು. ಆ ಇಬ್ಬರು ಹುಡುಗರ ದುಃಖದ ಪರಿಸ್ಥಿತಿಯನ್ನು ಚಿತ್ರದ ಟೀಸರ್ ತೋರಿಸಿದೆ.

ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಸತ್ಯರಾಜ್, ರೋಹಿಣಿ, ಇಂದ್ರಜಿತ್ ಸುಕುಮಾರನ್, ಇಂದ್ರನ್ಸ್, ಆದಿಲ್ ಹುಸೇನ್, ದಿವ್ಯಾ ದತ್ತಾ, ಜಾಫರ್ ಇಡುಕ್ಕಿ ಸೇರಿದಂತೆ ಪ್ರತಿಭಾವಂತರ ಕಲಾವಿದರು ಅಭಿನಯಿಸಿದ್ದಾರೆ. ಪೂಕುಟ್ಟಿ ಅವರ ಸಹೋದರ ಬೈಜು ಪೂಕುಟ್ಟಿ ಮತ್ತು ನಟಿ ಜಲಜಾ ಅವರ ಮಗಳು ದೇವಿ ನಾಯರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್ ಹರಿಹರನ್ ಅವರ ‘Runaway Children’ ಕೃತಿಯನ್ನು ಆಧರಿಸಿದ ಚಿತ್ರವಿದು. ಈ ಪುಸ್ತಕ ಭಾರತದಲ್ಲಷ್ಟೇ ಅಲ್ಲದೇ ಗಡಿಯಾಚೆಗೂ ಸಂಚಲನ ಮೂಡಿಸಿತ್ತು. Resul Pookutty Productions ಬ್ಯಾನರ್‌ ಅಡಿ ರಸೂಲ್ ಪೂಕುಟ್ಟಿ ಮತ್ತು ಹರಿಹರನ್ ನಿರ್ಮಾಣ ಮಾಡಿದ್ದಾರೆ. ಎಂ ಜಯಚಂದ್ರನ್ ಸಂಗೀತ, ರಫೀಕ್ ಅಹಮದ್ ಸಾಹಿತ್ಯ, ಅರುಣ್ ವರಮ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಅಕ್ಟೋಬರ್‌ಗೆ ‘ಒಟ್ಟ’ ತೆರೆಗೆ ಬರಲಿದೆ.

Previous articleಧನುಷ್‌ – ರಶ್ಮಿಕಾ ಮಂದಣ್ಣ ಸಿನಿಮಾ ತಂಡಕ್ಕೆ ನಾಗಾರ್ಜುನ್‌ ಎಂಟ್ರಿ
Next articleತಮಿಳಿಗೆ ರಿಮೇಕ್‌ ಆಗಲಿದೆ ‘ಕೌಸಲ್ಯ ಸುಪ್ರಜಾ ರಾಮ’ | ಶಶಾಂಕ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here