ಈ ಹಿಂದೆ ‘ಒಂದು ಶಿಕಾರಿಯ ಕಥೆ’ ಸಿನಿಮಾ ಮೂಲಕ ಗಮನಸೆಳೆದಿದ್ದ ಸಚಿನ್‌ ಶೆಟ್ಟಿ ‘ವಸಂತ ಕಾಲದ ಹೂಗಳು’ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಬಿಜಾಪುರ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು ಬಹುತೇಕ ಕಲಾವಿದರು ಅಲ್ಲಿಯವರೇ ಎನ್ನುವುದು ವಿಶೇಷ. ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದೆ.

2020ರಲ್ಲಿ ತೆರೆಕಂಡ ಪ್ರಮೋದ್‌ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಒಂದು ಶಿಕಾರಿಯ ಕಥೆ’ ಸಿನಿಮಾ ನಿರೂಪಣೆಯಿಂದ ಗಮನ ಸೆಳೆದಿತ್ತು. ಇದೊಂದು ಸಸ್ಪೆನ್ಸ್‌ – ಥ್ರಿಲ್ಲರ್‌. ಈ ಚಿತ್ರ ನಿರ್ದೇಶಿಸಿದ್ದ ಸಚಿನ್‌ ಶೆಟ್ಟಿ ಈ ಬಾರಿ ಬೇರೆ ಜಾನರ್‌ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಟೀನೇಜ್‌ ಲವ್‌ ಸ್ಟೋರಿ ‘ವಸಂತ ಕಾಲದ ಹೂಗಳು’ ಚಿತ್ರವನ್ನು ಅವರು ತೆರೆಗೆ ತರುತ್ತಿದ್ದಾರೆ. ಇಲ್ಲಿ ಕ್ಲಾಸಿಕ್‌ ನಿರೂಪಣೆ ಇರಲಿದೆ ಎನ್ನುತ್ತಾರವವರು. ಚಿತ್ರದ ನಾಯಕ ಸಚಿನ್ ರಾಠೋಡ್, ನಾಯಕಿ ರಾಧಾ ಭಗವತಿ ಮತ್ತು ನಿರ್ಮಾಪಕರು ಕೂಡ ಬಿಜಾಪುರದವರು. ಅದೇ ಜಿಲ್ಲೆಯ ಕನಮಡಿ ಗ್ರಾಮದಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು, ಆ ಭಾಗದ ಕಥೆಗಳು ಮುನ್ನೆಲೆಗೆ ಬರಬೇಕು ಎಂಬ ಕೂಗಿಗೆ ಈ ಚಿತ್ರ ಒಂದು ಸಣ್ಣ ಉತ್ತರವಾಗಬಹುದು.

ಕರಾವಳಿಯ ನಿರ್ದೇಶಕರು ತಮ್ಮ ಕತೆಯನ್ನು ಉತ್ತರ ಕರ್ನಾಟಕದ ಪರಿಸರದ ಹಿನ್ನೆಲೆಯ ಜೊತೆ ಹೇಳಲು ಹೊರಟಿರುವುದು ವಿಶೇಷ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಮುಂದೆ ಚಿತ್ರದ ಒಂದೊಂದೇ ವಿವರಗಳನ್ನು ಬಿಡುಗಡೆ ಮಾಡಲಿದೆ. ಸಿನಿಮಾವನ್ನು ಅಶೋಕ್ ರಾಠೋಡ್, ಸಿದ್ದು ರಾಸುರೆ ನಿರ್ಮಿಸುತ್ತಿದ್ದು, ಶಿವಶಂಕರ ನೂರಂಬಡ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಸಂಕಲನ, ಭರತ್ ಜನಾರ್ಧನ್ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here