ಕಾಲಿವುಡ್‌ನ ಖ್ಯಾತ ಹಾಸ್ಯನಟ ಯೋಗಿ ಬಾಬು ನಟನೆಯ ‘ಲಕ್ಕೀ ಮ್ಯಾನ್‌’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಾಲಾಜಿ ನಿರ್ದೇಶನದ ಸಿನಿಮಾ ಸೆಪ್ಟೆಂಬರ್‌ 1ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಚಿತ್ರನಿರ್ದೇಶಕರಾದ ಆರ್ಯ, ಕಾರ್ತೀಕ್‌ ಸುಬ್ಬರಾಜ್‌ ಮತ್ತು ಪಾ ರಂಜಿತ್‌ ಅವರು ‘ಲಕ್ಕೀ ಮ್ಯಾನ್‌’ ಟ್ರೈಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಕಾಲಿವುಡ್‌ನ ಜನಪ್ರಿಯ ಹಾಸ್ಯನಟ ಯೋಗಿ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮಿಳು ಚಿತ್ರವಿದು. ಟ್ರೈಲರ್‌ನಲ್ಲಿ ಯೋಗಿ ಬಾಬು ಅವರನ್ನು ಶೀರ್ಷಿಕೆಗೆ ವಿರುದ್ಧವಾಗಿ ‘ಅನ್ ಲಕ್ಕಿ’, ದುರದೃಷ್ಟವಂತ ವ್ಯಕ್ತಿ ಎನ್ನುವಂತೆ ತೋರಿಸಲಾಗಿದೆ. ತನ್ನ ಹೊಸ ಕಾರಿಗೆ ಪಾರ್ಕಿಂಗ್ ಸ್ಥಳವನ್ನು ಹುಡುಕುವಾಗ ಅನೇಕ ತೊಂದರೆಗಳನ್ನು ಎದುರಿಸುವ ಸನ್ನಿವೇಶಗಳು ಟ್ರೈಲರ್‌ನಲ್ಲಿ ಕಾಣಿಸುತ್ತವೆ. R J, ನಟ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರವಿದು. ವೀರಾ, ರಾಯಚಲ್ ರಬೆಕ್ಕಾ, ಅಬ್ದುಲ್ ಲೀ, ಆರ್‌ ಎಸ್ ಶಿವಾಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೀನ್ ರೋಲ್ಡನ್ ಸಂಗೀತ, ಸಂದೀಪ್ ಕೆ ವಿಜಯ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್ 1ರಿಂದ Prime Videoದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Previous articleಸಚಿನ್‌ ಶೆಟ್ಟಿ ‘ವಸಂತ ಕಾಲದ ಹೂಗಳು’ | ತೆರೆ ಮೇಲೆ ಉತ್ತರ ಕರ್ನಾಟಕದ ಪ್ರತಿಭೆಗಳು
Next articleಅದಾ ಶರ್ಮಾ ‘CD’ ತೆಲುಗು ಸಿನಿಮಾ | ಕೃಷ್ಣ ಅನ್ನಂ ನಿರ್ದೇಶನದ ಸೈಕಲಾಜಿಕಲ್‌ ಥ್ರಿಲ್ಲರ್‌

LEAVE A REPLY

Connect with

Please enter your comment!
Please enter your name here