‘ದೃಶ್ಯಂ’ ಸಿನಿಮಾ ಖ್ಯಾತಿಯ ಜೀತು ಜೋಸೆಫ್‌ ನಿರ್ದೇಶನದ ‘ನೆರೂ’ ಮಲಯಾಳಂ ಸಿನಿಮಾ ಡಿಸೆಂಬರ್‌ 21ರಂದು ತೆರೆಕಾಣಲಿದೆ. ಮೋಹನ್‌ ಲಾಲ್‌, ಪ್ರಿಯಾಮಣಿ, ಜಗದೀಶ್, ಸಿದ್ದಿಕ್, ಅನಸ್ವರ ರಾಜನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮೋಹನ್‌ಲಾಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ನೆರೂ’ (Neru) ಕೋರ್ಟ್‌ರೂಮ್ ಡ್ರಾಮಾ ಮಲಯಾಳಂ ಸಿನಿಮಾ ಡಿಸೆಂಬರ್ 21, 2023ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ‘ದೃಶ್ಯಂ’ ನಿರ್ದೇಶಕ ಜೀತು ಜೋಸೆಫ್ ಈ ಸಿನಿಮಾ ನಿರ್ದೇಶಿಸಿದ್ದು, ಸಂತಿ ಮಾಯಾದೇವಿ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಮಣಿ ನಟಿಸಿದ್ದು, ಜಗದೀಶ್, ಸಿದ್ದಿಕ್ ಮತ್ತು ಅನಸ್ವರ ರಾಜನ್, ಜಗದೀಶ್, ಸಿದ್ದಿಕ್ ಮತ್ತು ಗಣೇಶ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ’12th Man’ ಸಿನಿಮಾ ನಂತರ ಜೀತು ಮತ್ತು ಮೋಹನ್‌ಲಾಲ್‌ರ ಐದನೇ ಸಹಯೋಗದ ಸಿನಿಮಾ ಇದು.

13 ವರ್ಷಗಳ ಹಿಂದೆ ಸುರೇಶ್ ಗೋಪಿ ಅಭಿನಯದ ‘ಜನಕನ್’ ಚಿತ್ರದಲ್ಲಿ ಮೋಹನ ಲಾಲ್‌ ಅವರು ವಕೀಲರಾಗಿ ಕಾಣಿಸಿಕೊಂಡಿದ್ದರು. ಮೋಹನ್‌ಲಾಲ್ ಅಭಿನಯದ ‘ನೆರೂ’ ಚಿತ್ರವು ಪ್ರಭಾಸ್ ಅವರ ಆಕ್ಷನ್-ಥ್ರಿಲ್ಲರ್ ʼಸಲಾರ್ʼ ಮತ್ತು ಶಾರುಖ್ ಖಾನ್ ಅವರ ಕಾಮಿಡಿ ಡ್ರಾಮಾ ಹಿಂದಿ ಸಿನಿಮಾ ‘ಡುಂಕಿ’ಯೊಟ್ಟಿಗೆ ಬಿಡುಗಡೆಯಾಗಲಿದೆ. ಮೋಹನ್‌ಲಾಲ್ ಅಕ್ಟೋಬರ್‌ನಲ್ಲಿ ‘ಲೂಸಿಫರ್‌’ (Lucifer) ಸೀಕ್ವೆಲ್‌ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಮೊದಲ ಹಂತದ ಚಿತ್ರೀಕರಣವು ದೆಹಲಿ ಮತ್ತು ಲಡಾಖ್‌ನಲ್ಲಿ ನಡೆಯಲಿದೆ. ನಟ ತೆಲುಗು, ಮಲಯಾಳಂ ದ್ವಿಭಾಷಾ ಚಲನಚಿತ್ರ ‘ವೃಷಭ’ದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here