ನಿತ್ಯಾ ಮೆನನ್ ಮತ್ತು ಶರಾಫುದ್ದೀನ್ ನಟನೆಯ ‘ಮಾಸ್ಟರ್ ಪೀಸ್’ ವೆಬ್ ಸರಣಿ ಸೆಪ್ಟೆಂಬರ್ 8ರಿಂದ Disneyplus Hotstarನಲ್ಲಿ ಸ್ಟ್ರೀಮ್ ಆಗಲಿದೆ. ಶ್ರೀಜಿತ್ ನಿರ್ದೇಶನದ ಸರಣಿಯಲ್ಲಿ ಕುಟುಂಬವೊಂದರ ಎರಡು ತಲೆಮಾರಿನ ವ್ಯಕ್ತಿಗಳ ಮಧ್ಯೆಯ ಸಂಘರ್ಷ, ತಾಕಲಾಟವೇ ವಸ್ತು. ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿಯೂ ಸರಣಿ ಸ್ಟ್ರೀಮ್ ಆಗಲಿದೆ.
ಶ್ರೀಜಿತ್ ನಿರ್ದೇಶನದ ‘ಮಾಸ್ಟರ್ ಪೀಸ್’ ವೆಬ್ ಸರಣಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ನಿತ್ಯಾ ಮೆನನ್ ಮತ್ತು ಶರಾಫುದ್ದೀನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಸರಣಿಯು ಎರಡು ತಲೆಮಾರುಗಳ ಕಥಾಹಂದರ ಹೊಂದಿದೆ. ಪೀಳಿಗೆಯ ಅಂತರವನ್ನು ನಿವಾರಿಸಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಮನೋರಂಜನಾತ್ಮಕವಾಗಿ ಹೇಳುವುದು ಉದ್ದೇಶ. ಎರಡರಿಂದ ಮೂರು ಗಂಟೆಗಳಲ್ಲಿ ಕಥೆಯನ್ನು ಹೇಳುವ ಚಲನಚಿತ್ರಕ್ಕಿಂತ ವೆಬ್ ಸರಣಿಗಳು ನಿರ್ದೇಶಕರಿಗೆ ಸಾಕಷ್ಟು ಸಮಯವನ್ನು ನೀಡುತ್ತವೆ. ಸರಣಿಗಳನ್ನು ರಚಿಸುವಾಗ ಪ್ರತಿ ಸಂಚಿಕೆಯು ಸ್ವತಂತ್ರವಾಗಿರಬೇಕು ಮತ್ತು ದೊಡ್ಡ ಕಥೆಯ ಭಾಗವಾಗಿರಬೇಕು. ಇದಲ್ಲದೆ ಮುಂದಿನ ಸಂಚಿಕೆಯನ್ನು ವೀಕ್ಷಿಸಲು ಮತ್ತು ವೀಕ್ಷಕರನ್ನು ಸೆಳೆಯಲು ಒಂದು ಗಮನಾರ್ಹ ಕಥೆ ಇರಬೇಕು’ ಎನ್ನುತ್ತಾರೆ ನಿರ್ದೇಶಕ ಶ್ರೀಜಿತ್. ಸರಣಿಯಲ್ಲಿ ನಿತ್ಯಾ ಮತ್ತು ಶರಾಫ್ ಯುವ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ನಿತ್ಯಾ ಪೋಷಕರಾಗಿ ಅಶೋಕನ್ ಮತ್ತು ಶಾಂತಿ ಕೃಷ್ಣ, ಶರಾಫ್ ಪೋಷಕರಾಗಿ ರೆಂಜಿ ಪಣಿಕ್ಕರ್ ಮತ್ತು ಮಾಲಾ ಪಾರ್ವತಿ ಇದ್ದಾರೆ. ಸರಣಿಯು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಸೆಪ್ಟೆಂಬರ್ 8ರಿಂದ Disneyplus Hotstarನಲ್ಲಿ ಸ್ಟ್ರೀಮ್ ಆಗಲಿದೆ.
Can't keep calm cause a Master "Peace" is brewing. #HotstarSpecials #MasterPeace #ComingSoon pic.twitter.com/1ppEekDPv2
— Disney+ Hotstar (@DisneyPlusHS) August 14, 2023